ಕರ್ನಾಟಕದ ಜನತೆ ತಿರಸ್ಕರಿಸಿದ ಜನವಿರೋಧಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಗೂಡಿ ಸರ್ಕಾರ ರಚಿಸಲು ಮುಂದಾದ ಹಿನ್ನೆಲೆಯಲ್ಲಿ ಕುಮಟಾದ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಇಂದು ಕರಾಳ ದಿನ ಆಚರಿಸಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಕುಮಟಾ ಮಂಡಳ ಹಾಗೂ ಹಾಗೂ ಹೊನ್ನಾವರ ಮಂಡಳ ಅಧ್ಯಕ್ಷರು ಗಳು ಹಾಗೂ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಗಿಬ್ ಸರ್ಕಲ್ ನಲ್ಲಿ ಜಮಾವಣೆ ಗೊಂಡು ಹಿಂದೂ ವಿರೋಧಿ ಸರ್ಕಾರ ದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಕಚೇರಿಗೆ ಮೆರವಣಿಗೆ ತೆರಳಿ ಅಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಕರ್ನಾಟಕ ದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿದ್ದಾರೆ ಆದರೂ ಜನರಿಗೆ ಮೋಸ ಮಾಡಿ ತಮ್ಮ ಮಾತಿಗೆ ತಪ್ಪಿದ ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ನಡೆಸಲು ಮುಂದಾಗಿರುವುದು ನಾಚಿಕೆಗೇಡು ಜನರು ಇವರನ್ನು ಕ್ಷಮಿಸೋದಿಲ್ಲ. ಇದು ಹೆಚ್ಚು ದಿನ ನಡೆಯುವ ಸರ್ಕಾರವಲ್ಲ. ನಮ್ಮ ಕ್ಷೇತ್ರದಲ್ಲಿಯೂ ಜೆಡಿಎಸ್ ಅಭ್ಯರ್ಥಿ ತಮ್ಮ ಇಡುಗಂಟು ಕಳೆದುಕೊಂಡಿದ್ದಾರೆ. ಜನರು ನನ್ನನ್ನು ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡಿದ್ದಾರೆ. ಜನರ ಎಲ್ಲ ಆಶೋತ್ತರಗಳನ್ನು ಈಡೇಸಲು ಮುಂದಾಗುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.
ಅಧ್ಯಕ್ಷ ಕುಮಾರ ಮಾರ್ಕಾಂಡೆ, ಹೊನ್ನಾವರ ಅಧ್ಯಕ್ಷ ಸುಬ್ರಾಯ ನಾಯ್ಕ, ಜಿ ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಜಿ ಪಂ ಸದಸ್ಯ ಗಜಾನನ ಪೈ, ಮಹಿಳಾ ಮೋರ್ಚಾ ಅಧ್ಯಕ್ಷೆ ನಾಗವೇಣಿ ಹೆಗಡೆ, ವಿನೋದ ಪ್ರಭು, ಡಾ ಜಿ ಜಿ ಹೆಗಡೆ, ಅಶೋಕ ಪ್ರಭು, ಎಮ್ ಜಿ ಭಟ್ಟ್, ವೆಂಕಟೇಶ್ ನಾಯಕ, ಎಮ್ ಜಿ ನಾಯ್ಕ, ಸುಧಾ ಗೌಡ, ಪ್ರಶಾಂತ ನಾಯ್ಕ, ಹೇಮಂತ್ ಕುಮಾರ್ ಗಾಂವ್ಕರ್, ಸಂತೋಷ್ ನಾಯ್ಕ, ವಿನೋದ ಬಂಢಾರಿ, ಚೇತೇಶ್ ಶಾನಭಾಗ, ಎಸ್ ಟಿ ನಾಯ್ಕ, ಚಿದಾನಂದ, ಸುಮನಾ ಪಟಗಾರ ಹಾಗೂ ಇತರ ಮುಖಂಡರು 500 ಕ್ಕೂ ಹೆಚ್ಚಿನ ಕಾರ್ಯಕರ್ತರು ಉಪಸ್ಥಿತರಿದ್ದರು.