ಬೆಂಗಳೂರು: ನಾವು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಚರ್ಚೆ ಎರಡು ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ, ಅಭ್ಯರ್ಥಿಗಳ ಅಭಿಪ್ರಾಯವನ್ನೂ ಸಂಗ್ರಹ ಮಾಡಿದ್ದೇವೆ, ಶೀಘ್ರದಲ್ಲೇ ನಿರ್ಧಾರ ತಿಳಿಸುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗೃಹ ಕಚೇರಿಯಲ್ಲಿ ತಿಳಿಸಿದ್ದಾರೆ.

ರೈತರ ಸಾಲಮನ್ನಾ ವಿಚಾರವಾಗಿ ಯಡಿಯೂರಪ್ಪ ಅವರ ರೀತಿ ನಾನು ಆತುರದ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ, ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದರೆ ತಕ್ಷಣವೇ ನಾನು ಸಾಲಮನ್ನಾ ಪ್ರಕಟಿಸುತ್ತಿದ್ದೆ. ನಮ್ಮದು ಸಮ್ಮಿಶ್ರ ಸರ್ಕಾರ ಕಾಂಗ್ರೆಸ್ ಪಕ್ಷದ ನಾಯಕರ ಜೊತೆಯೂ ಚರ್ಚೆ ನಡೆಸಬೇಕು, ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ಕರೆದಿದ್ದೇನೆ, ಹಣಕಾಸಿನ ಕುರಿತಾಗಿ ಸಾಧಕ-ಭಾದಕ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇನೆ. ರೈತರ ವಿಚಾರದಲ್ಲಿ ನಾನು ಯಾರಿಂದಲೂ ಹೇಳಿಸಿಕೊಳ್ಳಲು ಸಿದ್ಧನಿಲ್ಲ, ಅವರ ಕಷ್ಟ ಏನು ಎಂಬುದು ಅರಿತಿದ್ದೇನೆ.

ಯಡಿಯೂರಪ್ಪ ಸಿಎಂ ಆಗಿ 54 ಗಂಟೆನೆನೋ ಅಧಿಕಾರ ವಹಿಸಿಕೊಂಡರು, ಆದರೆ ಅವರು ಮಾಡಿದ್ದೇನು ಅಧಿಕಾರಿಗಳ ವರ್ಗಾವಣೆ ಮಾಡಿದರು, ಇದೆಲ್ಲವನ್ನು ನೋಡಿದ್ದೀರಿ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗದುಕೊಂಡು ಜನಪರ ಕೆಲಸ ಮಾಡುತ್ತೇನೆ. ಇಲ್ಲಿಗೆ ರಾಜಕೀಯ ಸಾಕು, ಅಭಿವೃದ್ಧಿ ಕೆಲಸಗಳ ಕಡೆಗೆ ಗಮನ ಹರಿಸೋಣ, ಎರಡು ಪಕ್ಷಗಳ ಪ್ರಣಾಳಿಕೆಯಲ್ಲಿ ಏನಿದೆ ಅದನ್ನು ಗಮನದಲ್ಲಿಟ್ಟುಕೊಂಡು ಸಾಕಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.

RELATED ARTICLES  ಹೊನ್ನಾವರದ ಪರೇಶ ಮೇಸ್ತ ಸಾವಿನ ಬಗ್ಗೆ ಅನಂತಕುಮಾರ್ ಹೆಗಡೆ ಹೇಳಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೋ!

ನಾನು ಪತ್ರಿಕೆಯೊಂದರಲ್ಲಿ ನೋಡಿದೆ, ಅದರಲ್ಲಿ ನನ್ನ ತಾಯಿ ಚೆನ್ನಮ್ನ ಅವರು, ಸಿದ್ದರಾಮಯ್ಯ ಅವರನ್ನು ಯಾವತ್ತೂ ಕ್ಷಮಿಸಲ್ಲ ಎಂದು ಬರೆದಿದ್ದಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನನ್ನ ತಾಯಿ ನನಗೆ ಜನ್ಮ ಕೊಟ್ಟು ಸಾಕಿದ್ದಾರೆ, ಅವರಿಗೆ ಗೌರವ ಕೊಡೋದು ಮಕ್ಕಳ ಕರ್ತವ್ಯ, ದಯವಿಟ್ಟು ರಾಜಕೀಯ ವಿಚಾರದಲ್ಲಿ ನನ್ನ ತಾಯಿಯ ಹೆಸರು ತರಬೇಡಿ, ನನ್ನ ತಾಯಿ ಎಂದೂ ಪ್ರಚಾರ ಬಯಸಿಲ್ಲ ಅವರು ಆ ರೀತಿ ಹೇಳಿಕೆ ಕೊಟ್ಟಿಲ್ಲ. ‘ಸಿದ್ದರಾಮಯ್ಯ ಅವರನ್ನು ಕ್ಷಮಿಸಲು ನಾನ್ಯಾರು’ ಎಂದು ಹೇಳಿದ್ದಾರೆ ಅಷ್ಟೆ. ಆದರೆ ಕೆಲ ಮಾಧ್ಯಮದಲ್ಲಿ ಸಿದ್ದರಾಮಯ್ಯ ಅವರನ್ನ ಕ್ಷಮಿಸಲ್ಲ ಎಂದು ವರದಿ ಮಾಡಿದ್ದಾರೆ. ಮಾಧ್ಯಮಗಳಲ್ಲಿ ಬಂದ ಇಂಥ ವರದಿಯಿಂದ ನನ್ನ ತಾಯಿ ನೊಂದುಕೊಂಡಿದ್ದಾರೆ, ನನ್ನ ಬಳಿಯೇ ನೋವನ್ನು ತೋಡಿಕೊಂಡಿದ್ದಾರೆ.

RELATED ARTICLES  ಬಿಸಿಯೂಟದಲ್ಲಿ ಹಾವು ಬಿದ್ದು 30 ಕ್ಕೂ ಹೆಚ್ಚು ಮಕ್ಕಳನ್ನು ಆಸ್ಪತ್ರೆಗೆ

ಆರ್.ಆರ್.ನಗರ ಮತ್ತು ಜಯನಗರ ಚುನಾವಣೆ ಅತ್ಯಂತ ಮಹತ್ವದ್ದು ಇಲ್ಲಿ ಅಭ್ಯರ್ಥಿ ಮುಖ್ಯ ಅಲ್ಲ, ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು. ಎರಡೂ ಕ್ಷೇತ್ರಗಳಲ್ಲಿ ಜನತೆ ನಮ್ಮ ಕೈ ಹಿಡಿಯಿರಿ. ನಾವು ನಿಮ್ಮ‌ ಜೊತೆಗೆ ಇರುತ್ತೇವೆ ಎಂದರು.

ಎಲ್ಲಾ ಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ. ರಾಜಕಾರಣ ಮಾಡಬೇಡಿ ಅಂತ ಮಾತ್ರವೇ ಕೆಲವು ಸ್ವಾಮೀಜಿಗಳಿಗೆ ಹೇಳಿದ್ದೇನೆ. ಸಣ್ಣ ಪುಟ್ಟ ಸ್ವಾಮಿಜಿಗಳನ್ನೂ ನಾನು ಗೌರವಿಸುತ್ತೇನೆ. ಸ್ವಾಮೀಜಿಗಳು ಧರ್ಮದ ರಕ್ಷಕರು ಅವರ ಮೇಲೆ ನನಗೆ ಅಪಾರ ಗೌರವ ಇದೆ. ಯಾವುದೇ ಸ್ವಾಮೀಜಿಗಳ ಪತ್ರ ನನಗೆ ಬಂದಿಲ್ಲ. ನಾನು ಯಾರನ್ನು ಲಘುವಾಗಿ ಪರಿಗಣಿಸಿಲ್ಲ, ನಮ್ಮನ್ನು ನಮ್ಮ ಸರ್ಕಾರನ್ನು ಯಾರು ಲಘುವಾಗಿ ಪರಿಗಣಿಸ ಬೇಡಿ. ನನ್ನಿಂದ ಯಾರಿಗಾದರು ನೋವಾಗಿದ್ದರೆ, ನನ್ನ ತಪ್ಪಿದ್ದರೆ ನಾನು ಕ್ಷಮೆ ಕೇಳಲು ಸಿದ್ಧ ಎಂದರು ಮುಖ್ಯಮಂತ್ರಿ ಕುಮಾರಸ್ವಾಮಿ.