ಭಾರತ ಸಕಾರದ ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಇನ್ಸ್’ಫೆಕ್ಟರ್, ತೆರಿಗೆ ಸಹಾಯಕ, ಬಹು ಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್ ಸ್ಟ್ಯಾಪ್) ಹುದ್ದೆಗಳಿಗೆ ಕ್ರೀಡಾ ಕೋಟಾದಡಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 32
ಹುದ್ದೆಗಳ ವಿವರ
1.ಆದಾಯ ತೆರಿಗೆ ಇನ್ಸ್’ಫೆಕ್ಟರ್ – 07
2.ತೆರಿಗೆ ಸಹಾಯಕ – 11
3.ಬಹು ಕಾರ್ಯ ಸಿಬ್ಬಂದಿ (ಮಲ್ಟಿ ಟಾಸ್ಕಿಂಗ್ ಸ್ಟ್ಯಾಪ್) – 14
ವಿದ್ಯಾರ್ಹತೆ : ಕ್ರ.ಸಂ 1 ಮತ್ತು 2ರ ಹುದ್ದೆಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಪದವಿ ಪಡೆದಿರಬೇಕು. ಕ್ರ ಸಂ 3ರ ಹುದ್ದೆಗೆ ಎಸ್.ಎಸ್.ಎಲ್.ಸಿ (ಮೆಟ್ರಿಕ್ಯುಲೇಷನ್) ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.
ಕ್ರೀಡಾ ಕೋಟಾದ ಅರ್ಹತೆ : 2015 ರಿಂದ 2018ರ ವರೆಗಿನ ವರ್ಷದಲ್ಲಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿರಬೇಕು.

RELATED ARTICLES  ಮಕ್ಕಳ ಆರೋಗ್ಯಕ್ಕೆ ಮನೆ ಮದ್ದು

ವಯೋಮಿತಿ : ಕನಿಷ್ಠ ವಯೋಮಿತಿ 18 ವರ್ಷ ನಿಗದಿ ಮಾಡಿದ್ದು, ಗರಿಷ್ಠ ವಯೋಮಿತಿಯನ್ನು 25 ವರ್ಷಕ್ಕೆ ನಿಗದಿ ಮಾಡಲಾಗಿದೆ. ಮಿಸಲಾತಿ ಪಡೆಯುವ ಹಿಂದುಳಿದ ವರ್ಗದವರಿಗೆ 5 ವರ್ಷ, ಪ.ಜಾ, ಪ.ಪಂ.ದವರಿಗೆ 10 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-06-2018

RELATED ARTICLES  ಅಮೃತಧಾರಾ ಗೋ ಶಾಲೆಯಲ್ಲಿ "ಆಲೆಮನೆ ಹಬ್ಬ" ಹಾಗೂ "ಗೋ ಸಂಧ್ಯಾ" ಕಾರ್ಯಕ್ರಮ.

ಹೆಚ್ಚಿನ ಮಾಹಿತಿಗಾಗಿ www.incometaxindia.gov.in , ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.tnincometax.gov.in ಗೆ ಭೇಟಿ ನೀಡಿ.