ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಹುಮತ ಸಾಬೀತು ಪಡಿಸಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಹಲವು ಹೊಂದಾಣಿಕೆಯೊಂದಿಗೆ ಜೆಡಿಎಸ್ ನೊಂದಿಗೆ ವಿಶ್ವಾಸ ಪಡೆಯುವಲ್ಲಿ ಯಶಸ್ವಿಗೊಂಡಿದೆ.

ಆದಾಗ್ಯೂ, ಜೆಡಿಎಸ್ ನೊಂದಿಗೆ ಅಧಿಕಾರ ಹಂಚಿಕೆಯಂತೆ ಕಾಂಗ್ರೆಸ್ 22 ಸಚಿವ ಸ್ಥಾನಗಳನ್ನು ಪಡೆದುಕೊಂಡಿದ್ದು, ಯಾರಿಗೆ ಯಾವ ಖಾತೆ ಹಂಚಿಕೆ ಮಾಡಬೇಕೆಂಬುದು ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ.

ಇಬ್ಬರು ಪಕ್ಷೇತರ ಶಾಸಕರು ಸೇರಿದಂತೆ ಕಾಂಗ್ರೆಸ್ ನಲ್ಲಿ 80 ಶಾಸಕರಿದ್ದಾರೆ. ಇಡೀ ಪ್ರಕ್ರಿಯೆಯಲ್ಲಿ ಜಾತಿಯ ಅಂಶವು ಪ್ರಮುಖ ಪಾತ್ರ ವಹಿಸುವುದರ ಮೂಲಕ ಪಕ್ಷದ ಸದಸ್ಯರಲ್ಲಿ ಎದೆ ಉರಿಯನ್ನು ಕಡಿಮೆಗೊಳಿಸುತ್ತದೆ. ಪಕ್ಷದ ಹಿರಿಯ ಮುಖಂಡರು ಈಗ ಜಾತಿ ಹೊಂದಾಣಿಕೆ ಮಾಡುವಲ್ಲಿ ನಿರತರಾಗಿದ್ದಾರೆ.
ಕಾಂಗ್ರೆಸ್ ಪಕ್ಷದ ಸಚಿವರ ಆಯ್ಕೆ ಕಷ್ಟಸಾಧ್ಯ. ಸೀಮಿತ ಸಂಖ್ಯೆಯ ಸಚಿವ ಸ್ಥಾನಗಳಿದ್ದರೂ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

RELATED ARTICLES  ದಿನಾಂಕ 23/06/2019ರ ದಿನ ಭವಿಷ್ಯ ಇಲ್ಲಿದೆ

ಕಾಂಗ್ರೆಸ್ ಬ್ರಾಹ್ಮಣ ರಮೇಶ್ ಕುಮಾರ್ ಅವರನ್ನು ಈಗಾಗ್ಗಲೇ ಸ್ಪೀಕರ್ ಆಗಿ ಆಯ್ಕೆ ಮಾಡಿದೆ. ಈ ಸಮುದಾಯದಿಂದ ದಿನೇಶ್ ಗುಂಡೂರಾವ್ ಹಾಗೂ ಆರ್. ವಿ. ದೇಶಪಾಂಡೆ ಅವರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ.
9 ಕುರುಬ ಶಾಸಕರ ಪೈಕಿ ಕನಿಷ್ಠ ಇಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕಾಗುತ್ತದೆ. ಇತರೆ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಮೂರು ಸಚಿವ ಸ್ಥಾನವಾದರೂ ನೀಡಬೇಕಾಗುತ್ತದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 03-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ದಲಿತ ಸಮುದಾಯಕ್ಕೆ ಈಗಾಗಲೇ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಈ ಸಮುದಾಯದಲ್ಲೇ ಬಲ ಹಾಗೂ ಎಡ ಉಪಜಾತಿಗೆ ಒಂದೊಂದು ಸ್ಥಾನ ನೀಡುವ ಬಗ್ಗೆ ಪಕ್ಷ ಭರವಸೆ ನೀಡಿದೆ.

ಇನ್ನೂ ಅಲ್ಪಸಂಖ್ಯಾತ ಸಮುದಾಯದಿಂದ ಇಬ್ಬರು ಸಚಿವರನ್ನಾಗಿ ಮಾಡಲಾಗುತ್ತದೆ. ಜೆಡಿಎಸ್ ಈ ಸಮುದಾಯದ ಒಬ್ಬರನ್ನು ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ. ಒಟ್ಟಾರೇ, ಈ ಸಮುದಾಯದಿಂದ ಮೂವರು ಸಂಪುಟದಲ್ಲಿರುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ.
ಲಿಂಗಾಯಿತ ಸಮುದಾಯದಿಂದ 2 ಅಥವಾ ಮೂರು, ಒಕ್ಕಲಿಗ ಸಮುದಾಯದಿಂದ 2, ಮಹಿಳೆಯರ ವಿಭಾಗದಿಂದ ಒಬ್ಬರು ಸಚಿವ ಸಂಪುಟ ಸೇರುತ್ತಾರೆ ಎಂದು ಮತ್ತೊಬ್ಬ ನಾಯಕರು ತಿಳಿಸಿದ್ದಾರೆ.