ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಾಡಿನ ವಿವಿಧ ಸಂತರುಗಳಿಂದ ಲೋಕಕಲ್ಯಾಣಾರ್ಥ ಶ್ರೀ ಆತ್ಮಲಿಂಗ ಪೂಜೆ ಹಾಗು ಸಂತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ “ಗೋಕರ್ಣ ಗೌರವ” ದಿನಾಂಕ 09-01-2017 ಸೋಮವಾರ ಶುಭಾರಂಭಗೊಂಡಿತ್ತು. ಶ್ರೀಮದ್ ಗಿರಿರಾಜಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಸೂರ್ಯಸಿಂಹಾಸನ ಮಠಾಧೀಶ . ಶ್ರೀಶೈಲ ಆಂಧ್ರಪ್ರದೇಶ ಇವರಿಂದ ಈ ವಿನೂತನ , ವಿಶೇಷ ಕಾರ್ಯಕ್ರಮ ಪ್ರಾರಂಭಗೊಂಡಿತ್ತು .
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಆತ್ಮಲಿಂಗ ಸನ್ನಿಧಿಯಾದ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಪ್ರತಿದಿನ ಓರ್ವ ಪೂಜ್ಯ ಸಂತರನ್ನು ಆಮಂತ್ರಿಸಿ ಲೋಕಕಲ್ಯಾಣಕ್ಕಾಗಿ ಅವರಿಂದ ಶ್ರೀ ಆತ್ಮಲಿಂಗ ಪೂಜೆ, ಸುವರ್ಣ ನಾಗಾಭರಣ ಪೂಜೆ ಸಲ್ಲಿಸಿ, ಪೂಜ್ಯ ಸಂತರಿಗೆ ಗೌರವ ಸಮರ್ಪಣೆ ಮಾಡುವ ಈ ಕಾರ್ಯಕ್ರಮವು ಪ್ರಾರಂಭವಾಗಿ ದಿನಾಂಕ 23-05-2018 ರಂದು 500 ನೇ ದಿನ ಪೂರೈಸುತ್ತಿದೆ.

RELATED ARTICLES  ಬೈಕ್ ಹಾಗೂ ಸೈಕಲ್ ನಡುವೆ ಅಪಘಾತ : ಬೈಕ್ ಸವಾರ ಸಾವು.

ಆಗಮಿಸಿದ ಎಲ್ಲ ಸಂತರು ತಮ್ಮ ಶಿಷ್ಯ ಜನತೆಯ ಒಳಿತನ್ನು ಹಾಗೂ ಲೋಕಕಲ್ಯಾಣವನ್ನು ಸಂಕಲ್ಪಿಸಿ, ಪ್ರಾತಃ ಕಾಲದಲ್ಲಿ ಆತ್ಮಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಮೃತ, ನವಧಾನ್ಯ ಅಭಿಷೇಕ, ರುದ್ರಾಭಿಷೇಕ , ಬಿಲ್ವಾರ್ಚನೆ , ಮಂಗಳಾರತಿ ಹಾಗೂ ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿ , ಶಿವಸಂಪ್ರೀತಿಯನ್ನು ಪಡೆದು, ಈ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ತಮ್ಮ ಅತಿ ಸಂತಸವನ್ನು ವ್ಯಕ್ತಪಡಿಸಿ ಆಶೀರ್ವದಿಸುತ್ತಿದ್ದಾರೆ.

RELATED ARTICLES  ದಿವಂಗತ ಕಾಶೀನಾಥ ನಾಯಕರಿಗೆ ನಾಳೆ ಶೃದ್ಧಾಂಜಲಿ ಸಭೆ

ಜಗದೀಶ್ವರನ ಅನುಗ್ರಹ, ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂಕಲ್ಪ , ಹಾಗು ಸಾಧು-ಸಂತರ ಹಾರೈಕೆಗಳಿಂದಾಗಿ, ಶ್ರೀ ಕ್ಷೇತ್ರ ಉಪಾಧಿವಂತ ಮಂಡಳದ ಸಹಯೋಗದಲ್ಲಿ ಈ ಕಾರ್ಯಕ್ರಮವು ನಿರಂತರವಾಗಿ ನಡೆದು, 23-05-2018 ರಂದು 500ನೇ ದಿನ ಪೂರೈಸುತ್ತಿದೆ. ಅಂದು ಬೆಳಿಗ್ಗೆ 10.30 ಘಂಟೆಗೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಚಂದ್ರಶಾಲೆಯಲ್ಲಿ ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಲಾಗಿದೆ. ತಾವು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕಾಗಿ ಹೃತ್ಪೂರ್ವಕ ಆಮಂತ್ರಣ .