ಕಾರವಾರ:ಬಿಜೆಪಿಯು 104 ಶಾಸಕರ ಸಂಖ್ಯೆಯ ಬಲ ಇದ್ದರೂ ಸಹ ಪೂರ್ಣ ಬಹುಮತ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಪಕ್ಷಗಳು ಒಂದಾಗಿ ಮತ್ತೆ ಕರ್ನಾಟಕವನ್ನು ಲೂಟಿ ಮಾಡಲು ಸರ್ಕಾರ ರಚಿಸಲು ಮುಂದಾಗಿರುವುದನ್ನು ಖಂಡಿಸಿ ಕಾರವಾರ ಶಾಸಕರಾದ ರೂಪಾಲಿ ನಾಯ್ಕ ಹಾಗೂ ಕಾರವಾರ – ಅಂಕೋಲಾ ಕ್ಷೇತ್ರದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ ಸುಭಾಷ್ ವೃತ್ತ ದಲ್ಲಿ ‘ ಕರಾಳ ದಿವಸ್’ ಪ್ರತಿಭಟನೆ ನಡೆಸಿದರು.

ಕಾರವಾರ – ಅಂಕೋಲಾ ಜನತೆ ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹಿಂದುಗಳ ಮತ್ತು ಸುಂದರ ಕರ್ನಾಟಕದ ರಕ್ಷಣೆಗಾಗಿ ಪಣ ತೊಟ್ಟರು.

RELATED ARTICLES  ಮೇಲಾಧಿಕಾರಿಗಳ ಹೆಸರಲ್ಲಿ ಹಣ ವಸೂಲಿ : ಎಸ್.ಪಿ ಹೇಳಿದ್ದೇನು?

ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ಮಾತನಾಡಿ ಕಾರವಾರ ಅಂಕೋಲಾ ಜನತೆಯ ಆಶೋತ್ತರ ಗಳನ್ನು ಈಡೇರಿಸಲು ನಾನು ಸದಾ ಬದ್ಧ. ಈ ಹಿಂದೆ ಶಾಸಕರು ಅವರದೇ ಸರ್ಕಾರ ಇದ್ದಾಗೂ ಕೂಡ ಕಾರವಾರ ಅಂಕೋಲಾದ ಅಭಿವೃದ್ಧಿ ಕಡೆಗಣನೆ ಮಾಡಿರುವುದರಿಂದ ಮತ್ತು ಕಾಂಗ್ರೆಸ್ ನ ಜನವಿರೋಧಿ ನೀತಿ ಹಿಂದುಗಳ ಮೇಲೆ ಆಕ್ರಮಣ ಇವೆಲ್ಲ ಕಾರಣಗಳಿಂದ ಜನ ತಿರಸ್ಕರಿಸಿದ್ದಾರೆ, ಆದರೆ ದುರದೃಷ್ಟವಶಾತ್ ಈಗ ಮತ್ತದೇ ಸರ್ಕಾರ ಜೆಡಿಎಸ್ ನ್ನು ಬಿಗಿದಪ್ಪಿ ಸಂಬಂಧ ಬೆಳೆಸಲು ಹೊರಟಿರುವುದು ಇದು ಸಮಾಜಕ್ಕೆ ಮಾರಕ ಇದನ್ನೆಲ್ಲ ನಾವು ಸಹಿಸಿಕೊಂಡಿರಲು ಸಾಧ್ಯವಿಲ್ಲ ಜನರು ಮೋದಿಯವರ ಹಾಗೂ ಯಡಿಯೂರಪ್ಪ ನವರ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಜನರ ನಂಬಿಕೆ ಯನ್ನು ಉಳಿಸಿಕೊಂಡು ಹಿಂದುತ್ವ ದ ರಕ್ಷಣೆಗೆ ನಾವೆಲ್ಲ ಕಟಿಬದ್ಧರಾಗೋಣ ಎಂದರು.

RELATED ARTICLES  ಶ್ರೀ ಗಣೇಶ ನಾಯ್ಕ ಮುಗ್ವಾ ಇವರಿಗೆ ದಿ. ಜಿ. ಎಸ್. ಭಟ್ಟ, ಧಾರೇಶ್ವರ ನೆನಪಿನ 'ಸಹಯಾನ ಸನ್ಮಾನ'.

ಕಾರವಾರ ಅಂಕೋಲಾ ಕ್ಷೇತ್ರದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.