ಚಹಾ, ಕಾಫಿ ಎನ್ನುವುದು ನಮಗೆ ಹವ್ಯಾಸವಾಗಿ ಹೋಗಿದೆ. ಬೆಳಿಗ್ಗೆ ಎದ್ದ ಕೂಡಲೇ ಒಂದು ಕಪ್ ಚಹಾ ಅಥವಾ ಕಾಫಿ ಕುಡಿಯದೇ ಇದ್ದರೆ ದಿನವೇ ಸಾಗುವುದಿಲ್ಲ. ಕಾಫಿ ಕುಡಿಯುವುದರಿಂದ ಹಲವಾರು ರೀತಿಯ ಲಾಭಗಳು ಇವೆ ಎನ್ನುವ ಮಾತಿದೆ. ಆದರೆ ಇದು ತ್ವಚೆಗೆ ಕೂಡ ಪರಿಣಾಮಕಾರಿ ಎಂದು ಯಾರಿಗಾದರೂ ತಿಳಿದಿದೆಯಾ? ಹೌದು, ಕಾಫಿಯಿಂದ ಚರ್ಮಕ್ಕೆ ಹಲವಾರು ರೀತಿಯ ಲಾಭಗಳು ಇವೆ.

ಕಾಫಿಯು ಮುಖದಲ್ಲಿ ನೀರು ತುಂಬಿರುವ ಸಮಸ್ಯೆಯನ್ನು ನಿವಾರಿಸಿ, ಚರ್ಮವನ್ನು ಬಿಳಿಯಾಗಿಸಿ ನೆರಿಗೆ ತೆಗೆದು ಹಾಕುವುದು. ಇದನ್ನು ಫೇಸ್ ಮಾಸ್ಕ್ ಆಗಿ ಬಳಸಿಕೊಂಡಾಗ ರಕ್ತ ಸಂಚಾರ ಉತ್ತಮಪಡಿಸಿ, ಚರ್ಮವು ಕಾಂತಿಯುತವಾಗಿ ಹೊಳೆಯುವುವಂತೆ ಮಾಡುವುದು.

ಫಿಲ್ಟರ್ ಕಾಫಿ-ರುಚಿಕರವೇನೋ ಹೌದು, ಆದರೆ ಆದಷ್ಟು ಕಡಿಮೆ ಸೇವಿಸಿ!
ಕೊಬ್ಬಿನ ಕೋಶಗಳಲ್ಲಿ ಇರುವಂತಹ ನೀರಿನಾಂಶವನ್ನು ತೆಗೆದು ಅದನ್ನು ಒಣಗಿಸುವ ಮೂಲಕ ಸೆಲ್ಯೂಲೈಟ್ ಅನ್ನು ಕೆಫಿನ್ ಕಡಿಮೆ ಮಾಡುತ್ತದೆ. ಕಾಫಿಯನ್ನು ಫೇಸ್ ಮಾಸ್ಕ್ ಆಗಿ ಬಳಸಿದರೆ ಹಲವಾರು ಲಾಭಗಳು ನಿಮಗೆ ಆಗಲಿದೆ.

ಕಾಫಿಯ ಸ್ಕ್ರಬ್
ಕಾಫಿಯ ಸ್ಕ್ರಬ್ ಮಾಡಿದರೆ ಅದು ಸತ್ತ ಚರ್ಮವನ್ನು ಕಿತ್ತುಹಾಕಿ ಚರ್ಮವು ಸ್ವಚ್ಛ ಮತ್ತು ನಯವಾಗುವಂತೆ ಮಾಡುವುದು. ಚರ್ಮವು ಅತಿಯಾಗಿ ಒಣಗುವುದನ್ನು ಚರ್ಮವು ತಡೆಯುತ್ತದೆ.

ಬೇಕಾಗುವ ಸಾಮಗ್ರಿಗಳು
ಬೇಕಾಗುವ ಸಾಮಗ್ರಿಗಳು
*½ ಕಪ್ ಕಾಫಿ
*½ ಕಪ್ ಕಂದು ಸಕ್ಕರೆ
*½ ಕಪ್ ಆಲಿವ್ ತೈಲ

RELATED ARTICLES  ಸರಳ ಆಹಾರ, ಕ್ರಿಯಾಶೀಲ ಜೀವನ- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.

ಮಾಡುವ ವಿಧಾನ
*ಒಂದು ಸಣ್ಣ ಪಾತ್ರೆಗೆ ಹಾಕಿಕೊಂಡು ಎಲ್ಲವನ್ನೂ ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಸ್ವಲ್ಪ ಸಮಯ ಇದನ್ನು ಹಾಗೆ ಬಿಟ್ಟುಬಿಡಿ.
*ಇದನ್ನು ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿಕೊಳ್ಳಿ.
*ಸ್ವಲ್ಪ ಸಮಯ ಬಿಟ್ಟು ಮುಖ ತೊಳೆದು ನುಣ್ಣಗಿನ ಬಟ್ಟೆಯಿಂದ ಒರೆಸಿಕೊಳ್ಳಿ. ವಾರದಲ್ಲಿ ಎರಡು ಸಲ ಇದನ್ನು ಬಳಸಿ ಫಲಿತಾಂಶ ಪಡೆಯಿರಿ.

15 1497519204 grounded coffee 12 1473668818

ಕಾಫಿ, ಓಟ್ ಮೀಲ್ ಮತ್ತು ಮೊಸರಿನ ಮಾಸ್ಕ್
ಕಾಫಿ ಮತ್ತು ಓಟ್ ಮೀಲ್ ಸತ್ತ ಚರ್ಮವನ್ನು ಕಿತ್ತುಹಾಕುವುದು. ಮೊಸರು ಚರ್ಮಕ್ಕೆ ಕಾಂತಿ ನೀಡುವುದು.
ಬೇಕಾಗುವ ಸಾಮಗ್ರಿಗಳು
*1 ಚಮಚ ಕಾಫಿ
*1 ಚಮಚ ಮೊಸರು
*1 ಚಮಚ ಓಟ್ ಮೀಲ್

ವಿಧಾನ
ಎಲ್ಲವನ್ನು ಮಿಶ್ರಣ ಮಾಡಿಕೊಂಡು ರುಬ್ಬಿ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಕಾಲ ಮುಖದಲ್ಲಿ ಹಾಗೆ ಇರಲಿ. ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಜೇನುತುಪ್ಪ ಮತ್ತು ಕಾಫಿ ಮಾಸ್ಕ್
ಈ ಮಿಶ್ರಣವು ನಿಮಗೆ ಅದ್ಭುತ ಫಲಿತಾಂಶ ನೀಡಲಿದೆ. ಕಾಫಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಇದ್ದರೆ ಜೇನುತುಪ್ಪದಲ್ಲಿ ಮಾಯಿಶ್ಚರೈಸರ್ ಗುಣಗಳು ಇವೆ. ಇದು ಚರ್ಮಕ್ಕೆ ತಕ್ಷಣ ಮತ್ತು ದೀರ್ಘ ಕಾಲದ ಕಾಂತಿ ನೀಡಲಿದೆ.

RELATED ARTICLES  ದಪ್ಪಗಾಗಲು ಆರೋಗ್ಯಕರ ಸಲಹೆಗಳು ಇಲ್ಲಿವೆ ನೋಡಿ

ಬೇಕಾಗುವ ಸಾಮಗ್ರಿಗಳು
*1 ಚಮಚ ಕಾಫಿ ಹುಡಿ
*1 ಚಮಚ ಜೇನುತುಪ್ಪ

ಮಾಡುವ ವಿಧಾನ
*ಎಲ್ಲಾ ಸಾಮಗ್ರಿಗಳನ್ನು ಒಂದು ಸಣ್ಣ ಪಾತ್ರೆಗೆ ಹಾಕಿ
*ಮುಖಕ್ಕೆ ಹಚ್ಚಿಕೊಂಡು ವೃತ್ತಾಕಾರದಲ್ಲಿ ಮಸಾಜ್ ಮಾಡಿ.
*20 ನಿಮಿಷ ಕಾಲ ಹಾಗೆ ಬಿಡಿ. ಸ್ವಚ್ಛ ನೀರಿನಿಂದ ತೊಳೆದು ಒರೆಸಿಕೊಳ್ಳಿ.

ಕಾಫಿ ಮತ್ತು ಕೋಕಾ ಫೇಸ್ ಪ್ಯಾಕ್

ನಯವಾದ ತ್ವಚೆಗೆ ಇದು ಅತೀ ಪರಿಣಾಮಕಾರಿ ಮಾಸ್ಕ್ ಆಗಿದೆ. ಇದು ತ್ವಚೆಗೆ ತೇವಾಂಶ ನೀಡಿ ಆಳವಾಗಿ ಪೋಷಣೆ ನೀಡಿ ರಂಧ್ರಗಳನ್ನು ಬಿಗಿಗೊಳಿಸುವುದು. ಕಾಫಿ ಹಾಗೂ ಕೋಕಾದ ಸುವಾಸನೆಯು ನಿಮ್ಮ ಇಂದ್ರಿಯಗಳನ್ನು ಸುಗಮಗೊಳಿಸುವುದು.

ಬೇಕಾಗುವ ಸಾಮಗ್ರಿಗಳು
*2 ಚಮಚ ಕಾಫಿ
*2 ಚಮಚ ಕೋಕಾ ಹುಡಿ
*3 ಚಮಚ ಹಾಲು
*1 ಚಮಚ ಜೇನುತುಪ್ಪ

ವಿಧಾನ
*ಎಲ್ಲಾ ಸಾಮಗ್ರಿಗಳನ್ನು ಒಂದು ಸಣ್ಣ ಪಾತ್ರೆಗೆ ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
*ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಒಂದು ಗಂಟೆ ಕಾಲ ಹಾಗೆ ಬಿಡಿ.

ಇದು ನಯ ಹಾಗೂ ಕಾಂತಿಯುತ ಚರ್ಮವನ್ನು ನೀಡುವುದು.
*ನಿಮ್ಮ ತ್ವಚೆಗೆ ಒಳ್ಳೆಯ ಕಾಂತಿ ನೀಡಬೇಕೆಂದು ಬಯಸುವಿರಾದರೆ ಈ ಮಾಸ್ಕ್ ಅನ್ನು ಬಳಸಿಕೊಳ್ಳಿ