ಮಂಗಳೂರು: ಮಹಾಮಳೆಗೆ ಮತ್ತೊಂದು ಬಲಿಯಾಗಿದೆ. ‘ಕನಸು’ ಚಲನಚಿತ್ರ ನಿರ್ದೇಶಕ ಸಂತೋಷ್​ ಶೆಟ್ಟಿ ಎರ್ಮಾಯ್​ ಫಾಲ್ಸ್​ನಲ್ಲಿ ನೀರುಪಾಲಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನಲ್ಲಿರುವ ಎರ್ಮಾಯ್​ ಫಾಲ್ಸ್​ಗೆ ಸಂತೋಷ್​ ಶೆಟ್ಟಿ ಸೇರಿ ಐದು ಜನ ಫೋಟೋ ಶೂಟ್​ಗೆ ತೆರಳಿದ್ದರು. ಒಮ್ಮೆಲೇ ನೀರಿನ ಹರಿವು ಹೆಚ್ಚಾಗಿ ಸಂತೋಷ್​ ನೀರಿಗೆ ಜಾರಿದ್ದಾರೆ.

RELATED ARTICLES  ಸ್ವರ್ಣ ಪದಕದೊಂದಿಗೆ ಪ್ರಥಮ RANK ಪಡೆದ ಡಾ.ನಾಗರಾಜ ಭಟ್ಟ್.

ಕಾಲಿಗೆ ಭಾರ ಕಟ್ಟಿಕೊಂಡಿದ್ದ ಸಂತೋಷ್ ಫಾಲ್ಸ್ ಬಳಿ ನಟನೆ ನಿರತರಾಗಿದ್ದರು. ಜಾಕೆಟ್​ ಹಾಕಿಕೊಂಡಿದ್ದರು. ಈ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಕಾಲಿಗೆ ಮೂರುವರೆ ಕೆಜಿಯಷ್ಟು ಭಾರದ ರೋಬಾಟ್​ನಂಥ ವಸ್ತು ಕಟ್ಟಿಕೊಂಡಿದ್ದೇ ಬೀಳಲು ಕಾರಣ ಎನ್ನಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ.

RELATED ARTICLES  ಕೆನರಾ ಬ್ಯಾಂಕ್ ನಿಂದ ಖಾತೆದಾರರ ಹಣಕ್ಕೆ ಗುನ್ನಾ