ಶ್ರೀರಾಮನಾಶಯದ ಶ್ರೀರಾಮನಾಶ್ರಯದ ಮಹತ್ಸಂಕಲ್ಪ ಗೋಸ್ವರ್ಗ! ಈ ಸಂಕಲ್ಪವನ್ನು ಜಗಕೆ ಅನಾವರಣಗೊಳಿಸುವಲ್ಲಿ ಪ್ರತಿಯೊಬ್ಬ ಶಿಷ್ಯನ ಪಾತ್ರವೂ ಬಹ ಹಿರಿದು!
ಸಾಮಾನ್ಯವಾಗಿ ಮಾತೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ, ಗೋಸ್ವರ್ಗದಲ್ಲಿ ಸೇವೆ ಸಲ್ಲಿಸಲು ಬಂದವರಿಗೆ, ನೋಡಬಂದವರಿಗೆ ಶಬರಿಯಂದದಿ ನಿತ್ಯ ಊಟೋಪಚಾರವಿತ್ತು ಮಾತೆಯ ಸ್ಥಾನ ತುಂಬುತ್ತಿರುವುದು ನಿತ್ಯ ನೋಟ!!
ಆದರಿದೋ ವಿಶೇಷ!! ಮಾತೆಯರಲ್ಲಿ ಕೆಲವರು ಗೋಸ್ವರ್ಗದಲ್ಲಿ ಗುದ್ದಲಿ ಹಿಡಿದರು!!! ಮಳಲು ಹೊತ್ತರು!! ಕಲ್ಲು ಹೊತ್ತರು!! ಮಹಿಳೆಯರೂ ದಿನಗೂಲಿಗೆ ಬರುತ್ತಾರೆ ಇದರಲ್ಲೇನು ವಿಶೇಷ ಅಂದಿರಾ?? ಇವರು ದಿನಗೂಲಿಯವರಲ್ಲ… ಶ್ರೇಷ್ಠ ಮನೆತನದ, ಸದಾ ಸುಖದಿಂದ ಬಾಳುತ್ತಿರುವ ಮಾತೆಯರು! ಇಂಥ ಕೆಲಸಗಳನ್ನು ಕನಸಿನಲ್ಲೂ ಮಾಡುವ ಅಗತ್ಯವಿಲ್ಲದವರು….!!! ಇವರು ಮಾತೆಯರು!! ಗೋಸ್ವರ್ಗದ ವೀರ ವನಿತೆಯರು!!
ಸಕಲ ಗುರುಭಕ್ತರಿಂದ ತನು- ಮನ- ಧನಗಳಿಂದ ಸೇವಿಸಲ್ಪಟ್ಟ ಗೋಸ್ವರ್ಗ ನೋಡಬೇಕೇ? ಬನ್ನಿ…ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿಗೆ! ಕನಸಿನ ಪರಮ ಪುಣ್ಯದ ಘಳಿಗೆ ದಿನಾಂಕ 27-05-2018 ರಂದು ಲೋಕಾರ್ಪಣೆಗೊಳ್ಳಲಿದೆ!! ಪ್ರೇಕ್ಷಕರಾಗಿಯಾದರೂ ಪುಣ್ಯ ಪಡೆಯುವಾ…ನಿಮಗಿದೋ ಆಗ್ರಹ ಕರೆಯ….
— ಗುರುಚರಣಸೇವಕಿ ಲಲಿತಾಲಕ್ಷ್ಮೀ