ಹಳಿಯಾಳ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಬಡ ಜನರಿಗಾಗಿ ಇರುವ ಮಹತ್ವಪೂರ್ಣ ಯೋಜನೆಯಾಗಿದೆ. ಇಲ್ಲಿ ದುಡಿಯುವ ಕೈಗೆ ಕೆಲಸವನ್ನು ಯಾರ ಸಿಪಾರಸ್ಸು ಇಲ್ಲದೆ ನೀಡಲಾಗುತ್ತದೆ. ಇಂತಹ ಮಹತ್ವಪೂರ್ಣ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸಾಮಾಜಿಕ ಪರಿಶೋಧನೆ ಪ್ರಕ್ರೀಯೆ ಯನ್ನು ಅಳವಡಿಸಿದೆ. ಇದು ಯೋಜನೆಯ ಯಶಸ್ಸಿನ ಕಾರಣಗಳಲ್ಲಿ ಒಂದು ಎಂದು ಹಳಿಯಾಳ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಪರಶುರಾಮ ಗಸ್ತಿ ಅವರು ನುಡಿದರು.
ಅವರು ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ ಸೆಟ್ ನಲ್ಲಿ ನರೇಗಾ ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಆಯೋಜಿಸಲಾದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಸಂಯೋಜಕ ಮಾಯಪ್ಪ ಬಾಂಡ್ರಿಳ್ಳಿ ಸಾಮಾಜಿಕ ಪರಿಶೋಧನೆ ನರೇಗಾ ಯೋಜನೆಯ ಒಂದು ಭಾಗವಾಗಿದ್ದು. ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಸಾಮಾಜಿಕ ಪರಿಶೋಧನೆಯ ತಳಪಾಯವಿದಂತೆ ಎಂದರು.
ತರಬೇತಿ ಸಂಸ್ಥೆಯ ಬೋದಕ ಕೆಂಪಣ್ಣ ಎಂ ಎಸ್ ಮತ್ತು ಮುಂಡಗೋಡ ತಾಲೂಕು ಸಂಯೋಜಕ ಗಿರಿಧರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಹೊನ್ನಾವರ ತಾಲೂಕು ಸಂಯೋಜಕ ಉಮೇಶ ಮುಂಡಳ್ಳಿ ತರಬೇತಿಯ ಕುರಿತು ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಳಿಯಾಳ ತಾಲೂಕು ಸಂಯೋಜಕ ಶಿವಪ್ಪ ವಂದಿಸಿದರು. ಈ ಸಂದರ್ಭದಲ್ಲಿ ಕುಮಟ ತಾಲೂಕು ಸಂಯೋಜಕ ನಾಗರಾಜ ಹಬ್ಬು, ಕಾರವಾರ ತಾಲೂಕು ಸಂಯೋಜಕಿ ಗೀತಾ ಗಾಂವಕರ್, ಸಿದ್ದಾಪುರ ಸಂಯೋಜಕ ನಾಗರಾಜ್ ಹೆಗಡೆ, ಜೋಯ್ಡಾ ಸಂಯೋಜಕಿ ನಜೀರಾ ಬೇಗಂ ಮಾಂಡ್ವೆಕರ್,ಶಿರಸಿ ತಾಲೂಕು ಸಂಯೋಜಕ ರಾಜೇಶ್ ದೇಸಾಯಿ ಹಾಜರಿದ್ದರು. ಸುಮಾರು ೮೦ ಕ್ಕೂ ಅಧಿಕ ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳಾಗಿ ಹಾಜರಿದ್ದರು.