ಫೇಸ್ಬುಕ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲಾ ರೀತಿಯ ಸೇವೆಗಳ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ಜನರ ಸಂಪರ್ಕ ಕೊಂಡಿಯಾಗಿ ಆರಂಭವಾಗಿದ್ದ ಫೇಸ್ಬುಕ್, ಇದೀಗ ಜಾಹೀರಾತು, ಮಾರ್ಕೆಟಿಂಗ್ ಸೇರಿದಂತೆ ಆನ್ಲೈನ್ ನಲ್ಲಿ ಸಿಗಬಹುದಾದ ಬಹುತೇಕ ಎಲ್ಲಾ ಸೇವೆಗಳನ್ನು ಫೇಸ್ಬುಕ್ ನಲ್ಲಿಯೇ ನೀಡುತ್ತಿದೆ.
ಇದೀಗ ಮತ್ತೊಂದು ಸೇವೆಯನ್ನು ಫೇಸ್ಬುಕ್ ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಫೇಸ್ಬುಕ್ ಆಪ್ ಬಳಕೆದಾರರು ಇನ್ನು ಮುಂದೆ ಫೇಸ್ಬುಕ್ ಆಪ್ ಮೂಲಕವೇ ತಮ್ಮ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ರೀಚಾರ್ಜ್ ಗಾಗಿ ಫೇಸ್ಬುಕ್ ಹೊಸ ಮೊಬೈಲ್ ಆಪ್ ಬಿಡುಗಡೆ ಮಾಡುತ್ತದೆ ಎಂದು ವರದಿಯಾಗಿತ್ತಾದರೂ, ಇದೀಗ ಫೇಸ್ಬುಕ್ ಆಪ್ ನಲ್ಲಿಯೇ ಈ ಸೇವೆ ಲಭ್ಯವಿದೆ.
ಸದ್ಯ ಕೇವಲ ಆಂಡ್ರಾಯ್ಡ್ ಆಪ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಲಭ್ಯವಿದೆ. ಬಳಕೆದಾರರನ್ನು ಸಾಧ್ಯವಾದಷ್ಟು ಹೆಚ್ಚು ಸಮಯ ಫೇಸ್ಬುಕ್ ಬಳಸುವಂತೆ ಮಾಡುವುದೇ ಸಂಸ್ಥೆಯ ಗುರಿಯಾಗಿದೆ.
ಫೇಸ್ಬುಕ್ ಆಪ್ ಮೂಲಕ ಮೊಬೈಲ್ ರೀಚಾರ್ಜ್ ಮಾಡುವುದು ಹೇಗೆ?
ಮೊದಲು ಫೇಸ್ಬುಕ್ ಅಪ್ಲಿಕೇಷನ್ ತೆರೆದು, ಬಲಗಡೆ ಕಾಣುವ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ
ನಂತರ ಮೊಬೈಲ್ ರೀಚಾರ್ಜ್ ಆಯ್ಕೆ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ
ನಿಮ್ಮ ಮೊಬೈಲ್ ರೀಚಾರ್ಜ್ ಮಾಡಲು ಒಂದು ವಿಂಡೋ ಓಪನ್ ಆಗುತ್ತದೆ, ಅದರಲ್ಲಿ ‘ರೀಚಾರ್ಜ್ ನೌ’ ಬಟನ್ ಕ್ಲಿಕ್ ಮಾಡಿ
ನಂತರ ನಿಮ್ಮ ಮೊಬೈಲ್ ನಂಬರ್ ಮತ್ತು ಆಪರೇಟರ್ ಅನ್ನು ಆಯ್ಕೆ ಮಾಡಿ
ನಂತರ ನೀವು ರೀಚಾರ್ಜ್ ಮಾಡಬೇಕಾದ ಮೊತ್ತವನ್ನು ಎಂಟರ್ ಮಾಡಿ ಅಥವಾ ಬೇಕಾದ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳಿ
ಈಗ ಆರ್ಡರ್ ಡೀಟೇಲ್ ಪುಟ ಓಪನ್ ಆಗುತ್ತದೆ, ನೀವು ನಮೂದಿಸಿದ ವಿವರ ಸರಿಯಿದೆಯೇ ಎಂದು ಪರಿಶೀಲಿಸಿ. ವಿವರಗಳು ಸರಿಯಿದ್ದಲ್ಲಿ, ‘ಪ್ಲೇಸ್ ಆರ್ಡರ್’ ಕ್ಲಿಕ್ ಮಾಡಿ ಮುಂದುವರೆಯಿರಿ.