ಹೊನ್ನಾವರ :- ಇಲ್ಲಿಯ ಮಾರ ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 623 ಅಂಕಗಳನ್ನು ಪಡೆದು ಪ್ರಮಥಾ ಗಜಾನನ ಭಟ್ಟ ರಾಜ್ಯಕ್ಕೆ 3ನೇ ರ್ಯಾಂಕ ಪಡೆದಿದ್ದಳು. ಮರುಮೌಲ್ಯಮಾಪನದಲ್ಲಿ ಪುನಃ 2 ಅಂಕಗಳನ್ನು ಪಡೆದು, 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ ಪಡೆದಿರುವುದು ಹೊನ್ನಾವರ ತಾಲೂಕಿನಲ್ಲಿಯೇ ಐತಿಹಾಸಿಕ ದಾಖಲೆಯಾಗಿದೆ.ಇವಳ ತಾಯಿ ಶ್ರೀಮತಿ. ಶಾಂತಿ ಭಟ್ಟ ಇದೇ ಸಂಸ್ಥೆಯಲ್ಲಿ 10 ವಷರ್Àಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿಮಾನದ ಸಂಗತಿ.

RELATED ARTICLES  ಗುಡ್ಡ ಕುಸಿತ : ರಸ್ತೆಯ ಮೇಲೆ ಬಿದ್ದ ಮಣ್ಣು

ಈ ಸಂತೋಷದಿಂದ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ಭಟ್ಟ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಎಸ್.ಎನ್.ಗೌಡ , ತಾಲೂಕಾ ಶಿಕ್ಷಕ ಸಂಘದ ಅಧ್ಯಕ್ಷ ಮನೋಹರ ನಾಯ್ಕ ಹಾಗೂ ಮಾರ ಥೋಮಾ ಸಂಸ್ಥೆಯ ಮೆನೆಜರ ಹಾಗೂ ಪ್ರಾಚಾರ್ಯ ರೆ|| ಜಾನ್ ಉಮ್ಮನ್, ಖಜಾಂಚಿ ಕೆ.ಸಿ.ವರ್ಗೀಸ, ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಪೈ, ಪ್ರಭಾರೆ ಮುಖ್ಯಾಧ್ಯಾಪಕ ವಿನೋದ ಲೋಪೀಸ ಮತ್ತಿತರರು ಅವರ ಮನೆಗೆ ತೆರಳಿ ವಿದ್ಯಾರ್ಥಿನಿಯ ಅನುಪಸ್ಥಿತಿಯಲ್ಲಿ ತಾಯಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು …

RELATED ARTICLES  ಜನರನ್ನು ರಂಜಿಸಲಿವೆ 'ಮಧ್ಯರಾತ್ರಿಯ ತಿಗಣೆಗಳು' ನಾಟಕ