ಕುಮಟಾ : ವಿಜಯಾ ಬ್ಯಾಂಕ್‌ ಗುಡೇಅಂಗಡಿ ಶಾಖೆಯನ್ನು ಕುಮಟಾ ಶಾಖೆಗೆ ವಿಲೀನಗೊಳಿಸಲು ತೀರ್ಮಾನಿಸಲಾಗಿದ್ದು ಗ್ರಾಹಕರ ಕೆಂಗಣ್ಣಿಗೆ ಇದು ಗುರಿಯಾಗಿದೆ.

ಈ ಹಿನ್ನಲೆಯಲ್ಲಿ ಇದರಿಂದ ಬಹಳ ವರ್ಷಗಳಿಂದ ಗುಡೇಅಂಗಡಿ ಶಾಖೆಯಲ್ಲಿ ವ್ಯವಹರಿಸುವ ಗ್ರಾಹಕರಿಗೆ ಸಮಸ್ಯೆ ಆಗಲಿದೆ ಎಂಬುದು ಜನತೆಯ ಅನಿಸಿಕೆ.

RELATED ARTICLES  ಶ್ರಾದ್ಧ ಕಾರ್ಯಕ್ಕೆ ತೆರಳಲು ಹೊರಟವರಿಗೆ ಅಪಘಾತ : ಇಬ್ಬರು ಸ್ಥಳದಲ್ಲಿಯೇ ಸಾವು.

ವಿಜಯಾ ಬ್ಯಾಂಕ್‌ ಗುಡೇಅಂಗಡಿ ಶಾಖೆಯನ್ನು ಕುಮಟಾ ಶಾಖೆಗೆ ವಿಲೀನಗೊಳಿಸುವ ಪ್ರಕ್ರಿಯೆ ವಿರೋಧಿಸಿ ವಿಜಯಾ ಬ್ಯಾಂಕ್‌ ಗುಡೇಅಂಗಡಿ ಎದುರು ಇಂದು ಪ್ರತಿಭಟನೆ ನಡೆಸಿದರು.

ಈ ಸಮಯದಲ್ಲಿ ಬ್ಯಾಂಕಿನ ಗ್ರಾಹಕರು,ಸಾರ್ವಜನಿಕರ ಜೊತೆಗೆ ಜನಪತಿನಿಧಿಗಳು ಸಾತ್ ನೀಡಿದರು. ಶಾಸಕರಾದ ದಿನಕರ ಶೆಟ್ಟಿ, ಜಿ.ಪಂ ಸದಸ್ಯರಾದ ರತ್ನಾಕರ ನಾಯ್ಕ, ಜನಾರ್ಧನ ನಾಯ್ಕ ಹಾಗೂ ಇನ್ನೂ ಮುಂತಾದ ಪ್ರಮುಖರು ಭಾಗವಹಿಸಿದ್ದರು.

RELATED ARTICLES  ಜನ ಮನದ ನಾಯಕ "ನಾಗರಾಜ ನಾಯಕ ತೊರ್ಕೆ".

ಇದಲ್ಲದೆ ಸ್ತ್ರೀ ಶಕ್ತಿ ಸಂಘ, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು,ವಿಜಯಾ ಬ್ಯಾಂಕ್‌ ಗುಡೇಅಂಗಡಿ ಶಾಖೆಯನ್ನು ಇಲ್ಲೇ ಉಳಿಸಲು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.