ಸಿದ್ದಾಪುರ: ಗೋವುಗಳು ಸ್ವತಂತ್ರವಾಗಿ ವಿಹರಿಸಬೇಕು ನರಕಯಾತನೆಯ ಜೀವನ ಅವುಗಳದಾಗಬಾರದು ಹಾಗೂ ಭಾರತೀಯ ಗೋತಳಿಗಳನ್ನು ಉಳಿಸುವುದೇ ಗೋಸ್ವರ್ಗದ ಮುಖ್ಯ ಉದ್ದೇಶವಾಗಿದೆ.ಗೋಸ್ವರ್ಗ ಹಾಗೂ ಗೋಶಾಲೆ ಎಲ್ಲ ಕಡೆಯಲ್ಲಿಯೂ ಅವಶ್ಯಕತೆ ಇದೆ. ಅವಶ್ಯ ಇದ್ದಲ್ಲಿ ಜಿಲ್ಲೆಯ ಮತ್ತಿತರ ಕಡೆಗಳಲ್ಲಿಯೂ ಗೋಸ್ವರ್ಗ ನಿರ್ಮಾಣ ಮಾಡಲಾಗುವುದು. ಮೇ.27ರಂದು ಸಹಸ್ರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯ ಗೋಸ್ವರ್ಗ ಲೋಕಾರ್ಪಣೆಗೊಳ್ಳುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಎಲ್ಲರೂ ಪಾಲ್ಗೊಳ್ಳಬೇಕು.. ರಾಜ್ಯದ ಹಾಗೂ ದೇಶದ ಎಲ್ಲ ಗಣ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ರೀ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

ತಾಲೂಕಿನ ಭಾನ್ಕುಳಿ ರಾಮದೇವಮಠದ ಆವಾರದಲ್ಲಿ ಗೋಸ್ವರ್ಗದ ಕುರಿತು ಮಾಹಿತಿ ನೀಡಿದರು. ಗೋಸ್ವರ್ಗ ಇದು ನಿಜವಾಗಿಯೂ ಸಂಪೂರ್ಣ ಗೋಸೌಖ್ಯ ಕೇಂದ್ರವಾಗಿದೆ. ಇಲ್ಲಿ ಆರಂಭದಲ್ಲಿ ಒಂದು ಸಾವಿರ ಗೋವುಗಳಿಂದ ಆರಂಭಿಸಲಾಗುತ್ತಿದ್ದು ಅವುಗಳಿಗೆ ಇದೊಂದು ಸ್ವಚ್ಛಂದ ಸಾಮ್ರಾಜ್ಯ. ಗೋವುಗಳಿಗೆ ಬೇಕಾದ ಪರಿಶುದ್ಧವಾದ ಆಹಾರವನ್ನು ನೀಡಲಾಗುತ್ತದೆ. ಪಾರಂಪರಿಕವಾಗಿ ಬಂದ ಕಲ್ಲು ಮರಿಗೆಯಲ್ಲಿಯೇ ನೀರನ್ನು ನೀಡಲಾಗುತ್ತಿದ್ದು ಗೋಸ್ವರ್ಗದ ಸುತ್ತಲು ಕಲ್ಲುಮರಿಗೆ ಇಡಲಾಗುತ್ತದೆ. ಗೋವು ಸ್ವತಂತ್ರವಾಗಿ ಬದುಕಬೇಕು, ಗೋವಿಗೆ ಒಳ್ಳೆಯ ಬದುಕನ್ನು ನೀಡಬೇಕು. ದೇಶಿಯ ಗೋತಳಿಗಳು ಉಳಿಯಬೇಕು, ಕಸಾಯಿಖಾನೆಗೆ ತೆರಳುವ ಗೋವುಗಳ ರಕ್ಷಣೆ ಆಗಭೇಕು ಎನ್ನುವ ಉದ್ದೇಶವಾಗಿದೆ. ಇದಕ್ಕೆ ಎಲ್ಲ ಕಡೆಯಿಂದಲೂ ಉತ್ತಮ ಸ್ಪಂದನೆ ದೊರಕುತ್ತಿದೆ.

RELATED ARTICLES  ಅನಂತಕುಮಾರ ಹೆಗಡೆಗೆ ಸಿಗಲಿದೆಯೇ ಗುಡ್ ನ್ಯೂಸ್..?

ಗೋವಿನ ಹಾಲು ನಮಗೆ ಮುಖ್ಯವಲ್ಲ. ಹಾಲು ಕರುವಿನ ಹಕ್ಕು. ಅವುಗಳಿಗೆ ಹೆಚ್ಚಾಗಿ ಉಳಿದ ಹಾಲನ್ನು ಬಳಸಲಾಗುತ್ತಿದೆ. ಒಮ್ಮೆ ಕರುಗಳಿಗೆ ಹಾಲು ಕಡಿಮೆಯಾದರೆ ಹಾಲನ್ನು ಸಹ ನೀಡಲಾಗುತ್ತದೆ.ಮುಖ್ಯವಾಗಿ ಗೋಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಗೋವುಗಳನ್ನು ನೋಡಿಕೊಳ್ಳುವುದಕ್ಕೆ ಗೋಪಾಲಕರು ಇರುತ್ತಾರೆ. ಅಲ್ಲದೇ ಅವುಗಳ ಆರೋಗ್ಯ ದೃಷ್ಠಿಯಿಂದ ಸುಸಜ್ಜಿತವಾದ ಗೋ ಆಸ್ಪತ್ರೆಯನ್ನು ತೆರೆಯಲಾಗುತ್ತದೆ.

RELATED ARTICLES  ನಿಯಂತ್ರಣ ತಪ್ಪಿ ಕಾರು ಪಲ್ಟಿ..!

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀಮಠದ ಕಾಮದುಘಾ ಯೋಜನೆಯ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ, ಆರ್.ಎಸ್.ಹೆಗಡೆ ಹರಗಿ, ಶಾಂತಾರಾಮ ಹೆಗಡೆ ಹಿರೇಮನೆ, ಮಹೇಶ ಚಟ್ನಳ್ಳಿ, ಮೋಹನ ಹರಿಹರ ಮತ್ತಿತರರಿದ್ದರು.