ಪ್ರತಿ ವರ್ಷದಂತೆ ಈ ವರ್ಷವೂ ಟಿ.ಎಸ್.ಎಸ್.ನಲ್ಲಿ ಮಾನ್ಸೂನ್ ಮೇಳ ಆಯೋಜಿಸಲಾಗಿದ್ದು, ಮೇ 29 ರಿಂದ ಜೂನ್ 03ರವರೆಗೆ ಶಿರಸಿ ಹಾಗೂ ಸಿದ್ದಾಪುರ ಸುಪರ್‍ಮಾರ್ಕೆಟ್‍ನಲ್ಲಿ ಆಯ್ದ ಸಾಮಗ್ರಿಗಳ ಮೇಲೆ ರಿಯಾಯಿತಿಯ ಸುರಿಮಳೆಯಾಗಲಿದೆ. ಶಿರಸಿ ತೋಟಗಾರಿಕಾ ಉಪನಿರ್ದೇಶಕರಾದ ಶ್ರೀ ನಾಗರಾಜ ಕೋಟೆಮನೆ, ಕೆ.ಡಿ.ಸಿ.ಸಿ. ಬ್ಯಾಂಕ್‍ನ ಉಪಾಧ್ಯಕ್ಷರಾದ ಶ್ರೀ ಭಾಸ್ಕರ ಹೆಗಡೆ ಕಾಗೇರಿ ಹಾಗೂ ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ಮೇ 29 ರಂದು ಬೆಳಿಗ್ಗೆ 10.30ಕ್ಕೆ ಮಾನ್ಸೂನ್ ಮೇಳಕ್ಕೆ ಚಾಲನೆ ನೀಡಿದರು.
ಮಳೆಗಾಲದ ಅಗತ್ಯಗಳಾದ ರೇನ್‍ಕೋಟ್, ಛತ್ರಿ, ಪಾದರಕ್ಷೆಗಳು, ಶಾಲಾ ಮಕ್ಕಳ ಅಗತ್ಯಗಳಾದ ನೋಟ್‍ಬುಕ್, ಪೆನ್, ಪೆನ್ಸಿಲ್, ಸ್ಟೇಷನರಿ, ಕೃಷಿ ಅಗತ್ಯಗಳಾದ ಸಿಲ್‍ಫಾಲಿನ್, ಟಾರ್ಪಾಲಿನ್, ಇಂಜಿನ್ ಆಯಿಲ್, ಪವರ್ ಸ್ಪ್ರೇಯರ್, ವೀಡ್‍ಕಟರ್, ಬ್ಯಾಟರಿ ಚಾಲಿತ ಸ್ಪ್ರೇಯರ್, ಎಲ್.ಇ.ಡಿ. ಬಲ್ಬ್ ಇತ್ಯಾದಿ ಸಾಮಗ್ರಿಗಳ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಗ್ರಾಹಕರು ಮುಗಿಬಿದ್ದು ವಸ್ತುಗಳ ಖರೀದಿ ಮಾಡಿರುವುದು ಕಂಡುಬಂತು.
ಮಾನ್ಸೂನ್ ಮೇಳದ ಸಂದರ್ಭದಲ್ಲಿ ಶಾಲಾ ಮಕ್ಕಳು ಅಂಕಪಟ್ಟಿಯ ನಕಲು ಪ್ರತಿಯನ್ನು ತೋರಿಸಿ ತಾವು ಪಡೆದ ಅಂಕಗಳ ಆಧಾರದ ಮೇಲೆ ಶಾಲಾ ಸಾಮಗ್ರಿಗಳ ಖರೀದಿಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಸದಸ್ಯರು ಹಾಗೂ ಗ್ರಾಹಕರು ಮಕ್ಕಳೊಂದಿಗೆ ಈ ಮೇಳದಲ್ಲಿ ಪಾಲ್ಗೊಂಡು ಈ ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷರಾದ ಶ್ರೀ ಶಾಂತಾರಾಮ ವಿ. ಹೆಗಡೆ ಶೀಗೇಹಳ್ಳಿ ಇವರು ತಿಳಿಸಿದರು. ಈ ಸಂದರ್ಭದಲ್ಲಿ ಶಿರಸಿ ತೋಟಗಾರಿಕಾ ಕೃಷಿ ತಜ್ಞರಾದ ಶ್ರೀ ವಿ.ಎಮ್. ಹೆಗಡೆ ಸಂಘದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ವಿ.ವಿ. ಹೆಗಡೆ ಬಾಳೇಹದ್ದ, ಶ್ರೀ ಕೆ.ಎಮ್.ಹೆಗಡೆ, ಅಬ್ರಿ ಹೀಪ್ನಳ್ಳಿ, ಶ್ರೀ ವಿ.ಆರ್. ಭಟ್ಟ ಬಿಸಲಕೊಪ್ಪ, ಶ್ರೀ ಎನ್.ವಿ.ಜೋಶಿ ಕೊಪ್ಪಲತೋಟ ಇವರುಗಳು ಹಾಗೂ ಸಂಘದ ಸಿಬ್ಬಂದಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.