ಜಗತ್ತಿನ ಮೊತ್ತ ಮೊದಲ #ಗೋಸ್ವರ್ಗ ಅನಾವರಣಗೊಳ್ಳಲು ಇನ್ನು ಕೇವಲ ಕೆಲವೇ ಗಂಟೆಗಳಷ್ಟೇ ಉಳಿದುಕೊಂಡಿವೆ …ಗೋಮಾತೆಗೆ ಬಂಧನವಿಲ್ಲದ ಜೀವನ ನಿಶ್ಚಿತ ..,ಸಹ್ಯಾದ್ರಿಯ ಹಸಿರ ತಪ್ಪಲಲ್ಲಿ ಇರುವ ಸಿದ್ದಾಪುರದ #ಭಾನ್ಕುಳಿ ಯಲ್ಲಿ ಕೇವಲ 80 ದಿನಗಳಲ್ಲಿ ಶ್ರೀ ಗುರುಗಳಾದ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಹತ್ಸಂಕಲ್ಪ ,ಅತ್ಯದ್ಬುತವಾಗಿ …ಗೋಕುಲವಾಗಿ ,ಗೋಸ್ವರ್ಗವಾಗಿ ಧರೆಗಿಳಿಯುತ್ತಿದೆ . ಶ್ರೀ ರಾಮನಾಗಿ ,ಶ್ರೀ ಕೃಷ್ಣನಾಗಿ ಅವತರಿಸಿಹರು ಶ್ರೀ ಗುರುಗಳು ….ಗೋವಿನ ನೋವನಳಿಸಲು ಕೃಷ್ಣನೇ ಶ್ರೀ ಗುರುಗಳಾಗಿ ಜನ್ಮವೆತ್ತಿದರೇನೋ ….
ಹಗಲು~ಇರುಳುಗಳ ವ್ಯತ್ಯಾಸ ತಿಳಿಯುದೇನು ಈ ಫೋಟೋಗಳಲ್ಲಿ ಕಾರ್ಯನಿರತರಾಗಿರುವವರನ್ನು ನೋಡಿದಾಗ ? ಜಗ ಬೆಳಗುವ ಸೂರ್ಯ ವಿಶ್ರಾಂತಿಗಾಗಿ ಹೋದರೂ ….ಕಾರ್ಯಕರ್ತರು ಶಿಫ್ಟ್ ಮೂಲಕ ಬದಲಾದರೂ ….ಗೋಮಾತೆಯ ಬಾಳ ನೋವನೆಲ್ಲವನೂ ….ಇಲ್ಲವಾಗಿಸಹೊರಟ ….
” ಗೋವು~ಲಕ್ಷ್ಮೀ ” ಎಂದು ಸಾಧಿಸ ಹೊರಟ ,ಜಗಕೆ ತೋರಿಸಹೊರಟ ಶ್ರೀ ಗುರುಗಳು ಪೂಜಾ ಸಮಯ ಬಿಟ್ಟು ಉಳಿದೆಲ್ಲಾ ಸಮಯವನ್ನು ….ಖುದ್ದು ಮಾರ್ಗದರ್ಶನ ನೀಡುತ್ತಾ ಗೋಸ್ವರ್ಗದಲ್ಲೇ ಕಳೆಯುತ್ತಿದ್ದಾರೆ ….ದಣಿವರಿಯದೇ ….ದೇಹ ….
ಬನ್ನಿ ….ಗೋಮಾತೆಯ ಹಾಲು ಕುಡಿದ ಋಣ ನಮ್ಮ~ನಿಮ್ಮೆಲ್ಲರ ಮೇಲಿದೆ .ಸಾಧ್ಯವಾದಷ್ಟು ಆ ಋಣವ ತೀರಿಸೋಣ ….
* ಏನ ಮೀಸಲು ಮಾಡಲಿ …
.ಸದ್ಗುರುವಿಗೆ ಎಂತ ಮೀಸಲು ಮಾಡಲಿ *
ಬನ್ನಿ ….ಗೋಸ್ವರ್ಗ ಎಂಬ ಮಹಾ ಸಿಂಧುವಿನಲಿ ಬಿಂದುವಾಗಿಯಾದರೂ ಸೇವೆ ಸಲ್ಲಿಸೋಣ .27ಮೇ,2018 ರಂದು ಲೋಕಾರ್ಪಣೆ ಗೊಳ್ಳಲಿದೆ #ಗೋಸ್ವರ್ಗ
ವಂದೇ ಗೋಮಾತರಂ
ಬರಹ : ” ಸುವಿಚಾರ “