ಜೂನ್ 1 ರಿಂದ ಜುಲೈ 31ರವರೆಗೆ ರಾಜ್ಯದ ಕರಾವಳಿ ತೀರದಲ್ಲಿ ಎಲ್ಲ ಯಾಂತ್ರೀಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದೆ.

10 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಮೇಲಿನ ಇನ್‍ಬೋರ್ಡ್ ಅಥವಾ ಔಟ್‍ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆ ನಡೆಸುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಕರ್ನಾಟಕ ಕರಾವಳಿ ಮೀನುಗಾರಿಕೆ ಕಾಯ್ದೆ, 1986ರ ಅನ್ವಯ ಮಳೆಗಾಲದ ಆರಂಭದಲ್ಲಿ ಸಂತಾನ ವೃದ್ಧಿಗಾಗಿ ತೀರಕ್ಕೆ ಬರುವ ಮೀನು ಮತ್ತು ಮರಿಗಳ ರಕ್ಷಣೆಯ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES  ಮಳೆಗೆ ಮುಳುಗುವ ಸ್ಥಿತಿ ತಲುಪಿತು ನವೋದಯ ಶಾಲೆ

ಈ ನಿಷೇಧ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ದಂಡ ವಿಧಿಸುವುದರ ಜತೆಗೆ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ರದ್ದುಗೊಳಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಸಾಂಪ್ರದಾಯಿಕ ಅಥವಾ ನಾಡದೋಣಿಗಳು ಮೀನುಗಾರಿಕೆ ನಡೆಸಬಹುದು ಎಂದು ಪ್ರಕಟಣೆ ತಿಳಿಸಿದೆ.

RELATED ARTICLES  ಶಿಕ್ಷಕರ ನೇಮಕಾತಿ ಎಂಬ ಹೈ ಡ್ರಾಮಾ?.