ನಮ್ಮ ಕಾಲಘಟ್ಟದಲ್ಲಿ ನಾವು ಕಾಣುವ ಭಾಗ್ಯ! ಹಸಿರು ಹೊನ್ನಿನ ಗಣಿ, ಪ್ರಾಕೃತಿಕ ಸಂಪತ್ತಿನ ಖನಿ ಎನಿಸಿದ ಭಾನ್ಕುಳಿಯೆಂಬ ಸ್ಥಳ — ಹಿರಿಯರ ತಪೋಫಲದ ಅಂಗವಾಗಿ ಇಂದು #ಗೋಸ್ವರ್ಗ ವಾಗಿ ಪರಿಣಮಿಸಿದೆ!
ಮಾನವನ ಕ್ರೌರ್ಯಕ್ಕೆ ನಲುಗಿ ನರಳುತ್ತಿರುವ ಗೋವಿಗೆ ಸಹಜ ಜನನ, ಸಹಜ ಜೀವನ, ಸಹಜ ಮರಣ ಒದಗಿಸಿ “ಗೋವು ಲಕ್ಷ್ಮೀ” “ನಾವು ಬದುಕಲು ಗೋವು ಬದುಕಿರಬೇಕು” ಎಂಬುದನ್ನು ಸಾಧಿಸುವ ನಿಟ್ಟಿನಲ್ಲಿ Sri Raghaveshwara Bharathi Swamiji ಕಂಡ ಅದ್ಭುತ ಕನಸು ಗೋಸ್ವರ್ಗ! ಅದು. ಇಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಭಾನ್ಕುಳಿಯಲಿ ನನಸಾಗಿದೆ! ಸ್ವರ್ಗದಿಂದ ಧರೆಗಿಳಿದ ಕಾಮಧೇನುವಿನ “ಭೂಸ್ವರ್ಗ” ವು ದಿನಾಂಕ 27-05-2018 ರಂದು ಶ್ರೀಕರಗಳಿಂದ, ಗಣ್ಯರ ಉಪಸ್ಥಿತಿಯಲ್ಲಿ ಸಹಸ್ರ ಸಹಸ್ರ ಗೋಪ್ರೇಮಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ!
ಏನೇನಿದೆ ಗೋಸ್ವರ್ಗದಿ….? ನೋಡೋಣ ಬನ್ನಿ…
ಸಪ್ತಸನ್ನಿಧಿ–ಗೋಸ್ವರ್ಗದ ನಡುವಿನಲ್ಲಿ ತೀರ್ಥಕುಂಡವಿರುತ್ತದೆ. ಇದರಲ್ಲಿ ಏಳು ದೇವತೆಗಳ ವಿಶೇಷ ಸಾನ್ನಿಧ್ಯವಿರುತ್ತದೆ. ಸೀತಾರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರೀ, ಆಂಜನೇಯ, ಭುವನಗಿರಿಯ ಭುವನೇಶ್ವರಿ, ಇಟಗಿಯ ರಾಮೇಶ್ವರ, ಶ್ರೀರಾಮಚಂದ್ರಾಪುರಮಠದ ಗುರುಪರಂಪರೆ.
ಗೋತೀರ್ಥ–ಈ ಜಲಸನ್ನಿಧಿಯ ಸುತ್ತ *ಗೋತೀರ್ಥ* ವೆನ್ನುವ ಪವಿತ್ರ ಸರೋವರವಿರುತ್ತದೆ.
ಗೋಪದ–ಗೋತೀರ್ಥದ ನಾಲ್ಕು ದಿಕ್ಕಿನಲ್ಲಿ ಗೋವಿನ ಉಪಾಸನೆಗಾಗಿ ನಾಲ್ಕು *ಗೋಪದ* ವೇದಿಕೆಗಳಿರುತ್ತವೆ.
ಗೋವಿರಾಮ– ಗೋಪದದ ಸುತ್ತ ಸಾವಿರ ಗೋವುಗಳು ಸ್ವಚ್ಛಂದವಾಗಿ ತಂಪಿನಲ್ಲಿ ಇರುವ *ಗೋವಿರಾಮ* ವಿರುತ್ತದೆ.
ಗೋವಿಹಾರ–ಗೋವಿರಾಮದ ಸುತ್ತ ಇರುವ *ಗೋವಿಹಾರ* ದಲ್ಲಿ ಗೋವುಗಳು ಬಿಸಿಲಿಗೆ ಮೈಯೊಡ್ಡಿ ಮುಕ್ತವಾಗಿ ಸಂಚರಿಸುವ ವ್ಯವಸ್ಥೆ ಇರುತ್ತದೆ.
ಗೋಗಂಗಾ– ಗೋವಿಹಾರದ ಒಂದು ಬದಿಯಲ್ಲಿ ಗೋತೀರ್ಥದಿಂದ ಹರಿದುಬರುವ ಪವಿತ್ರ ತೀರ್ಥದಿಂದ ಶುದ್ಧವಾಗಲು *ಗೋಗಂಗಾ* ತೀರ್ಥಸ್ನಾನಘಟ್ಟವಿರುತ್ತದೆ.
ತೀರ್ಥಪ–ಗೋವುಗಳನ್ನು ವೀಕ್ಷಿಸುತ್ತಾ ಸಪ್ತಸನ್ನಿಧಿಯ ವರೆಗೆ ವೀಕ್ಷಕರು ಸಾಗಲು ನಾಲ್ಕು *ತೀರ್ಥಪಥ* ಗಳಿರುತ್ತವೆ.
ಪರಿಕ್ರಮಪಥ–ಗೋಸ್ವರ್ಗದ ಸುತ್ತ ಗೋವುಗಳ ವೀಕ್ಷಣೆಗೆಂದು *ಪರಿಕ್ರಮಪಥ*
ವಿರುತ್ತದೆ.
ರಥಪಥ– ಗೋವಿನ ಹಬ್ಬದಂದು ಜೀವಂತ ಗೋವನ್ನು ಹೊತ್ತೊಯ್ಯುವ ರಥದ ಪಥವೇ ರಥಪಥ.
ಗೋಧಾರಾ–ಗೋಸ್ವರ್ಗದ ಪಕ್ಕದಲ್ಲಿ ಹರಿಯುತ್ತದೆ *ಗೋಧಾರಾ*.
ಗೋನಂದನ–ಗೋಧಾರೆಯ ಮೇಲಿನ ಗೋವರ್ಧನಗಿರಿಯಲ್ಲಿ *ಗೋನಂದನ* ಎನ್ನುವ ಉದ್ಯಾನಚೇ ಗೋನಂದನ.
ವೀಕ್ಷಾಗೋಪುರ–ಗೋನಂದನದಲ್ಲಿ ಎತ್ತರದಿಂದ ಗೋಸ್ವರ್ಗದ ಮತ್ತು ಸುತ್ತಲಸುಂದರ ಪ್ರಕೃತಿಯ ವೀಕ್ಷಣೆಗಾಗಿ ಇರುತ್ತದೆ *ವೀಕ್ಷಾಗೋಪುರ*.
ಗೋಪಾಲಕರ ವಸತಿಗಾಗಿ *ಗೋಪಾಲಭವನ* ;
ಗೋ ಆಹಾರದ ಸಂಗ್ರಹಕ್ಕಾಗಿ *ಗೋಗ್ರಾಸಭವನ*
;ವಿಶಾಲವಾಗ ಹುಲ್ಲುಗಾವಲು *ಸುಗ್ರಾಸ*
ಬಹುದೊಡ್ಡ ಗವ್ಯೋತ್ಪನ್ನ ಘಟಕ *ಗೋಫಲ*
ಇದೇ ಪರಿಸರದಲ್ಲಿ ವಿಶಿಷ್ಟವಾದ *ಗುರುಭವನ* ಗಳಿವೆ.
ಇಂಥ ವಿಶಿಷ್ಟ , ಪ್ರಪಂಚದಲ್ಲೇ ಏಕೈಕ ಗೋಸ್ವರ್ಗ ನೋಡಿ, ಸೇವೆ ಸಲ್ಲಿಸಿ ಬದುಕಿತ್ತ ಭಗವಂತನ ನಿರ್ಮಿತಿಯ ಕ್ಷಣಗಳನ್ನು ಸಾರ್ಥಕಗೊಳಿಸಲು ಬನ್ನಿ ಗೋಸ್ವರ್ಗಕೆ… ಧರೆಗಿಳಿದ ಭೂಸ್ವರ್ಗಕೆ!
— ಗುರುಚರಣಸೇವಕಿ ಲಲಿತಾಲಕ್ಷ್ಮೀ