ಜಕಾರ್ತಾ: ಮೂರು ರಾಷ್ಟ್ರಗಳ 5 ದಿನಗಳ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ಮೋದಿ ಮೊದಲ ದಿನ ಇಂಡೋನೇಷ್ಯಾ ತಲುಪಿದ್ದಾರೆ. ಅಲ್ಲಿನ ರಾಷ್ಟ್ರಪತಿ ಜೋಕೋ ವಿದೋದೋರವರು ರಾಷ್ಟ್ರಪತಿ ಭವನಕ್ಕೆ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ನೀಡಿದ್ದಾರೆ. ಇಬ್ಬರೂ ನಾಯಕರ ನಡುವೆ ಮಂತ್ರಿಮಂಡಲ ಹಂತದ ಮಾತುಕತೆಯೂ ನಡೆದಿದೆ. ಇನ್ನು ಚರ್ಚೆಯ ನಡುವೆ ಪ್ರಧಾನಿ ಮೋದಿ ಭಾರತ ಹಾಗೂ ಇಂಡೋನೇಷ್ಯಾ ತಮ್ಮ ನಡುವಿನ ಸಂಬಂಧವನ್ನು ವ್ಯಾಪಕ ರಾಜಕೀಯ ಒಪ್ಪಂದದವರೆಗೂ ಕೊಂಡೊಯ್ಯಲಿವೆ ಎಂದು ತಿಳಿಸಿದ್ದಾರೆ.

RELATED ARTICLES  ಮೀನುಗಾಗರೇ ಹುಷಾರ್!! ಇನ್ನು ನೈಟ್ ಫಿಶಿಂಗ್ ಮಾಡಲೇ ಬಾರದು.!!

2025ರೊಳಗೆ ಎರಡೂ ದೇಶಗಳ ನಡುವಿನ ವ್ಯವಹಾರಿಕ ಹೊಂದಾಣಿಕೆಯನ್ನು 50 ಅರಬ್​ ಡಾಲರ್​ವರೆಗೆ ತಲುಪಿಸಲು ಪ್ರಯತ್ನಿಸುವುದಾಗಿಯೂ ಪ್ರಧಾನಿ ಮೋದಿ ತಿಳಿಸಿದ್ದಾರೆ. ಈ ಸಂವಾದದಲ್ಲಿ ಭದ್ರತೆ, ವಿಜ್ಞಾನ, ತಂತ್ರಜ್ಞಾನ, ರೈಲ್ವೇ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಇಂಡೋನೇಷ್ಯಾ ನಡುವೆ 15 ಜ್ಞಾಪನಾ ಪತ್ರಗಳಿಗೆ ಸಹಿ ಹಾಕಲಾಗಿದೆ ಎಂದೂ ಹೇಳಲಾಗಿದೆ.

RELATED ARTICLES  ಮಳೆಯಲ್ಲಿ ಕೊಚ್ಚಿಹೋಗಿದೆ ಕಾರವಾರದ ಈ ರಸ್ತೆ; ತಪ್ಪುತ್ತಿಲ್ಲ ಜನತೆಯ ಬವಣೆ