ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಾಡಿನ ವಿವಿಧ ಸಂತರುಗಳಿಂದ ಲೋಕಕಲ್ಯಾಣಾರ್ಥ ಶ್ರೀ ಆತ್ಮಲಿಂಗ ಪೂಜೆ ಹಾಗು ಸಂತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ “ಗೋಕರ್ಣ ಗೌರವ” ದಿನಾಂಕ 09-01-2017 ಸೋಮವಾರ ಶುಭಾರಂಭಗೊಂಡಿತ್ತು. ಶ್ರೀಮದ್ ಗಿರಿರಾಜಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಸೂರ್ಯಸಿಂಹಾಸನ ಮಠಾಧೀಶ . ಶ್ರೀಶೈಲ ಆಂಧ್ರಪ್ರದೇಶ ಇವರಿಂದ ಈ ವಿನೂತನ , ವಿಶೇಷ ಕಾರ್ಯಕ್ರಮ ಪ್ರಾರಂಭಗೊಂಡಿತ್ತು .

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಆತ್ಮಲಿಂಗ ಸನ್ನಿಧಿಯಾದ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಪ್ರತಿದಿನ ಓರ್ವ ಪೂಜ್ಯ ಸಂತರನ್ನು ಆಮಂತ್ರಿಸಿ ಲೋಕಕಲ್ಯಾಣಕ್ಕಾಗಿ ಅವರಿಂದ ಶ್ರೀ ಆತ್ಮಲಿಂಗ ಪೂಜೆ, ಸುವರ್ಣ ನಾಗಾಭರಣ ಪೂಜೆ ಸಲ್ಲಿಸಿ, ಪೂಜ್ಯ ಸಂತರಿಗೆ ಗೌರವ ಸಮರ್ಪಣೆ ಮಾಡುವ ಈ ಕಾರ್ಯಕ್ರಮವು ಪ್ರಾರಂಭವಾಗಿ ದಿನಾಂಕ 23-05-2018 ರಂದು 500 ನೇ ದಿನ ಪೂರೈಸುತ್ತಿದೆ. ೫೦೦ ನೇ ದಿನವಾದ ಇಂದು ಪ.ಪೂ.ಶ್ರೀ ಷ ಬ್ರ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಗದ್ದುಗೆಮಠ, ಕುಪ್ಪೂರು, ತುಮಕೂರು ಇವರು ದಿವ್ಯ ಸಾನ್ನಿಧ್ಯ ವಹಿಸಿ ಆತ್ಮಲಿಂಗ ಪೂಜೆ ನೆರವೇರಿಸಿದರು . ಭಾರತೀಯ ಸೇನೆಯಲ್ಲಿ ಸೇವೆಸಲ್ಲಿಸಿ ನಿವೃತ್ತರಾಗಿರುವ ಶ್ರೀ ಮಂಜುನಾಥ ಶಂಕರಲಿಂಗ ಗೋಕರ್ಣ ಇವರು ಶ್ರೀ ದೇವಾಲಯದ ಪರವಾಗಿ ಫಲಗಾಣಿಕೆ ಸಮರ್ಪಿಸಿ, ಶಾಲು ಹೊದೆಸಿ, ತಾಮ್ರಫಲಕ ಸ್ಮರಣಿಕೆ ನೀಡಿ ಗೌರವಿಸಿದರು.

RELATED ARTICLES  ಕುಮಟಾದಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಸಂಚಾರಕ್ಕೆ ಚಾಲನೆ.

ಆಗಮಿಸಿದ ಎಲ್ಲ ಸಂತರು ತಮ್ಮ ಶಿಷ್ಯ ಜನತೆಯ ಒಳಿತನ್ನು ಹಾಗೂ ಲೋಕಕಲ್ಯಾಣವನ್ನು ಸಂಕಲ್ಪಿಸಿ, ಪ್ರಾತಃ ಕಾಲದಲ್ಲಿ ಆತ್ಮಲಿಂಗಕ್ಕೆ ಕ್ಷೀರಾಭಿಷೇಕ, ಪಂಚಾಮೃತ, ನವಧಾನ್ಯ ಅಭಿಷೇಕ, ರುದ್ರಾಭಿಷೇಕ , ಬಿಲ್ವಾರ್ಚನೆ , ಮಂಗಳಾರತಿ ಹಾಗೂ ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿ , ಶಿವಸಂಪ್ರೀತಿಯನ್ನು ಪಡೆದು, ಈ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ತಮ್ಮ ಅತಿ ಸಂತಸವನ್ನು ವ್ಯಕ್ತಪಡಿಸಿ ಆಶೀರ್ವದಿಸುತ್ತಿದ್ದಾರೆ. ಭಕ್ತರ ಕೇಂದ್ರವಾದ ಶ್ರೀ ಕ್ಷೇತ್ರ ಗೋಕರ್ಣ ಸಂತರ ಕೇಂದ್ರವಾಗಬೇಕೆಂಬ ಶ್ರೀ ಸಂಸ್ಥಾನದವರ ಆಶಯವನ್ನು ಸಾಕಾರಗೊಳಿಸಲಾಗಿದೆ .

ಜಗದೀಶ್ವರನ ಅನುಗ್ರಹ, ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂಕಲ್ಪ , ಹಾಗು ಸಾಧು-ಸಂತರ ಹಾರೈಕೆಗಳಿಂದಾಗಿ, ಶ್ರೀ ಕ್ಷೇತ್ರ ಉಪಾಧಿವಂತ ಮಂಡಳದ ಸಹಯೋಗದಲ್ಲಿ ಈ ಕಾರ್ಯಕ್ರಮವು ನಿರಂತರವಾಗಿ ನಡೆದು, 23-05-2018 ರಂದು 500ನೇ ದಿನ ಪೂರೈಸಿದ ಪ್ರಯುಕ್ತ ಬೆಳಿಗ್ಗೆ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಚಂದ್ರಶಾಲೆಯಲ್ಲಿ ಪತ್ರಿಕಾ ಸಂದರ್ಶನವನ್ನು ಏರ್ಪಡಿಸಲಾಗಿತ್ತು . ಪ್ರಾರಂಭದಲ್ಲಿ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮಾತನಾಡಿ; ನೂತನ ಶಾಸಕ ಶ್ರೀ ದಿನಕರ ಶೆಟ್ಟಿಯವರನ್ನು ಸ್ವಾಗತಿಸಿದರು . ಈ ವಿಶೇಷ ಕಾರ್ಯಕ್ರಮ ಒಂದು ದಿನವೂ ತುಂಡಾಗದಂತೆ ನಿರಂತರವಾಗಿ ನಡೆದುಕೊಂಡು ಬರಲು ಶ್ರೀ ದೇವರ ಕೃಪೆ, ಪರಮಪೂಜ್ಯರ ಆಶೀರ್ವಾದ ಹಾಗೂ ಚಿತ್ತೈಸಿದ ಪೂಜ್ಯ ಸಂತರುಗಳ ಶುಭ ಹಾರೈಕೆಗಳು ಕಾರಣವಾಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಶ್ರೀರಾಮಚಂದ್ರಾಪುರಮಠದ ಸಂತಸೇವಕ ಸಮಿತಿ , ಶ್ರೀ ಕ್ಷೇತ್ರ ಉಪಾಧಿವಂತ ಮಂಡಳದ ಆದರಣೀಯ ಸಹಕಾರ, ಶ್ರೀ ದೇವಾಲಯದ ಕಾರ್ಯಕರ್ತರ ಸಹಕಾರವನ್ನು ಸ್ಮರಿಸಿದರು .

RELATED ARTICLES  ಹೇಗಿತ್ತು ಹೇಗಾಯ್ತು ಕುಮಟಾ ಮಣಕಿ ಮೈದಾನ! ಅಯ್ಯೋ ಗೋಳು ಕೇಳೋರೆ ಇಲ್ವೇ?

ಶಾಸಕ ಶ್ರೀ ದಿನಕರ ಶೆಟ್ಟಿ ಮಾತನಾಡಿ ‘ಗೋಕರ್ಣ ಗೌರವ’ ಕಾರ್ಯಕ್ರಮದ ಕುರಿತು ತಮ್ಮ ಸಂತಸವನ್ನು ತಿಳಿಸಿದರು. ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಪೂಜ್ಯರಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು . ಪ ಪೂ ಶ್ರೀ ಶ್ರೀ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೂತನ ಶಾಸಕ ಶ್ರೀ ದಿನಕರ ಶೆಟ್ಟಿಯವರಿಗೆ ಶಾಲು ಹೊದೆಸಿ ಆಶೀರ್ವದಿಸಿದರು . ಪೂಜ್ಯ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಗೋಕರ್ಣ ಗೌರವ ವಿಶೇಷ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು . ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು ಮತ್ತು ಕ್ಷೇತ್ರವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು .

ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇಭಟ್ , ಶ್ರೀ ಡಿ ಡಿ ಶರ್ಮ , ಡಾ ಜಿ ಜಿ ಹೆಗಡೆ , ತಾ ಪಂ . ಸದಸ್ಯ ಶ್ರೀ ಮಹೇಶ ಶೆಟ್ಟಿ, ಶ್ರೀ ಮಂಜುನಾಥ ಜನ್ನು , ಶ್ರೀ ನಾಗರಾಜ ಹಿತ್ಲಮಕ್ಕಿ , ಹಾಗು ಉಪಾಧಿವಂತ ಮಂಡಳಿಯ ಸದಸ್ಯರು, ಸಂತಸೇವಕ ಸಮಿತಿಯ ಶ್ರೀ ಮೋಹನ ಹರಿಹರ, ಶ್ರೀ ಶಿಶಿರ ಹೆಗಡೆ ಹಾಗೂ ಊರ ನಾಗರಿಕರು, ಉಪಸ್ಥಿತರಿದ್ದರು .