ಶಾಸಕ ದಿನಕರ ಶೆಟ್ಟಿ ಕ್ಷೇತ್ರದಲ್ಲಿ ಜನರ ಸಮಸ್ಯೆ ಆದಷ್ಟು ಮಟ್ಟಿಗೆ ಬಗೆಹರಿಸಬೇಕು ಎನ್ನುವ ಕಲ್ಪನೆ ಇಟ್ಟು ಮುನ್ನಡೆಯುತ್ತಿದ್ದಾರೆ.ಅದರಂತೆ ಇನ್ನು ಪ್ರತೀ ವಾರ ಶನಿವಾರ ಕುಮಟಾ ತಹಶೀಲ್ದಾರ್ ಕಛೇರಿಯಲ್ಲಿ ‘ ಜನತಾ ದರ್ಶನ’ನಡೆಸಲು ತೀರ್ಮಾನಿಸಿ ನಾಳೆ ಶಾಸಕರು ಬೆಂಗಳೂರು ತೆರಳುವ ಹಾಗೂ ಪಕ್ಷದ ಅಭಿನಂದನಾ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ್ ರವರ ಜೊತೆಗೆ ಕುಳಿತುಕೊಂಡು ಜನರ ಸಮಸ್ಯೆ ಆಲಿಸಿದರು.

RELATED ARTICLES  ಶಾಂತೇರಿ ಕಾಮಾಕ್ಷಿ ದೇವಾಲಯದ ಅರ್ಚಕ ವೇ.ಮೂ ವರದರಾಜ ಭಟ್ ಇನ್ನಿಲ್ಲ.

ಜೊತೆಗೆ ಅನೇಕರ ದೂರಿನಂತೆ ಆಯ್ ಆರ್ ಬಿ ಕಂಪನಿಯ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆಯಿಸಿ ಎಲ್ಲೆಲ್ಲಿ ರಸ್ತೆ ಅಗಲಿಕರಣ ಮಾಡುವಾಗ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ ಅವರ ವಿನಂತಿಯಂತೆ ಸರಿಪಡಿಸಿ ಕೊಡಿ ಹಾಗೂ ಎಲ್ಲಿಯೂ ರಸ್ತೆ ಕುಸಿತ ಆಗದಂತೆ ಮುಂಜಾಗ್ರತೆ ವಹಿಸಿ ಎಂದರು.

RELATED ARTICLES  ದಿನಕರ ಶೆಟ್ಟಿ ವಿಜಯೋತ್ಸವ : ಸೇಬು ಹಣ್ಣಿನ ಹಾರ ಹಾಕಿದ ಅಭಿಮಾನಿಗಳು.