ಬೆಂಗಳೂರು, – ದೇಶದೆಲ್ಲೆಡೆ ಹೊಸ ಸಂಚಲನ ಸೃಷ್ಟಿಸಿರುವ ಯುವ ನೇತಾರ ಸಮಾಜವಾದಿ ಪಕ್ಷದ ರಾಷ್ಟ್ರೀಯ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ಪಕ್ಷದ ರಾಜ್ಯ ಮುಖಂಡ ಚಂದ್ರೇಗೌಡ ತಿಳಿಸಿದ್ದಾರೆ. ದೇಶದ ಹೊಸ ಶಕ್ತಿಗೆ ನಾಂದಿ ಹಾಡಲಿರುವ ನಾಳಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕರಿಸುತ್ತಿದ್ದು , ಅದಕ್ಕೆ ಸಾಕ್ಷಿಯಾಗಲು ಅಖಿಲೇಶ್ ಪಾಲ್ಗೊಳ್ಳುತ್ತಿದ್ದಾರೆ.

RELATED ARTICLES  ಚನ್ನಣ್ಣನವರ್ ಗೆ ಸಿಂಹ ಟಾಂಗ್

ರಾಜ್ಯದಲ್ಲಿ ಸಮಾಜವಾದಿ ಪಕ್ಷದ ನೆಲೆ ಇದ್ದು , ಅದನ್ನು ಸಂಘಟಿಸಿ ಬಲಿಷ್ಠಪಡಿಸುವ ಅಗತ್ಯವಿದೆ. ಇದಕ್ಕಾಗಿ ನಮ್ಮ ರಾಷ್ಟ್ರೀಯ ನಾಯಕರು ಮುತುವರ್ಜಿ ವಹಿಸಿದ್ದಾರೆ. ಮುಂದಿನ ಬಿಬಿಎಂಪಿ ಚುನಾವಣೆ ವೇಳೆಗೆ ಪಕ್ಷವನ್ನು ಬಲಪಡಿಸಲಾಗುವುದು. ಇದಕ್ಕಾಗಿ ನಾಳೆ ಪಕ್ಷದ ನಾಯಕರು ಕೆಲವು ಸಲಹೆ -ಸೂಚನೆಗಳನ್ನು ಕೂಡ ನೀಡಲಿದ್ದಾರೆ ಎಂದು ಹೇಳಿದರು.

RELATED ARTICLES  ಬೀದಿ ನಾಯಿಗಳ ಹಾವಳಿ: ಕಾರವಾರದ ಜನರಲ್ಲಿ ಹೆಚ್ಚುತ್ತಿದೆ ಆತಂಕ!