ಕುಮಟಾ: ಜಿಲ್ಲಾ ಪಂಚಾಯತ ಉತ್ತರಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯ ಸಭಾಭವನದಲ್ಲಿ ನಡೆಯಿತು.
ಕುಮಟಾ ಪುರಸಭೆ ಅಧ್ಯಕ್ಷ ಸಂತೋಷ ನಾಯ್ಕ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ಪ್ರಜ್ಷೆಯನ್ನು ಬೆಳೆಸಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆ ಹಾಗೂ ಸಾಮೂಹಿಕ ಸ್ವಚ್ಛತೆಯನ್ನು ಕಾಪಾಡಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ನಾವೆಲ್ಲ ಶ್ರಮಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಮಟಾ ತಾಲೂಕಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ, ಬಹಿರಂಗ ಸ್ವಚ್ಛತೆ ಜೊತೆಗೆ ಅಂತರಂಗ ಸ್ವಚ್ಛತೆಗೂ ಮಹತ್ವ ನೀಡಬೇಕು. ಯುದ್ದ ರಣಗಂಗದಲ್ಲಿ ಪ್ರಾರಂಭವಾಗುವ ಮೊದಲು ಅಂತರಂಗದಲ್ಲಿ ಪ್ರಾರಂಭವಾಗುತ್ತದೆ. ಪರಿಸರ ಮಾಲಿನ್ಯದ ವಿರುದ್ಧದ ಯುದ್ದಕ್ಕೆ ಮೊದಲು ನಮ್ಮ ಅಂತರಂಗವನ್ನು ಸಿದ್ಧಮಾಡಿಕೊಳ್ಳೊಣ ಎಂದ ಅವರು, ಇಷ್ಟ ಪಟ್ಟಿದ್ದು ಸಿಕ್ಕಾಗ ಸಂತೋಷವಾಗುವುದು ಸಹಜ. ಆದರೆ ಅದನ್ನು ಕಷ್ಟು ಪಟ್ಟು ಪಡೆದಾಗ ಅತೀಯಾದ ಸಂತೋಷಕ್ಕೆ ಅದು ಕಾರಣವಾಗುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸಿನಡೆ ಸಾಗಬೇಕೆಂದರೆ ಸ್ಪರ್ಧೆ ಅನಿವಾರ್ಯ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವಲ್ಲಿ ಈ ಕಾರ್ಯಕ್ರಮ ಪೂರಕವಾಗಲಿ ಎಂದು ನುಡಿದರು.
ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಅಧ್ಯಕ್ಷತೆವಹಿಸಿದ್ದರು. ಸಮನ್ವಯಾಧಿಕಾರಿ ಶ್ರೀನಿವಾಸ ನಾಯಕ, ಮುಖ್ಯಾಧ್ಯಾಪಕಿ ಮಂಗಲಾ ನಾಯಕ ಉಪಸ್ಥಿತರಿದ್ದರು. ಉಲ್ಲಾಸ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಬಿ.ಆರ್.ಪಿ ಬಾಲಕೃಷ್ಣ ಭಟ್ಟ ವಂದಿಸಿದರು. ತಾಲೂಕಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಸಿದ್ದರು.

RELATED ARTICLES  ಭಟ್ಕಳದಲ್ಲಿ ಕಸದ ಬುಟ್ಟಿ ಹೊತ್ತು ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದ ಕಾರ್ಯಕರ್ತರಾದ ಶಾಸಕ ಸುನಿಲ್ ನಾಯ್ಕ