ಕುಮಟಾ : ಜೆಡಿಎಸ್ ಹಾಗೂ ಕಾಂಗ್ರೆಸ್ ಕರ್ನಾಟಕದಲ್ಲಿ ಅಪವಿತ್ರ ಮೈತ್ರಿ ಸರ್ಕಾರ ರಚನೆ ಮಾಡಿ ರೈತರ ಬಗ್ಗೆ ನಿರಾಸಕ್ತಿ ತೊರಿರುವುದನ್ನು ಖಂಡಿಸಿ ಸದನದಲ್ಲಿ ಯಡಿಯೂರಪ್ಪ ನವರು 24 ಗಂಟೆ ಗಡುವು ನೀಡಿ ಸಾಲಮನ್ನಾ ಮಾಡಿ ಇಲ್ಲದೇ ಹೋದಲ್ಲಿ ಸೋಮವಾರ ಕರ್ನಾಟಕ ಬಂದ್ ಮಾಡುವಂತೆ ಕೋರಿಕೊಳ್ಳುವುದಾಗಿ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕುಮಟಾ ಮಂಡಳ ದ ಬಿಜೆಪಿ ಘಟಕ ಹಾಗೂ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸೋಮವಾರ ನಗರದ ಎಲ್ಲ ವರ್ತಕರು ಎಲ್ಲ ಸಂಘಟನೆಗಳು ಬಂದ್ ನಲ್ಲಿ ಕೈಜೋಡಿಸವಂತೆ ಹಾಗೂ ಸ್ವಯಂ ಪ್ರೇರಣೆಯಿಂದ ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಡ ಹಾಕೋಣ ಹಾಗೂ ನಾವು ಬಂದ್ ಮಾಡುವಂತೆ ಯಾರ ಮೇಲೂ ಒತ್ತಡ ಹಾಕೋದಿಲ್ಲ ರೈತರಿಗಾಗಿ ಜನವಿರೋಧಿ ಸರ್ಕಾರದ ವಿರುದ್ಧ ಎಲ್ಲರೂ ಕೈಜೋಡಿಸೋಣ ಎಂದು ಶಾಸಕರು ವಿನಂತಿಸಿದರು.
ಕುಮಟಾ ಮಂಡಳ ಅಧ್ಯಕ್ಷ ಕುಮಾರ ಮಾರ್ಕಾಂಡೆ ಕೂಡ ಬಂದ್ ಗೆ ಕ್ಷೇತ್ರದ ಜನತೆ ಸಹಕರಿಸುವಂತೆ ಹಾಗೂ ಸೋಮವಾರ ಬೆಳಿಗ್ಗೆ 10.30 ಕ್ಕೆ ಕುಮಟಾ ತಹಶೀಲ್ದಾರ್ ಕಚೇರಿ ಎದುರು ಸೇರುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯಕ, ಡಾ ಜಿ ಜಿ ಹೆಗಡೆ, ಗಜಾನನ ಪೈ, ಹೇಮಂತ ಗಾಂವ್ಕರ್, ಜಗದೀಶ್ ಬಳ್ಳಾಳ, ಅಶೋಕ ಪ್ರಭು, ಚೇತೇಶ್ ಶಾನಭಾಗ, ವಿನಾಯಕ ಭಟ್ಟ, ಕಿಶನ್ ವಾಳ್ಕೆ, ವಿಶ್ವನಾಥ ನಾಯ್ಕ,ಲಿಂಗಪ್ಪ ನಾಯ್ಕ ಮತ್ತು ಎಲ್ಲ ಮೋರ್ಚಾ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು..