ಕುಮಟಾ:ಕುಮಾರಸ್ವಾಮಿ ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿದವರು ಈಗ ಕಾಂಗ್ರೆಸ್ ಜೊತೆಗೆ ಸೇರಿ ಸಾಲಮನ್ನಾ ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಮಾತನಾಡುತ್ತಿರುವುದನ್ನು ಖಂಡಿಸಿ ರೈತರ ಪರವಾಗಿ ಯಡಿಯೂರಪ್ಪ ನವರು ರಾಜ್ಯಾದ್ಯಂತ ಬಂದ್ ಗೆ ಕರೆನೀಡಿದ ಹಿನ್ನೆಲೆಯಲ್ಲಿ ಕುಮಟಾದಲ್ಲಿಯೂ ಕೃಷಿಕ ಸಮಾಜದ ನೇತೃತ್ವದಲ್ಲಿ ಶಾಸಕ ದಿನಕರ ಶೆಟ್ಟಿ ಹಾಗೂ ಬಿಜೆಪಿ ಕುಮಟಾ ಮಂಡಳ ಸೇರಿ ತಹಶೀಲ್ದಾರ್ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರಿಗೆ ಮನವಿ ನೀಡಿದರು
ಕೃಷಿಕ ಸಮಾಜದ ಪ್ರದೀಪ ಕುಮಾರ್ ಹೆಗಡೆ ಮಾತನಾಡಿ ರೈತರು ಸಂಕಷ್ಟದಲ್ಲಿರುವುದು ನಿಜ, ಎಲ್ಲ ಬೆಳೆಗಳನ್ನು ಬೆಳೆಯಲು ಇಂದಿನ ದಿನಗಳಲ್ಲಿ ಬಹಳಷ್ಟು ಖರ್ಚುಮಾಡಲಾಗುತ್ತದೆ ಆದರೆ ಅದಕ್ಕೆ ಸರಿಯಾಗಿ ಬೆಳೆಯಿಲ್ಲ ಬಳೆ ಇದ್ದರೂ ಬೆಲೆ ಇಲ್ಲದೇ ಸಾಲ ತೀರಿಸಲು ಪರದಾಡಬೇಕಾಗುತ್ತದೆ ಆದ್ದರಿಂದ ಈ ಮೈತ್ರಿ ಸರ್ಕಾರ ಕೂಡಲೇ ರೈತರ ಸಾಲಮನ್ನಾ ಮಾಡಲೇಬೇಕು ಎಂದು ಒತ್ತಾಯಿಸಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ ಕುಮಾರಸ್ವಾಮಿ ಚುನಾವಣೆಗಿಂತ ಮೊದಲು ಅಧಿಕಾರಕ್ಕೆ ಬಂದರೆ ಎಲ್ಲ ಬ್ಯಾಂಕುಗಳ ರೈತರ ಸಾಲ ಮನ್ನಾ ಮಾಡುತ್ತೇನೆಂದು ಆಶ್ವಾಸನೆ ನೀಡಿದ್ದರು ಆದರೆ ಈ ಹಿಂದೂ ವಿರೋಧಿ ಕಾಂಗ್ರೆಸ್ ಜೊತೆ ಸೇರಿ ಅಪವಿತ್ರ ಮೈತ್ರಿ ಸರ್ಕಾರ ನಡೆಸಲು ಮುಂದಾಗಿ ಈಗ ಸಾಲಮನ್ನಾ ಅಸಾಧ್ಯ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.. ನಮ್ಮ ರೈತ ನಾಯಕ ಯಡಿಯೂರಪ್ಪ ನವರು ಘೋಷಣೆ ಮಾಡಿದಂತೆ ಇಂದು ನಾವು ರೈತರ ಪರವಾಗಿ ನಿಂತು ರೈತರ ಸಾಲ ಮನ್ನಾ ಮಾಡಲೇಬೇಕು ಎಂದು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದೇವೆ.. ಕೂಡಲೇ ಸರ್ಕಾರ ರೈತರ, ಮೀನುಗಾರರ ಹಾಗೂ ಇತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸುತ್ತೇನೆ ನಾನು ರೈತರ ಜೊತೆ ಇರುವಂಥವನು ಅವರ ಪರವಾಗಿ ಸದಾ ಧ್ವನಿ ಎತ್ತುತ್ತೇನೆ ಎಂದರು.
ಡಾ ಜಿ ಜಿ ಹೆಗಡೆ ಕೂಡ ಮಾತನಾಡಿ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳು, ರೈತರು, ಬಿಜೆಪಿ ಪದಾಧಿಕಾರಿಗಳು, ಯುವಮೋರ್ಚ ಅಧ್ಯಕ್ಷ ಹೇಮಂತ ಗಾಂವ್ಕರ್, ರೈತ ಮೋರ್ಚಾ ಅಧ್ಯಕ್ಷರು, ಅಶೋಕ ಪ್ರಭು, ಹರಿಹರ ನಾಯ್ಕ, ರಾಜೇಶ ಪೈ, ಚೇತೇಶ್ ಶಾನಭಾಗ,ಚಿದಾನಂದ ನಾಯ್ಕ,ರಾಧಾಕೃಷ್ಣ ಗೌಡ, ಸುಧಾ ಗೌಡ ಹಾಗೂ ಇತರ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು…