ಮುಂಬೈ :ಶೇ. 2ರಷ್ಟು ಸಂಬಳ ಏರಿಕೆ ಮಾಡುವುದಾಗಿ ಭಾರತೀಯ ಬ್ಯಾಂಕ್‌ಗಳ ಸಂಸ್ಥೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಬ್ಯಾಂಕ್ ನೌಕರರು 2 ದಿನಗಳ ಕಾಲ ದೇಶಾದ್ಯಂತ ಮುಷ್ಕರ ನಡೆಸಲಿದ್ದಾರೆ. ಇದರಿಂದಾಗಿ ವಹಿವಾಟು ವ್ಯತ್ಯಯವಾಗುವ ಸಾಧ್ಯತೆ ಇದೆ.ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಯಾಂಕ್ ಒಕ್ಕೂಟಗಳ ಅಧ್ಯಕ್ಷ ದೇವಿದಾಸ್ ತುಲಜಾ ಪುರಾಕರ್ ಮೇ 5, 2018ರಲ್ಲಿ ಸಂಬಳ ಏರಿಕೆ ಸಂಬಂಧ ಮಾತುಕತೆ ನಡೆಸಲಾಗಿತ್ತು ಎಂದರು.
ಕಳೆದ ಮೂರು ವರ್ಷಗಳಿಂದ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜನ್‌ಧನ್, ನೋಟು ಅಮಾನ್ಯೀಕರಣ, ಮುದ್ರ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಇತರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಡುವಿಲ್ಲದ ಕೆಲಸ ಮಾಡಿದ್ದೇವೆ. ಆದರೂ ಬ್ಯಾಂಕ್ ನೌಕರರ ಸಂಬಳ ಏರಿಕೆಯಾಗಿಲ್ಲ.
ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಬ್ಯಾಂಕ್ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂದು ಹೇಳಿದರು.ನ. 1, 2012 ರಿಂದ ಅ. 31, 2017ರವರೆಗೆ ಭಾರತೀಯ ಬ್ಯಾಂಕ್‌ಗಳ ಸಂಸ್ಥೆ ಶೇ. 15 ರಷ್ಟು ಸಂಬಳ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ಸಂಬಳ ಏರಿಕೆಗೆ ಆಗ್ರಹಿಸಿ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ.