ಕುಮಟಾ: ತಾಲೂಕಿನ ಹೆಗಡೆಯಲ್ಲಿರುವ ಪುರಾತನ ನರಸಿಂಹ ಮಠದಲ್ಲಿ ಶನಿವಾರ ನರಸಿಂಹ ದೇವರಿಗೆ ಬೆಳ್ಳಿ ಕವಚವನ್ನು ಸಮರ್ಪಿಸಲಾಯಿತು. ಪುರಂದರ ಶಂಕರ ಹೆಗಡೆ ದಂಪತಿಗಳ ಸೇವಾ ರೂಪದ ಬೆಳ್ಳಿ ಕವಚವನ್ನು ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀ ದೇವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೋಕ್ತೆಸರ ಬಾಲಚಂದ್ರ ಭಾಗ್ವತ್ ಹಾಗೂ ಪದಾಧಿಕಾರಿಗಳು ಶ್ರೀಗಳಿಗೆ ಫಲ ಸಮರ್ಪಿಸಿ ಸ್ವಾಗತಿಸಿದರು. ಶಂಭು ಮಾಸ್ತರ ದೇವಸ್ಥಾನದ ಹಿನ್ನೆಲೆ ಮತ್ತು ಪೌರಾಣಿಕ ಮಹತ್ವವನ್ನು ವಿವರಿಸಿದರು. ಹೆಗಡೆ ವಲಯದ ಮಾತೃ ವಿಭಾಗದವರು ಶಿವ ಪಂಚಾಕ್ಷರಿ ಸ್ತ್ರೋತ್ರ, ಆದಿತ್ಯ ಹೃದಯ ಪಠಣ ನಡೆಸಿಕೊಟ್ಟರು. ಡಿ.ಎಫ್.ಓ ಶಶಿಧರ ಹೆಗಡೆ, ಎಸಿಎಫ್ ಅಶೋಕ ಭಟ್ಟ, ಕುಮಟಾ ಮಂಡಲದ ವಿದ್ಯಾರ್ಥಿ ವಾಹಿನಿ ಪ್ರಧಾನರಾದ ಗೋಪಾಲಕೃಷ್ಣ ಹೆಗಡೆ, ಮೂಲ ಮಠದ ನಿರ್ದೇಶಕ ರವೀಂದ್ರ ಭಟ್ಟ ಸೂರಿ, ಮಾತೃ ಪ್ರಧಾನ ಗೋಧಾವರಿ ಹೆಗಡೆ, ಶಾಂತಿಕಾ ಪರಮೇಶ್ವರಿ ದೇವಾಲಯದ ಆಡಳಿತ ಮೊಕ್ತೇಸರ ನಾಗೇಶ ಶಾನಭಾಗ, ಹಾಲಕ್ಕಿ ಸಮುದಾಯದ ಪ್ರಮುಖ ತಿಮ್ಮಣ್ಣ ಗೌಡ ಹಾಗೂ ಅಪಾರ ಸಂಖ್ಯೆಯಲ್ಲಿ ಶಿಷ್ಯ ವರ್ಗದವರು ಹಾಜರಿದ್ದರು.

RELATED ARTICLES  ದೇಶದ ಅಭಿವೃದ್ಧಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ :- ನಾಗರಾಜ ನಾಯಕ ತೊರ್ಕೆ