ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 25,492 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ಮತ್ತು ನಿರ್ದೇಶಕ ಹುಚ್ಚವೆಂಕಟ್ ಅವರು 764 ಮತಗಳನ್ನು ಮಾತ್ರ ಪಡೆದಿದ್ದಾರೆ. 15 ಅಭ್ಯರ್ಥಿಗಳಿದ್ದ ಕಣದಲ್ಲಿ ಹುಚ್ಚ ವೆಂಕಟ್ ಗಳಿಸಿದ್ದ ಮತಗಳಿಗಿಂತ ನೋಟಾಗೆ ಹೆಚ್ಚು ವೋಟು ಬಿದ್ದಿದೆ.

RELATED ARTICLES  ಸಮಾನ ನಾಗರಿಕ ಸಂಹಿತೆ ಜಾರಿಗೆ ಯತ್ನ:ಸಚಿವ ಹೆಗಡೆ

2,724 ನೋಟಾ ವೋಟು ಚಲಾವಣೆಯಾಗಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ನಂತರ ನೋಟಾಗೆ ಹೆಚ್ಚಿನ ವೋಟು ಬಿದ್ದಿದೆ. ಆರ್ ಆರ್ ನಗರದಲ್ಲಿ ಒಟ್ಟು 2,56,447 ಮತಗಳಿದ್ದವು, ಅದರಲ್ಲಿ ಮೂರು ಪೋಸ್ಟಲ್ ಮತಗಳು ತಿರಸ್ಕೃತಗೊಂಡಿತ್ತು.

RELATED ARTICLES  ಚನ್ನಣ್ಣನವರ್ ಗೆ ಸಿಂಹ ಟಾಂಗ್

ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರು 1,08,064 ಮತಗಳು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ 82,572 ಮತಗಳಳನ್ನು ಗಳಿಸಿದ್ದಾರೆ. ಇನ್ನು ಜೆಡಿಎಸ್‍ನ ರಾಮಚಂದ್ರ ಅವರು 60,360 ಮತಗಳು ಪಡೆದುಕೊಂಡಿದ್ದಾರೆ.