ಮಂಗಳೂರು: ಕೇರಳದಲ್ಲಿ ಮುಂಗಾರು ಮಳೆ ಪ್ರಾರಂಭವಾದ ಬೆನ್ನಲ್ಲೇ ರಾಜ್ಯ ಕರಾವಳಿಯಲ್ಲಿಯೂ ಮಳೆಯ ಆರ್ಭಟ ಮೊದಲಾಗಿದೆ. ಬೆಳಿಗ್ಗೆ 9ಕ್ಕೆ ಪ್ರಾರಂಬವಾದ ,ಮಳೆ ಸತತ ಮೂರು ಗಂಟೆಗಳ ಕಾಲ ಸುರಿದ ಕಾರಣ ನಗರದಾದ್ಯಂತ ಜನಜೀವನ ಅಸ್ತವ್ಯರ್ಥವಾಗಿದೆ.
ಮಂಗಳೂರಿನ ರಸ್ತೆಗಳು ಸಂಪೂರ್ಣ್ ಜಲಾವೃತವಾಗಿದ್ದು ವಾಹನಗಳು ನೀರಲ್ಲಿ ಮುಳಿಗಿದೆ. ತಗ್ಗು ಪ್ರದೇಶದ ಮನೆ, ಕಛೇರಿಗಳಿಗೆ ಸಹ ನೀರು ನುಗ್ಗಿದೆ. ಪೋಲೀಸರು, ಅಗ್ನಿಶಾಮಕ ದಳ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಕರಾವಳಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.
ರೈಲು ಸಂಚಾರ, ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು ನಗರದಲ್ಲಿ ತೋಕೂರು ನಿಲ್ದಾಣದಿಂದ ಮುಂದೆ ರೈಲು ಸಂಚಾರವಿರುವುದಿಲ್ಲ.
ಜಿಲ್ಲೆಯ ಇತರೆಡೆಗಳಲ್ಲಿ ಸಹ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಪಿಟಿ ಉದಯನಗರ, ಅತ್ತಾವರ ಸೇರಿ ಹಲವು ಕಡೆ ಮೂಲಭೂತ ಸೌಕರ್ಯಗಳಿಗೆ ಧಕ್ಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಮಂಗಳೂರು ನಗರದಲ್ಲಿ 146 ಮಿಮೀ ಮಳೆಯಾಗಿದೆ .ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕಳೆದೆರಡು ವರ್ಷಗಳಲ್ಲಿ ಕರಾವಳಿಯಾದ್ಯಂತ ಉತ್ತಮ ಮಳೆಯಾಗಿದ್ದು 2017 ರಲ್ಲಿ ಶೇ. 20, 2016 ರಲ್ಲಿ ಶೇ.40ರಷ್ಟು ಮಳೆ ದಾಖಲಾಗಿದೆ.ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.