ಯಲ್ಲಾಪುರ : ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಸದ್ಯದಲ್ಲೇ ಮುರಿದು ಬೀಳಲಿದ್ದು, ಇನ್ನು ಮುಂದೆ ನಡೆಯುವುದು ಕುಮಾರ ಪರ್ವ ಅಲ್ಲ ವಿನಾಶ ಪರ್ವ ಎಂದು ಬಿಜೆಪಿ ತಾಲ್ಲೂಕು ಖಜಾಂಚಿ ಎಲ್ ಆರ್ ಭಟ್ ತೋಟ್ಮನೆ ಹೇಳಿದರು.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಸದ್ಯದಲ್ಲಿ ಮುರಿದು ಬೀಳಲಿದೆ . ಮತ್ತೊಮ್ಮೆ ಚುನಾವಣೆ ನಡೆದು ಬಿಜೆಪಿ ಸಂಪೂರ್ಣ ಬಹುಮತ ಪಡೆಯುವಲ್ಲಿ ಯಶಸ್ವಿಯಾಗುದರೊಂದಿಗೆ ವಿನಾಶ ಪರ್ವ ಆರಂಭವಾಗುತ್ತದೆ ಎಂದ ಅವರು , ಕಳೆದೆರಡು ದಿನಗಳ ಹಿಂದೆ ಧರ್ಮಸ್ಥಳದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾ ವಿಷಯದ ಬಗ್ಗೆ ಹೇಳಿರುವ ಗೊಂದಲದ ಹೇಳಿಕೆಯನ್ನು ಬಿಜೆಪಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ .ಜನತೆ ಜೆಡಿಎಸ್ ಅಧಿಕಾರಕ್ಕೆ ತಂದರೆ ಸಂಪೂರ್ಣ ಸಾಲ ಮನ್ನಾ ಮಾಡುವೆ ಎಂದು ಹೇಳಿದ್ದ ಕುಮಾರಸ್ವಾಮಿ ಈಗ ಯು ಟರ್ನ್ ಹೊಡೆದಿರುವುದು ಕುಮಾರಸ್ವಾಮಿಯವರಿಗೆ ಎರಡು ನಾಲಿಗೆ ಇದೆ ಎಂಬುದು ಗೋಚರಿಸುತ್ತದೆ ಎಂದು ಟೀಕಿಸಿದರು .

RELATED ARTICLES  ಹೊನ್ನಾವರಕ್ಕೆ ಆಗಮಿಸಿದ ದೇವೇಗೌಡರ ಹೆಲಿಕಾಪ್ಟರ್ ತಪಾಸಣೆ‌ ಮಾಡಿದ ಚುನಾವಣಾ ಸಿಬ್ಬಂದಿ