ಕುಮಟಾ : ವೇದಗಳ ಮೂಲ, ಅದರ ಕರ್ತೃಗಳ ಕುರಿತು ನಮಗೆ ಅರಿವಿಲ್ಲದಿರಬಹುದು ಆದರೆ ವೇದಗಳ ಸಾರ,ಸತ್ವವನ್ನು ಅರಿತರೆ ಅದು ನಮ್ಮ ಬದುಕಿನಲ್ಲಿ ಹೊಸ ಭರವಸೆಯನ್ನು ,ಹೊಸ ಉತ್ಸಾಹವನ್ನುತುಂಬಬಲ್ಲುದು. ವೇದಗಳು ನಮ್ಮ ಬದುಕಿಗೆ ದಾರಿದೀಪ. ಹೆಗಡೆಯ ವಿಪ್ರ ಒಕ್ಕೂಟದಂತಹ ಸಂಘಟನೆಗಳು ಹೆಚ್ಚು ಹೆಚ್ಚು ವೇದ ಸಂಬಂಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ , ವೇದ ಪ್ರಸಾರವಾಗಲಿ ಎಂದು ಶೃಂಗೇರಿಯ ವಿದ್ವಾನ್ ಶಂಕರ ಭಟ್ಟ ರವರು ನುಡಿದರು. ಅವರು ಇಂದು ಹೆಗಡೆಯ ಶ್ರೀ ಶಾಂತಿಕಾಂಬೆಯ ಸನ್ನಿಧಿಯಲ್ಲಿ ನಡೆಯುತ್ತಿರುವ ಚತುರ್ವೇದ ಪಾರಾಯಣ ಮಹಾಸತ್ರದ ಮೊದಲ ಹಂತವಾದ ಋಗ್ವೇದ ಪಾರಾಯಣ ಮುಕ್ತಾಯದ ನಿಮಿತ್ತ ನಡೆದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

RELATED ARTICLES  ಅಳಿವಿನಂಚಿನಲ್ಲಿರುವ ಸಂತತಿಯ ಉಳಿವಿಗೆ ವಿಶಿಷ್ಠ ಪ್ರಯತ್ನ : ಹಳದೀಪುರದಲ್ಲಿ ಕಡಲು ಸೇರಿದ ಅಪರೂಪದ ಆಮೆ ಮರಿಗಳು

ವಿಪ್ರ ಒಕ್ಕೂಟ ಹೆಗಡೆಯ ವತಿಯಿಂದ ವಿದ್ವಾನ ಶಂಕರ ಭಟ್ಟರಿಗೆ ವೇದಮೂರ್ತಿ ಕೃಷ್ಣ ಭಟ್ಟ ಸೂರಿ ಯವರು ಸನ್ಮಾನಿಸಿದರು, ವಿನಾಯಕ ಶಾಸ್ತ್ರಿ ,ಸುಧಾ ಶಾಸ್ತ್ರಿ ದಂಪತಿಗಳು ಫಲಸಮರ್ಪಣೆ ಮಾಡಿದರು. ಡಾ.ಉಮೇಶ ಶಾಸ್ತ್ರಿ ಹಾಗೂ ಪರಮೇಶ್ವರ ಹೆಗಡೆ ದಂಪತಿಗಳು ಸ್ಮರಣಿಕೆ ನೀಡಿದರು. ಕಾರ್ಯದರ್ಶಿ ಡಾ.ಗೋಪಾಲಕೃಷ್ಣ ಹೆಗಡೆ, ರವೀಂದ್ರ ಭಟ್ಟ ಸೂರಿ ನಿರ್ವಹಿಸಿದರು. ವಿಪ್ರ ಒಕ್ಕೂಟದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವೇದಾಭಿಮಾನಿಗಳು ಪಾಲ್ಗೊಂಡಿದ್ದರು.

RELATED ARTICLES  ನಗದು ಹಾಗೂ ಚಿನ್ನಾಬರಣ ದರೋಡೆಮಾಡಿದ್ದ ಆರೋಪಿಗಳು ಅಂದರ್..!