ಕುಮಟಾ: ಉತೃಷ್ಟ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಪ್ರಗತಿಟ್ಯುಟೋರಿಯಲ್ಸ್ನಲ್ಲಿ ಈ ಬಾರಿದಾಖಲೆಯ ಫಲಿತಾಂಶದಾಖಲಾಗಿದೆ.2017-18ರ ದ್ವಿತೀಯ ಪಿಯುಸಿ ಸೈನ್ಸ್‍ನಲ್ಲಿತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು 90%ಕ್ಕಿಂತ ಹೆಚ್ಚು ಅಂಕಗಳನ್ನು ಮತ್ತು 10ಕ್ಕೂ ಹಎಚ್ಚು ವಿದ್ಯಾರ್ಥಿಗಳು 85%ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.ಅಲ್ಲದೇ ಪ್ರಮೋದ ನಾಯ್ಕ 95.10% ಅಂಕಗಳನು ಪಡೆದಿದ್ದಲ್ಲದೇಗಣಿತಕ್ಕೆ 100ಕ್ಕೆ 100 ಮತ್ತು ಶ್ರೀ ಲಕ್ಷ್ಮೀ ಭಟ್ 94.8% ಮತ್ತುಗಣಿತಕ್ಕೆ 100ಕ್ಕೆ 100 ಅಂಕಗಳನ್ನು ಪಡೆದು ಸಂಸ್ಥೆಗೆ ಕೀರ್ತಿತಂದಿದ್ದಾರೆ.

ಅದೇ ರೀತಿ ಅರ್ಪಿತಾ ಭಟ್ಟ 93% ಅಂಕಗಳನ್ನು ಪಡೆದುಕಾಲೇಜಿಗೆ ಸ್ವಿತೀಯ ರ್ಯಾಂಕ ಪಡೆದಿದ್ದಾಳೆ.ದೀಕ್ಷ 93%.ಶಾರದಾ ಗೌ 90% ಅಂಕಗಳನ್ನು ಪಡೆದಿದ್ದಾರೆ. ಕಳೆದ 20 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡು ಅನೇಕ ಕಾಲೇಜುಗಳಲ್ಲಿ ಮತ್ತು ವಿದ್ಯಾಸಂಸ್ಥೆಗಳಲ್ಲಿ ಬೋಧಿಸಿದ ಅನುಭವಿ ಎಂ.ಜಿ.ಬಟ್ಟರ ನೇತೃತ್ವದಲ್ಲಿ ಸಂಸ್ಥೆಯಎಲ್ಲಾ ಉಪನ್ಯಾಸಕರುಗಳು ಸತತ ಪರಿಶ್ರಮ ವಹಿಸಿ ಬೋಧನೆ ಮಾಡಿದ್ದು ಈ ದಾಖಲೆಗೆಕಾರಣವಾಗಿದೆಎಂದು ಪಾಲಕರು ಸಂತಸ ವ್ಯಕ್ತಪಡಿಸುತ್ತಾರೆ.
ಸುತ್ತಮುತ್ತಲಿನ ಪ್ರಸಿದ್ಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿರುವ ಅನುಭವಿ, ನುರಿತ, ಪ್ರತಿಭಾವಂತ ಉಪನ್ಯಾಸಕರುಗಳ ತಂಡವೇ ಎಂ.ಜಿ. ಭಟ್ಟರ ಜೊತೆಗೆ ನಿಂತಿದೆ.

RELATED ARTICLES  ಬ್ರೇಕ್ ಕೇಬಲ್ ಕಟ್ ಆಗಿ ಅಪಘಾತ : ಓರ್ವ ಸಾವು.

ಭೌತಶಾಸ್ತ್ರ.ಮ್ಯಾಥ್ಸ, ಕೇಮಿಸ್ಟ್ರಿ ಹಾಗೂ ಬಯೋಲಜಿ, ಕಂಪ್ಯೂಟರ ಸೈನ್ಸ್‍ಗಳಲ್ಲಿ ಪ್ರತಿ ವಿಷಯಕ್ಕೆ 2 ರಿಂದ 3 ಅನುಭವಿ ಉಪನ್ಯಾಸಕರುಗಳ ಸೇವೆ ಲಭ್ಯವಿರುವುದು ವಿದ್ಯಾರ್ಥಿಗಳ ಯಶಸ್ವಿಗೆ ಕಾರಣವಾಗಿದೆ. ಹಣವೊಂದೇ ಮುಖ್ಯಅಲ್ಲ, ಗುಣಮಟ್ಟದ ಶಿಕ್ಷಣವೇ ಮುಖ್ಯಎನ್ನುವಧ್ಯೇಯ ಸಂಸ್ಥೆಯ ಮುಖ್ಯಸ್ಥರಾದ ಎಂ.ಜಿ.ಭಟ್ಟರವರದು. ಅಲ್ಲದೇಅರ್ಹ ಪ್ರತಿಭಾವಂತರಾದ ತೀರಾ ಬಡ ವಿದ್ಯಾರ್ಥಿಗಳಿಗೆ ಫಿ ರಿಯಾಯತಿ ನೀಡುವುದು ಅಲ್ಲದೇ ಉಚಿತವಾಗಿಯೂ ತರಬೇತಿ ನೀಡಲಾಗುತ್ತಿದೆ.ಹೊರ ಜಿಲ್ಲೆಯ ಶಿಕ್ಷಣಕ್ಕೆ ಆಕರ್ಷಿತರಾಗಿ ಬೇರೆ ಬೇರೆಕಡೆ ಕಳುಹಿಸಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ, ಕೆಲವು ಅನುತ್ತೀರ್ಣರಾದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಪೂರಕ ಪರೀಕ್ಷೆತರಬೇತಿ ಪಡೆದು ಪಾಸಾದ ದಾಖಲೆ ಕೂಡಇದೆ.ಇದಕ್ಕೆಇರಬೇಕು ಹಿರಿಯರು ಹೇಳಿದ್ದು ಹಿತ್ತಲಗಿಡ ಮದ್ದಲ್ಲಎಂದು.ಏನೇ ಇರಲಿ ಸ್ಥಳೀಯ ಶಿಕ್ಷಣ ಸಂಸ್ಥೆಯೊಂದು ಈ ರೀತಿಉತ್ತಮ ಫಲಿತಾಂಶ ನೀಡಿ ಗಮನ ಸೆಳೆದಿದ್ದು ಸಾಧನೆಯೇ ಸರಿ. ಸ್ಥಳೀಯ ಜನರ ಸಹಕಾರ ಸಿಕ್ಕಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡುತ್ತೇವೆ ಎನ್ನುತ್ತಾರೆ ಎಂಜಿ.ಭಟ್ಟ

RELATED ARTICLES  ಸ್ವರಾಂಗಣ ಉದ್ಘಾಟನೆ ಹಾಗೂ ಗಮನಸೆಳೆದ ಗಾನ-ನಾಟ್ಯ ವೈಭವ.