ಈ ಮಳೆ ….ಪ್ರವಾಹ ….ಕೆಲವೊಮ್ಮೆ ಬರ ….ಮತ್ತೆ ಕೆಲವೊಮ್ಮೆ ಕಟುಕರು …..ಎಷ್ಟೋ ಸಲ ಮನುಜ ತಿಂದುಳಿದ ಎಂಜಲು ….ಪ್ರೀತಿಯ ಬಂಧನವ ….ಕಡಿವ ಮನುಜ ….ಅವನಿಗೋ ….ದನದ ಮೇಲಿನ ಪ್ರೀತಿ ,ವ್ಯಾಮೋಹಕ್ಕಿಂತ ….ಧನದ ಮೇಲಿನ ವ್ಯಾಮೋಹ ಹೆಚ್ಚು …ಸಂಬಂಧಗಳಿಗೆ ಬೆಲೆಯೇ ಕೊಡಲಾರದಷ್ಟು !!
ಅಬ್ಬಾ ….ಗುರುವೇ ….ಹರಿಯೇ …ನೀನಾದರೂ ನಮಗಾಗಿ ಸ್ವರ್ಗವ ನಿರ್ಮಿಸಿದೆಯಲ್ಲಾ ….ನಮ್ಮೆಲ್ಲ ದು:ಖ~ದುಗುಡ~ದುಮ್ಮಾನಗಳ ನೀನರಿತು ….ನಮಗಾಗಿ ಸ್ವರ್ಗವನ್ನೇ ಧರೆಗಿಳಿಸುತ್ತಿರುವೆಯಲ್ಲವೇ ? ಇನ್ನು ನಮಗೆ ಕೊರತೆಯೆಂಬುದಿಲ್ಲವಿಲ್ಲಿ !! ತಾಯಿ~ಕರುಗಳ ಪ್ರೇಮಾಲಿಂಗನದಲಿ ಜಗ ಮರೆಯುವೆವು ನಾವು !! ಅಬ್ಬಾ …..ಅದೆಷ್ಟು ದಿನಗಳಾದವು ….ಕಂದನ ಮೈದಡವಿ ,ನೇವರಿಸಿ …ಅದ್ಯಾವ್ಯಾವುದೋ ಕಲುಷಿತ ನೀರ ಸೇವಿಸುತಿದ್ದೆ ….ಅದಕೆಲ್ಲ ಮುಕ್ತಿ ದೊರೆಯಿತು ನಿನ್ನಿಂದಾಗಿ ಹೇ ….ಗುರುದೇವಾ !! ಹಸಿದು …ಹಸಿದು ಬೀದಿಯೆಲ್ಲವ ಸುತ್ತಿ …ಸುತ್ತಿದರೂ ….ಹಳಸಿದ …ಎಸೆದ ಆಹಾರ ಸಿಗುತಿತ್ತು ….ಮತ್ತೆ …ಮನೆಗೆ ಬಂದರೆ …ಕರುಳ ಕುಡಿಗೆ ಸ್ವಲ್ಪವೂ …ನನ್ನೆದೆಯ ….ಭಾವದ್ರವ …ಹೌದು ….ಭಾವದ್ರವ ಸಿಗದಂತೆ ಕೆಚ್ಚಲ ಹಿಂಡಿ ಹಿಂಡಿ ಹಿಪ್ಪೆ ಮಾಡುತ್ತಿದ್ದ ….ಇನ್ನು …..ಕೆಲವೊಮ್ಮೆ ನನ್ನ ಯಜಮಾನ ನನ್ನ ಕಟ್ಟಿ ಹಾಕುತ್ತಿದ್ದ ….ಬಿಸಿಲೆಂದರೇನು ಎಂಬುದನ್ನೇ ಮರೆಯುವಷ್ಟು ….
ಇದೆಲ್ಲಕ್ಕೂ ಮುಕ್ತಿ ಸಿಗುವ ಕಾಲ ಬಂದಿದೆ ….ಶ್ರೀ ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಹತ್ಸಂಕಲ್ಪ ….#ಗೋಸ್ವರ್ಗ ….ಅವರ ಮಹತ್ಸಂಕಲ್ಪದೊಂದಿಗೆ ಕೈ ಜೋಡಿಸಿದ ಅದೆಷ್ಟೋ ಶಿಷ್ಯ ಬಿಂದುಗಳು ,ಗೋಪ್ರೇಮಿಗಳು ….ಹಗಲಿರುಳೆನ್ನದೇ ಕಾರ್ಯೋನ್ಮುಖರಾಗಿರುವುದು ತಿಳಿದು ಎನ್ನ ಮನ ನಲಿದಾಡಿತು ….ಅದೆಷ್ಟು ದಾನಿಗಳು ….ನನಗಾಗಿ ಏನೆಲ್ಲವ ದಾನವಾಗಿ ನೀಡಿ ಎನ್ನ ಅನುಗ್ರಹಕೆ ಪಾತ್ರರಾದರೋ ….ಅವರ ಜೀವನವು ಅಭಿವೃದ್ಧಿ ಹೊಂದಲಿ ….ಇನ್ನು .ನಾಳೆ ಲೋಕಾರ್ಪಣೆಯ ನಂತರ ..ನಿತ್ಯವೂ ಹಲವಾರು ಖರ್ಚುಗಳಿವೆ …ಗೋಪ್ರೇಮಿಗಳಾದ ನಿಮ್ಮೆಲ್ಲರ ತನು~ಮನ~ಧನ ಸದಾ ನಿರೀಕ್ಷಿಸುವೆ …ನನ್ನೊಳಿತಿನಲಿ ಜಗದೊಳಿತೇ ಅಡಗಿದೆ ಹೇ ಮಾನವಾ !
ಬನ್ನಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ #ಭಾನ್ಕುಳಿ ಯಲಿರುವ ಗೋಲೋಕ #ಗೋಸ್ವರ್ಗ ಕೆ ….ನಾಳೆ ಲೋಕಾರ್ಪಣೆ ….ಗೋಧೂಳಿ ಮುಹೂರ್ತದಲ್ಲಿ ….
ದೇಶದೆಲ್ಲೆಡೆಯ ಹಲವಾರು ಮಹಾನ್ ವ್ಯಕ್ತಿಗಳು ವೇದಿಕೆಯನಲಂಕರಿಸುವರಂತೆ !! ನೀವೆಲ್ಲರೂ ಅಲ್ಲಿ ನನ್ನ ಸೌಖ್ಯವ ಕಣ್ಣರಳಿಸಿ ನೋಡುವಿರಂತೆ !! ಬನ್ನಿ …ಸಾಕ್ಷಿಗಳಾಗಿ …ಜಗದ ಮೊದಲ #ಗೋಸ್ವರ್ಗ ಅನಾವರಣಗೊಳ್ಳುವ ಸುಸಮಯ !!
ವಂದೇ ಗೋಮಾತರಂ
ಬರಹ : ” ಸುವಿಚಾರ “

RELATED ARTICLES  ಆತ್ಮಹತ್ಯೆಗೆ ಶರಣಾದ ಖ್ಯಾತ ಸಿನಿಮಾ ನಟ.