ಗುರು ಮಾರ್ಗದರ್ಶನ ಮಾಡಬಾರದೆಂದಾದರೆ ಮತ್ತೆ ಇನ್ನಾರು ಮಾಡಬೇಕು? ಶಿಷ್ಯನ ಜವಾಬುದಾರಿ ಗುರುವಿನ ಮೇಲಿರುತ್ತದೆ. ಹೆಜ್ಜೆ ಹೆಜ್ಜೆಗೂ ಹೇಳಬೇಕಾಗುತ್ತದೆ. ಶಿಷ್ಯನು ಅವನ್ನು ಅನುಗ್ರಹವೆಂದು ಮನಸಾರೆ ಒಪ್ಪಿಕೊಂಡು, ಕಹಿಹೊಂದದೇ, ಆನಂದದಿಂದ ಅಪ್ಪಣೆಯ ಪಾಲನೆಯನ್ನು ಏನೂ ತಕರಾರು ಇಲ್ಲದೇ ಮಾಡಬೇಕು. ಅದರಲ್ಲೇ ಅವರ ಹಿತ ಇದೆ.

(ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರಿಗೆ ಬರೆದ ಪತ್ರದ ಎರಡನೆಯ ಭಾಗ)

—— ‘ಶ್ರೀಧರ ಪತ್ರಸಂದೇಶ’ – ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

                         

೪. ಚಿ. ದಿನಕರನಿಗೆ ಕಳುಹಿಸಿದ ಪತ್ರ ಕೇವಲ ನಿನ್ನೊಬ್ಬನನ್ನೇ ಲಕ್ಷದಲ್ಲಿಟ್ಟು ಅಲ್ಲ. ಅದರಲ್ಲಿ ಸರ್ವ ಸಾಮಾನ್ಯ ನಿಯಮ ತಿಳಿಸಿದ್ದೆ. ನಿನ್ನಿಂದ ಆ ರೀತಿ ತಕರಾರು ನನ್ನ ಹತ್ತಿರ ಬಂದಿಲ್ಲ ಎಂಬುದೂ ಅಷ್ಟೇ ನಿಜ. ಚಿ. ಚಂದ್ರಶೇಖರನೂ ಆಸನ – ಪ್ರಾಣಾಯಾಮ ಮಾಡುತ್ತಾನೆ. ರಾಮಚಂದ್ರ ಜೋಷಿ, ಕರಮರಕರದ್ವಯರು ಈ ಎಲ್ಲಾ ಸಾಧಕಜನರೂ ತರುಣರೇ ಮತ್ತು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ನಮಸ್ಕಾರ, ಆಸನ, ಜಪ ಮೊದಲಾದ ಅನುಷ್ಠಾನ ಮಾಡುವವರೇ ಇದ್ದಾರೆ. ಆ ಪತ್ರ ಯಾರಿದೇ ಒಬ್ಬರ ತಕರಾರು ಕೇಳಿ ಬರೆದದ್ದಲ್ಲ. ಈ ಮೇಲಿನ ಎಲ್ಲ ಸಾಧಕರನ್ನೂ ಬಿಟ್ಟು,  ಬೇರೆಯವರೇ ನನಗೆ ಸೂಚನೆ ಕೊಟ್ಟರು ಮತ್ತು ಎಂದೂ ತಪ್ಪಿಯೂ ಕೂಡ ಯಾರಿಂದಲೂ ಹಿಂದೆ -ಮುಂದೆ ಮತ್ತೆ ಹಾಗಾಗಬಾರದು ಎಂದೇ ಸೂಚನೆ ಬರೆದೆ. ಗುರು ಮಾರ್ಗದರ್ಶನ ಮಾಡಬಾರದೆಂದಾದರೆ ಮತ್ತೆ ಇನ್ನಾರು ಮಾಡಬೇಕು? ಶಿಷ್ಯನ ಜವಾಬುದಾರಿ ಗುರುವಿನ ಮೇಲಿರುತ್ತದೆ. ಹೆಜ್ಜೆ ಹೆಜ್ಜೆಗೂ ಹೇಳಬೇಕಾಗುತ್ತದೆ. ಶಿಷ್ಯನು ಅವನ್ನು ಅನುಗ್ರಹವೆಂದು ಮನಸಾರೆ ಒಪ್ಪಿಕೊಂಡು, ಕಹಿಹೊಂದದೇ, ಆನಂದದಿಂದ ಅಪ್ಪಣೆಯ ಪಾಲನೆಯನ್ನು ಏನೂ ತಕರಾರು ಇಲ್ಲದೇ ಮಾಡಬೇಕು. ಅದರಲ್ಲೇ ಅವರ ಹಿತ ಇದೆ. ನಿನಗೆ ಸಂಶಯ ಬಂದಿದ್ದಲ್ಲಿ ‘ನಾನು ತಕರಾರು ಮಾಡಿಲ್ಲ’ ಎಂದು ಬರೆದು ತಿಳಿಸು ಅಥವಾ ಈ ಪತ್ರ ತೋರಿಸು ಅಂದರೆ ನಿನ್ನ ವಿಷಯದಲ್ಲಿನ ಆದ ತಪ್ಪು ತಿಳುವಳಿಕೆ ದೂರವಾಗುವದು. ಹೇಳಿದವರು ನಿನ್ನ ಹೆಸರನ್ನೂ ತೆಗೆದುಕೊಂಡಿಲ್ಲ.

RELATED ARTICLES  ಮನೆ ಕಳ್ಳತನ ಪ್ರಕರಣ ,ಇಬ್ಬರು ಆರೋಪಿಗಳ ಬಂಧನ

ಈಗಿತ್ತಲಾಗಿ ಮಧುಕರಿ ಬಹಳ ಕಡಿಮೆ ಹಾಕಲ್ಪಡುತ್ತದೆ. ಕುಟಿಯ ನೈವೇದ್ಯವೂ ನಿಂತಿದೆ. ಇದರಿಂದಾಗಿ ತರುಣ ಸಾಧಕರಿಗೆ ತೊಂದರೆಯಾಗುತ್ತದೆ ಎಂದು ಸರ್ವಸಾಮಾನ್ಯವಾಗಿ ಹೇಳಿದೆ ಮತ್ತು ಸರ್ವಸಾಮಾನ್ಯವಾಗೇ ಬರೆದೆ. ಕನಿಷ್ಠ ಮಂಡಳದಿಂದ ಒಂದು ಭಕ್ಕರಿ, ಒಂದು ದೊಡ್ಡ ಮುದ್ದೆ ನಂಜಲಿಕ್ಕೆ- ಯಾವ ಕಾಯಿಪಲ್ಲೆ ಮಾಡಿದ್ದಾರೋ – ಅದನ್ನು ಹಾಕಬೇಕು. ಮನೆಮಠ ಬಿಟ್ಟು ಬಂದವರ ಕಾಳಜಿ ನನಗೆ ತೆಗೆದುಕೊಳ್ಳುವದು ಬೇಡವೇ? ಎಲ್ಲರಿಗೂ ಒಳ್ಳೆಯ ಅನುಕೂಲತೆ ಇರಬೇಕು ಎಂದೇ ಭಕ್ತಜನರು ತಮ್ಮ-ತಮ್ಮ ಕೈಲಾದ ಸೇವೆ ಕಳುಹಿಸುತ್ತಾರೆ. ಹಾಗೆ ಯಾವುದರದ್ದೂ ಕೊರತೆಯಾಗುವದಿಲ್ಲ. ಯಾರ ಬಗ್ಗೆ ಬಂದಿದೆಯೋ ಅವರ ಬಗ್ಗೇ ಖರ್ಚು ಮಾಡಬೇಕು. ಮಂಡಳದವರಿಗೆ ಇದರ ಅರಿವು ಇದೆ.

RELATED ARTICLES  ಕುಮಟಾದಲ್ಲಿ ಅಂಗಡಿಕಾರರಿಗೆ ಹಾಗೂ ಕೆಲಸಗಾರರಿಗೆ ಕಡ್ಡಾಯ ಕೊರೋನಾ ಟೆಸ್ಟ್ ..!

೫. ಚಿ. ಲಕ್ಷ್ಮೀನಾರಾಯಣ ಗಂಗಕ್ಕನ ಹತ್ತಿರ ಮಾತನಾಡುತ್ತಾನೆ. ಚಿ. ಜಾನಕಿ ಮಾತ್ರ ಮಾತನಾಡುವದಿಲ್ಲ. ಇವರಿಬ್ಬರೂ ತಾಯಿ-ಮಗಳಂತಿದ್ದರು. ಯಾರೋ ಅಪಸ್ವಾರ್ಥದಿಂದ ಗಂಗಕ್ಕ ಮತ್ತು ಜಾನಕಿಯವರ ಮಧ್ಯೆ ಮನಸ್ಥಾಪ ತಂದಿದ್ದಾರೆ. ಸಿಟ್ಟಿನ ಭರದಲ್ಲಿ ‘ನಿನ್ನ ಮುಖ ತೋರಿಸಬೇಡ’ ಎಂದು ಗಂಗಕ್ಕ ಹೇಳಿದ್ದರಿಂದ ಜಾನಕಿ ಅವಳೊಂದಿಗೆ ಮಾತನಾಡುವದಿಲ್ಲ. ಸ್ವಲ್ಪ ದಿನಗಳಲ್ಲಿ ಸರಿಯಾಗುವದು. ಚಿ. ಲಕ್ಷ್ಮೀನಾರಾಯಣ ಮತ್ತು ಜಾನಕಿಯವರಿಗೆ ಕಾರಣವಿಲ್ಲದೇ ಅಪವಾದ ಕೇಳಬೇಕಾಯಿತು. ಛೀ – ಥೂ ಸಹಿಸಬೇಕಾಯಿತು. ಅದರ ಪರಿಣಾಮವಾಗಿ ಈಗ ಅವರು ಯಾರೊಂದಿಗೂ ಕೆಲಸದ ಹೊರತು ಮಾತನಾಡುವದಿಲ್ಲ. ಎರಡನೆಯದೆಂದರೆ ಚಿ. ಸರೋಜಿನಿಯ ಭಜನೆ ಮಧುರವಾಗಿರುತ್ತದೆ. ಅಂತಃಕರಣದಿಂದ ಹೇಳುತ್ತಾಳೆ. ಅವಳ ಧ್ವನಿಯೂ ಚೆನ್ನಾಗಿದೆ. ಅವಳ ಭಜನೆ ಕೇಳಲು ಬಹಳ ಜನರ ಗದ್ದಲ ಕೂಡಿ ಶ್ರೀಧರಕುಟಿಯಲ್ಲಿ ಬಡಬಡಿಕೆಯಾಗಬಾರದೆಂದು ಚಿ. ದಿನಕರನು ಅದನ್ನು ಬಂದು ಮಾಡಿದನೆಂದು ತಿಳಿದುಬಂತು.

                                               ಶ್ರೀಧರ