ಕುಮಟಾ :ಹೆಗಡೆಯ ಜೋಡಕೆರೆ ಭಾಗದ ಕೆಲವೆಡೆ ಎರಡು ದಿನಗಳಿಂದ ವಿದ್ಯುತ್ ಕಣ್ಣಾ ಮುಚ್ಚಾಲೆ ಪ್ರಾರಂಭವಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು . ಈ ಸಮಸ್ಯೆ ಬಗ್ಗೆ ಅರಿತ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಸಮಸ್ಯೆ ಪರಿಹರಿಸಲು ಮುಂದಾದರು.

ಲೈನ್ ಮನ್ ವಿನೋದ ಶೆಟ್ಟಿ ತಂಡ ಮಳೆಯನ್ನೂ ಲೆಕ್ಕಿಸದೇ ಹಗಲು, ರಾತ್ರಿ ಕೆಲಸ ಮಾಡಿದರೂ 63 KV ಟಿ ಸಿ ಪೂರ್ತಿ ಸ್ಥಗಿತಗೊಂಡಿತ್ತು. ನಂತರ ರಾತ್ರಿ ವಿದ್ಯುತ್ ಸಮಸ್ಯೆ ಬಗ್ಗೆ ಶಾಸಕ ದಿನಕರ ಶೆಟ್ಟಿ ಯವರ ಗಮನಕ್ಕೆ ಗ್ರಾಮಸ್ಥರು ತಂದಾಗ ಶಾಸಕರು ಕೂಡಲೇ ಕೆ ಇ ಬಿ ಅಧಿಕಾರಿಗಳನ್ನು ಸಂಪರ್ಕಿಸಿ ರಿಪೇರಿ ಮಾಡಿಕೊಡಲು ಸೂಚನೆ ನೀಡಿದರು.

RELATED ARTICLES  ROBBERY : ಕಾರನ್ನು ಅಡ್ಡಗಟ್ಟಿ 50 ಲಕ್ಷ ದರೋಡೆ

ಇಂದು ಗುರುವಾರ ಬೆಳಿಗ್ಗೆ ತಾಲ್ಲೂಕು ಪಂಚಾಯಿತಿ ಯಲ್ಲಿ ಅಧಿಕಾರಿಗಳನ್ನು ಕರೆದು ಕ್ಷೇತ್ರದ ಯಾವುದೇ ಭಾಗದಲ್ಲೂ ವಿದ್ಯುತ್ ಸಮಸ್ಯೆ ತಲೆದೋರದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೇ ಬೇರೆ ಟಿ ಸಿ ತರಿಸಿ ಅಧಿಕಾರಿಗಳ ಜೊತೆ ಹೆಗಡೆ ಜೋಡಕೆರೆ ಹತ್ತಿರ ತೆರಳಿ ತಾವೇ ಸ್ವತಃ ನಿಂತು ಟಿ ಸಿ ಬದಲಾಯಿಸಿ ಹೆಗಡೆ ಗ್ರಾಮಸ್ಥರಿಗೆ ನೆರವಾದರು.

RELATED ARTICLES  ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಶ್ರೀ ಶಾಂತವೀರ ಸ್ವಾಮೀಜಿ

ಗ್ರಾಮಸ್ಥರು ಈ ಬಗ್ಗೆ ಸಂತಸ ವ್ಯಕ್ತಪಡಿಸಿ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.