ಅಂಕೋಲಾ: ತಾಲೂಕಿನ ಕುಂಟಗಣ ಗ್ರಾಮದಲ್ಲಿ ಜನಿಸಿ ಏನಾದರು ಸಾಧಿಸಿಬೇಕೆಂಬ ಛಲದಲ್ಲಿಯೇ ಮುನ್ನಡೆದು ಶಿಕ್ಷಕನಾಗಿ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಹೊನ್ನಪ್ಪ ಎನ್. ನಾಯಕ (ಹೊನ್ನಪ್ಪಣ್ಣ) ನಿಜಕ್ಕೂ ಸರಳ ಸಜ್ಜನಿಕೆಯ ಸಹೃದಯಿ ಮನುಷ್ಯ ಎಂದರೇ ತಪ್ಪಾಗಲಾರದು.
ತಂದೆ ನಾರಾಯಣ ಗಿರಿಯಣ್ಣ ನಾಯಕ ತಾಯಿ ದೇವಮ್ಮ ನಾಯಕ ಇವರ ಮಗನಾದ ಹೊನ್ನಪ್ಪ ಎನ್. ನಾಯಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಳಗದ್ದೆಯ ಶಿಕ್ಷಕರಾಗಿರುವ ಹೊನ್ನಪ್ಪ ಎನ್. ನಾಯಕ ಶೈಕ್ಷಣ ಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿ ಇತರರಿಗೂ ಮಾದರಿಯಾಗಿದ್ದಾರೆ, ಮೂಲತಃ ಕುಂಟಗಣ ಯವರಾಗಿರುವ ಇವರು ಇತ್ತೀಚಿಗೆ ಅಂಕೋಲಾ ಪಟ್ಟಣದ ಶೇಡಗೇರಿ ವಾಸ್ತವ್ಯ ಮಾಡಿಕೊಂಡಿದ್ದಾರೆ.

RELATED ARTICLES  ಕುಮಟಾದಲ್ಲಿ ಯಶಸ್ವಿಯಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ.

ಸುದೀರ್ಘ 32 ವರ್ಷ 5 ತಿಂಗಳು ಕಾಲ ಸೇವೆ ಸಲ್ಲಿಸಿರುವ ಇವರು ಸಾಹಿತ್ಯ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ, ‘ಶಿಕ್ಷಣ ಹಾಗೂ ಶಿಕ್ಷಕ’ ಎಂಬ ಅತ್ಯುತ್ತಮ ಕೃತಿಯನ್ನು ರಚಿಸಿದ್ದು, ಧಾರವಾಡ ಜನಜೀವನ ಶಿಕ್ಷಣ ಸಂಸ್ಥೆಯವರು ಪ್ರಕಟಿಸಿದ್ದಾರೆ, ಇವರ ‘ಶಿಕ್ಷಣದಲ್ಲಿ ರಾಷ್ಟ್ರೀಯತೆ’ ಎಂಬ ಧ್ವನಿ ಸುರುಳಿ ಧಾರವಾಡ ಆಕಾಶವಾಣ ಕೇಂದ್ರದಲ್ಲಿ ಪ್ರಸಾರಗೊಂಡಿದೆ.

ಹಾಸನ ಜಿಲ್ಲೆಯ ಗೋಸ್ಮಾನ್ ಗ್ರಾಮದಲ್ಲಿ ಕ್ರಿ.ಶ 24-12-1985 ರಂದು ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಇವರು ಕ್ರಿ.ಶ 2001-02 ಕ್ರಿ. ಪ್ರಾ. ಶಾಲೆ ಬೋಳುಕಂಟೆ ಅಂಕೋಲಾ 2002 ರಲ್ಲಿ ಅಗ್ರಗೋಣದಲ್ಲಿ ಸಿ.ಆರ್.ಪಿ ಯಾಗಿ ಕಾರ್ಯನಿರ್ವಹಿಸಿರುವ ಇವರು ಇತ್ತೀಚಿಗೆ ಹಿ.ಪ್ರಾ.ಶಾಲೆ ತಳಗದ್ದೆಯಲ್ಲಿ ಶಿಕ್ಷಕರಾಗಿ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ, ಸರಳ ವ್ಯಕ್ತಿತ್ವದವರಾಗಿರುವ ಇವರು ಕವನ, ಪ್ರಬಂಧ ಕೃತಿಗಳನ್ನು ರಚಿಸಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು , ಕರ್ನಾಟಕ ಸಂಘ, ಚುಟುಕು ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರಾಗಿರುವ ಇವರು ಅಪಾರ ಅಭಿಮಾನ ಬಳಗವನ್ನು ಹೊಂದಿದ್ದಾರೆ, 2017-18 ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

RELATED ARTICLES  ಇಂದು ಸಹ ಶಿರಸಿಯಲ್ಲಿ ಹಿಜಾಬ್ ವಿವಾದ : ವಿದ್ಯಾರ್ಥಿಗಳು ಕಾಲೇಜಿನಿಂದ ಮನೆಗೆ.

ಹುಟ್ಟೂರು ಕುಂಟಗಣ ಹಾಗೂ ಸದ್ಯ ವಾಸವಾಗಿರುವ ಶೇಡಗೇರಿಯಲ್ಲಿ ತಮ್ಮದೇ ಆದ ಸ್ನೇಹಿತರ ಬಳಗವನ್ನು ಹೊಂದಿರುವ ಹೊನ್ನಪ್ಪ ನಾಯಕರು ಅಜಾತ ಶತ್ರುಗಳೆಂದರೆ ತಪ್ಪಾಗಲಾರದು. ದಿ: 31-05-2018 ರಂದು ಸೇವಾ ನಿವೃತ್ತಿ (ಪೃವೃತ್ತಿ) ಜೀವನ ಇನ್ನಷ್ಟು ಕ್ರೀಯಾಶೀಲವಾಗಿರಲೆಂದು ಶುಭ ಹಾರೈಸೋಣ …….
-ಎನ್. ರಾಮು ಹಿರೇಗುತ್ತಿ