ಭೂಮಿಯ ಎಲ್ಲಕಡೆ ಮೊಬೈಲ್ ಫೋನ್ ಸಂಪರ್ಕ ಜಾಲ ಸೃಷ್ಟಿಸಿರುವ ಮನುಷ್ಯ, ಇದೀಗ ಚಂದ್ರ ಲೋಕದಲ್ಲೂ ಮೊಬೈಲ್ ಫೋನ್ ಜಾಲ ನಿರ್ಮಿಸುತ್ತಿದ್ದಾನೆ. ಮುಂದಿನ ವರ್ಷದಿಂದ ಚಂದ್ರ ಲೋಕದಲ್ಲೂ ಮೊಬೈಲ್ ನೆಟ್ ವರ್ಕ್ ಸ್ಥಾಪನೆಯಾಗಲಿದ್ದು, ಆ ನಂತರ ಚಂದ್ರನಿಂದಲೇ ಹೈ ಡೆಫನಿಷನ್ ವಿಡಿಯೊಗಳನ್ನು ನೇರವಾಗಿ ಭೂಮಿಗೆ ವರ್ಗಾಯಿಸಬಹುದು.

RELATED ARTICLES  ವಿರಾಟ್ ಕೊಹ್ಲಿ ಬ್ಯಾಟ್ ಸ್ಟಿಕ್ಕರ್ ಗೆ ಅತಿ ಹೆಚ್ಚು ದುಡ್ಡು ಪಡೆಯುವ ಆಟಗಾರ!

ಜರ್ಮನಿಯ ವೊಡಫೋನ್ ಕಂಪನಿ, ಪ್ರಸಿದ್ಧ ಫೋನ್ ತಯಾರಿಕಾ ಕಂಪನಿ ನೊಕಿಯ ಮತ್ತು ಕಾರು ಉತ್ಪಾದಕ ಕಂಪನಿ ಆಡಿ ಜೊತೆಗೂಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿವೆ. ಇದರ ತಾಂತ್ರಿಕ ವ್ಯವಸ್ಥೆಯ ಹೊಣೆಯನ್ನು ನೊಕಿಯ ಹೊತ್ತಿದ್ದು ಬರ್ಲಿನ್ ಮೂಲದ ಪಿಟಿ ಸೈಂಟಿಸ್ಟ್ಸ್ ಎಂಬ ಕಂಪನಿ ಇವರಿಗೆ ಸಹಯೋಗ ನೀಡುತ್ತಿದೆ.

RELATED ARTICLES  ಪ್ರೇಮಿಗಳ ದಿನ ಫೆಬ್ರುವರಿ 14ಕ್ಕೇ ಏಕೆ? ಇದರ ಹಿಂದಿರುವ ಇತಿಹಾಸ ಏನು ಗೊತ್ತಾ??

ಇವರು 2019ರಲ್ಲಿ ಕೇಪ್ ಕೆನಾವೆರಾಲ್ ನಿಂದ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಉಡಾವಣೆಗೆ ಉದ್ದೇಶಿಸಿದ್ದಾರೆ. ಅಮೆರಿಕದ ಆಸ್ಟ್ರೊನಾಟ್ಗಳು ಚಂದ್ರನ ಮೇಲೆ ಕಾಲಿರಿಸಿ 50 ವರ್ಷಗಳು ಕಳೆದ ಬಳಿಕ, ಇದೇ ಮೊದಲ ಬಾರಿಗೆ ಖಾಸಗಿ ವಲಯದವರು ಇಂಥ ಮೊದಲ ಯೋಜನೆ ಕೈಗೊಳ್ಳುತ್ತಿದ್ದಾರೆ.