ಗ್ಯಾಸ್ಟ್ರಿಕ್ ಈಗ ಪ್ರತಿಯೊಬ್ಬರಿಗೂ ಸಮಸ್ಯೆಯಾಗಿದೆ. ಟೈಮಲ್ಲದ ಟೈಮಲ್ಲಿ ತಿನ್ನುವುದು, ಜಂಕ್ ಫುಡ್ ಗಳ ಅತಿಯಾದ ಸೇವನೆಯಿಂದ ಗ್ಯಾಸ್ಟ್ರಿಕ್ ಸಮಸ್ಯೆ ಈಗ ನಗರ ಪ್ರದೇಶಗಳ ಜನರನ್ನು ಹೆಚ್ಚಾಗಿ ಕಾಡಲಾರಂಭಿಸಿದೆ.
ತಿಂದ ಆಹಾರ ಸರಿಯಾಗಿ ಜೀರ್ಣವಾಗದ ಕಾರಣ ಗ್ಯಾಸ್ ಸಮಸ್ಯೆ ಉಲ್ಬಣಿಸುತ್ತದೆ. ಇದರಿಂದ ಹೊಟ್ಟೆ ಊದಿಕೊಳ್ಳುವುದು, ಓಡಲು, ನಡೆಯಲಾಗದ ಎದುಸಿರು ಬಿಡುವಂತಾಗುತ್ತದೆ.
ದೇಹದ ಫಿಟ್ನೆಸ್ ಹಾಳಾಗುವುದು ಮಾತ್ರವಲ್ಲದೆ ನಾನಾ ತರಹ ಸಮಸ್ಯೆಗಳಿಗೆ ಕಾರಣವಾಗುವ ಗ್ಯಾಸ್ ಸಮಸ್ಯೆಗೆ ಕೋಕ್ ಕೊಡಬೇಕೆಂದರೆ ಈ ಕ್ರಮಗಳನ್ನು ಅನುಸರಿಸಿದರೆ ಉತ್ತಮ
ಮೊದಲಿಗೆ ಟೈಂ ಟು ಟೈಂ ಊಟ ಮಾಡುವುದು. ಒಂದೆರಡು ಸ್ಪೂನ್ ತಿಂದರೂ ನಿಗದಿತ ಸಮಯದಲ್ಲಿ ಚಾಚು ತಪ್ಪದೆ ಊಟ ಮಾಡಬೇಕು. ಒಮ್ಮೆಲೇ ಹೆಚ್ಚು ಹೆಚ್ಚು ತಿನ್ನುವ ಬದಲಿಗೆ ನಾಲ್ಕು ಗಂಟೆಗೊಮ್ಮೆ ಚೂರು ಚೂರು ಆಹಾರ ಸೇವಿಸುವುದರಿಂದ ಸಮಸ್ಯೆಗೆ ಇತಿಶ್ರೀಯಾಡಬಹುದು.
ಹೆಚ್ಚು ಹೆಚ್ಚು ನೀರು ಕುಡಿಯಬೇಕು. ಅದರಲ್ಲೂ ಬಿಸಿನೀರು ಕುಡಿದರೆ ಇನ್ನೂ ಉತ್ತಮ. ಬಿಸಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಲಿತವಾಗಿ ಗ್ಯಾಸ್ ಉತ್ಪತಿ ಮಾಯವಾಗುತ್ತದೆ.
ರಾತ್ರಿ 11-12 ಗಂಟೆ ನಂತರ ಊಟ ಮಾಡಿದರೆ ಅದು ಜೀರ್ಣವಾಗದೆ ಹಾಗೆಯೇ ಉಳಿಯುತ್ತದೆ. ಸಾಧ್ಯವಾದಷ್ಟು 8-9 ಗಂಟೆಯೊಳಗೆ ಊಟ ಮಾಡುವುದನ್ನು ರೂಢಿಸಿಕೊಳ್ಳುವುದು ಉತ್ತಮ.
ಹೆಚ್ಚು ತರಕಾರಿ, ನಿತ್ಯ ವ್ಯಾಯಾಮ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಹೊಂದಲು ಸಹಕಾರಿಯಾಗುತ್ತದೆ.