ಜೀವವೊಂದು ದಿನದ ಎಷ್ಟು ತಾಸು ಕೆಲಸ ಮಾಡುವ ಶಕ್ತಿ ಹೊಂದಿರುತ್ತದೆ? ನಮ್ಮ ಬಗಗೇ ವಿಚಾರ ಮಾಡಿ ನೋಡಿದರೆ ಅರಿವಾಗುತ್ತದೆ!!
ಆದರೆ ದೇವ ತಾನು ಎಷ್ಟು ತಾಸು ಕೆಲಸ ಮಾಡಬಲ್ಲ ???…. ನೋಡ ಬನ್ನಿ…
ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ವ್ಯಾಯಾಮ, ಸ್ನಾನ, ಸಂಧ್ಯಾವಂದನೆ, ರಾಮಾಯಣ ಪಾರಾಯಣ ಮುಗಿಸಿ…. ಗೋಸ್ವರ್ಗಕ್ಕೆ….ಬೆಳಗಿನ ಜಾವ 5-45 ಕ್ಕೆ…!! ಬೆಳಗಿನ 9-30 ರವರೆಗೂ ಗೋಸ್ವರ್ಗದ ಪ್ರತಿ ಘಟಕ- ವಿಭಾಗಕ್ಕೂ ಹೋಗಿ ಸ್ವತಃ ನಿಂತು ,ಮಾರ್ಗದರ್ಶನ!!
ಸ್ನಾನಾನಂತರ 10 ಘಂಟೆಯಿಂದ 11-30 ರವರೆಗೆ ಬೆಳಗಿನ ಪೂಜೆ…
ಗಣ್ಯರೊಡನೆ ಚರ್ಚೆ, ಹಲವು ಭಕ್ತರಿಂದ ಗೋಸ್ವರ್ಗಕ್ಕೆ ಸಮರ್ಪಣೆ,
12 ಘಂಟೆಗೆ ಆಶೀರ್ವಚನ…ಮಂತ್ರಾಕ್ಷತೆ… ಮುಗಿಸಿ ಗೋಸ್ವರ್ಗಕ್ಕೆ ಹೋದರೆ ವಿವಿಧ ವಿಭಾಗದವರಿಗೆ ವಿವಿಧ ವಿಷಯಗಳ ಕುರಿತಾಗಿ ಸಭೆ ಮತ್ತು ಮಾರ್ಗದರ್ಶನ…
ಸಾಯಂಕಾಲ 6-30 ರವರೆಗೆ ಗೋಸ್ವರ್ಗದಲ್ಲಿ… ಮತ್ತೆ ಬಂದು ಸ್ನಾನ…ಪೂಜೆ… ಮತ್ತೆ ಗೋಸ್ವರ್ಗಕ್ಕೆ!! ನಡು ನಡುವೆ ಹಲವು ಗಣ್ಯರು ಬಂದವರೊಡನೆ ಚರ್ಚೆ… ಆಶೀರ್ವಾದ!!!
ದೂರವಾಣಿ ಕರೆ ಮಾಡುವುದೂ ಇದೆ ನಡುವೆ! ಆಗಲಾದರೂ ಒಂದೆಡೆ ಕೂರಬಾರದೇ? ಚಟಪಟನೆ ಓಡಾಡುತ್ತಲೇ ಮಾತಾಡುವುದು! ಹೀಗೆ ಕಾರ್ಯನಿರ್ವಹಿಸಿದ್ದು ಒಂದು- ಎರಡು ದಿನವಲ್ಲ ತಿಳಿಯಿರಿ….ಎಷ್ಟು ಮಾಸಗಳು ಕಳೆದವೋ….? ದಣಿವಾಗದೇ ಧಣಿಗೆ??
ರಾತ್ರಿ 10….11…..12….1…. ಎಷ್ಟು ಗಂಟೆಗೆ ಎದ್ದು ನೋಡಿದರೂ ಶ್ರೀರಾಮ ಗೋಸ್ವರ್ಗ ದಲ್ಲಿ!!!! ಹಾಗೇ ಆ ಆ ವಿಭಾಗದಲ್ಲಿ ಕೆಲಸ ಮಾಡುವವರೂ ಶಿಫ್ಟ್ ಮೇಲೆ ಕೆಲಸ ಮಾಡುತ್ತಿರುತ್ತಾರೆ… ಆದರೆ ಶ್ರೀರಾಮನಿಗೆ ವಿರಾಮವಿಲ್ಲ!!
ಯಾರಿಗಾಗಿ ಇವೆಲ್ಲವೂ? ನಮಗಾಗಿ ಕೇವಲ ನಮಗಾಗಿ!! ಗೋಮಾತೆಯ ರಕ್ಷಿಸಲು…ಗೋವು ಲಕ್ಷ್ಮೀ ಎಂದು ಸಾಧಿಸಲು… ಹಾಗೆ ಸಾಧಿಸುವ ಮೂಲಕ ಮನುಕುಲವ ಉಳಿಸಲು…ನಿತ್ಯ ಪ್ರತಿಕ್ಷಣದ ಶ್ರಮ! ಆ ಕಾರುಣ್ಯ ಮೂರ್ತಿಯ ಜೀವಪ್ರೇಮಕೇನನ್ನೋಣ? ವಿಶ್ವಕರುಣೆಯ ವಾತ್ಸಲ್ಯದೀಪ್ತಿಗೆ ನಮಿಸುವುದಲ್ಲದೇ ಇನ್ನೇನು ಮಾಡಲು ಸಾಧ್ಯ ಈ ಸಾಮಾನ್ಯ ಜೀವ? ಹಸಿವು- ನಿದ್ರೆ- ವಿಶ್ರಾಂತಿಯ ತೊರೆದು ಹಗಲಿರುಳೂ ಶ್ರಮಿಸುವ ಆ ದೇವನ ಕಂಡಾಗ…ಆ ಅಸೀಮ- ಅಸಮ ಅನುಪಮ -ಅತುಲ್ಯ -ಅಮೋಘವೇಗಕ್ಕೆ ಸಮನಾಗಿ ಅರ್ಥೈಸಿಕೊಳ್ಳಲೂ ಆಗದ ನಮ್ಮಂಥವರ ಜಡಮತಿಯ ಬಗ್ಗೆ ಕನಿಕರವೆನಿಸುತ್ತದೆ!
ನಮ್ಮ ಯೋಗಕೆ ದೊರೆತ ಶ್ರೀರಾಮ! ನಮ್ಮ ಭಾಗ್ಯಕೆ ಭುವಿಗೆ ಬಂದ ಶ್ರೀರಾಮ! ನಮ್ಮೊಡಲ ಕುಡಿಯಂತೆ ಮಗುತನವು ಮನದಿ! ನಮ್ಮೆಲ್ಲ ನೋವಿಗೆ ವಾತ್ಸಲ್ಯ ಶರಧಿ! ನಿನ್ನಹೆಜ್ಜೆಯ ಗೆಜ್ಜೆ ನಾವೆಲ್ಲ ರಾಮ… ನಿನ್ನೊಡನೆ ಅದ್ವೈತ ಈ ಭಾವ ರಾಮ!!!
— ಗುರುಚರಣಸೇವಕಿ ಲಲಿತಾಲಕ್ಷ್ಮೀ