ಬೆಂಗಳೂರು; ವಿಧಾನಸಬಾ ಚುನಾವಣೆಯಲ್ಲಿ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚಿಸಿದರಹೂ ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಕೇವಲ ನಾಲ್ಕೇ ದಿನದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ.

RELATED ARTICLES  ಗುತ್ತಿಗೆ ಆಧಾರಿತ ಆರೋಗ್ಯ ಸಿಬ್ಬಂದಿಗಳಿಗೆ ಆರ್ಥಿಕವಾಗಿ ನೆರವಾದ ಶಾಸಕ ದಿನಕರ ಶೆಟ್ಟಿ

ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಬುಧವಾರ ಸಂಜೆ 4.30ಕ್ಕೆ ಬೆಂಗಳೂರಿನ ಶಕ್ತಿಸೌಧ ವಿಧಾನಸೌಧದ ಎದರು ಪ್ರಮಾಣವಚ ಸ್ವೀಕರಿಸುತ್ತಿದ್ದಾರೆ. ಇದರೊಂದಿಗೆ 10 ವರ್ಷಗಳ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಮರಳುತ್ತಿದೆ.

RELATED ARTICLES  ಭಾರತೀಯ ಆಸ್ಮಿತೆಯನ್ನು ಒಪ್ಪುವವರಲ್ಲಿ ಮತ ಯಾಚಿಸುವೆ : ಅನಂತ ಕುಮಾರ್ ಹೆಗಡೆ.

ಕುಮಾರಸ್ವಾಮಿಯವರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೂ ಕೂಡ ಸಂಪುಟ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಉಪಮುಖ್ಯಮಂತ್ರಿಯಾಗುವ ಅವರ ಬಹುದಿನಗಳ ಕನಸು ಇಂದು ನನಸಾಗಲಿದೆ.