ಕುಮಟಾ: ಇಲ್ಲಿನ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲೆಯ ನಾಲ್ಕು ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನಿಲ್ ನಾಯ್ಕ ರವರಿಗೆ ಹಾಗೂ ಕಾರ್ಯಕರ್ತರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಸಂಸದ ಮತ್ತು ಕೇಂದ್ರ ಸಚೀವರಾದ ಅನಂತಕುಮಾರ್ ಹೆಗಡೆ ಹಾಗೂ ಜಿಲ್ಲಾ ಅಧ್ಯಕ್ಷರು ಮತ್ತು ಜಿಲ್ಲಾ ಮುಖಂಡರು ಸರ್ವರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಅದರ ಮಧ್ಯೆ ಜಿಲ್ಲೆಯಲ್ಲಿ ಅದರಲ್ಲೂ ಕುಮಟಾದಲ್ಲಿ ವಿರೋಧದ ನಡುವೆಯೂ ಇತಿಹಾಸದ ದಾಖಲೆ ನಿರ್ಮಿಸಿದ ದಿನಕರ ಶೆಟ್ಟಿಯವರನ್ನು ಕುಮಟಾ ಬಿಜೆಪಿ ಮಂಡಳ ದ ವತಿಯಿಂದ ಹೃದಯಸ್ಪರ್ಶಿಯಾಗಿ ಅಭಿನಂದಿಸಿ ಇದಕ್ಕೆ ಕಾರಣೀಕರ್ತರಾದ ಎಲ್ಲ ಕಾರ್ಯಕರ್ತರಿಗೂ ಹಾಗೂ ಸಹಕರಿಸಿದ ಕ್ಷೇತ್ರದ ಸರ್ವರಿಗೂ ಗೌರವ ಪೂರ್ವಕವಾದ ಅಭಿನಂದನೆ ಸಲ್ಲಿಸಲಾಯಿತು.

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಸಮೀತಿ ಹಾಗೂ ಕುಮಟಾ ಮಂಡಳದ ವತಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸಹಕಾರ ನೀಡಿ ಬಿಜೆಪಿ ಅಭ್ಯರ್ಥಿಯನ್ನು ಅತ್ಯಂತ ಪ್ರಚಂಡ ಬಹುಮತದಿಂದ ವಿಜಯಿಯಾಗಲು ಕಾರಣರಾದ ಕಾರ್ಯಕರ್ತರುಗಳಿಗೆ ಮತ್ತು ಪಕ್ಷದ ಅಭಿಮಾನಿಗಳಿಗೆ ಹಾಗೂ ಸಹಕರಿಸಿದ ಸರ್ವರ ಪರವಾಗಿ ಜಿಲ್ಲಾಧ್ಯಕ್ಷ ಕೆ ಜೆ ನಾಯ್ಕ ಅವರನ್ನ ಕುಮಟಾ ಹವ್ಯಕ ಸಬಾಭವನದಲ್ಲಿ ಸನ್ಮಾನಿಸಲಾಯಿತು ಅರು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆ ಆದ ವಿಶ್ವೇಶ್ವರ ಹೆಗಡೆ ಕಾಗೆರಿ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಆದ ದಿನಕರ ಕೆ ಶೆಟ್ಟಿ ಪ್ರಪ್ರತಮಬಾರಿ ಆಯ್ಕೆ ಆದ ಮಹಿಳಾ ಶಾಸಕಿ ರೂಪಾಲಿ ನಾಯ್ಕ ಅತಿ ಹೆಚ್ಚು ಮತ ಪಡೆದು ಆಯ್ಕೆ ಆದ ಯುವ ಮುಖಂಡ ಸುನಿಲ ನಾಯ್ಕ ಅವರನ್ನ ಸನ್ಮಾನಿಸಲಾಯಿತು ಶಾಸಕ ವಿಶ್ವೇಶ್ವರ ಹೆಗಡೆ ಮಾತನಾಡಿ ಜಿಲ್ಲೆಯಲ್ಲಿ ನಾಲ್ಕು ಶಾಸಕರಲ್ಲಿಯೂ ವಿಶೇಷತೆ ಇದೆ ಇದು ಕಾರ್ಯಕರ್ತರ ಗೆಲುವು ಹಾಗೂ ಪ್ರದಾನ ಮಂತ್ರಿಯವರ ನಾಲ್ಕು ವರ್ಷದ ಸಾಧನೆಯ. ಗೆಲುವು ಎಂದರುರಾಷ್ಟ್ರಾದ್ಯಕ್ಷ ಅಮಿತ್ ಷಾ ಅವರ ಸಂಘಟನಾ ಚತುರತೆಯ ಗೆಲುವು ಎಂದರುಮುಂದಿನ ದಿನಗಳಲ್ಲಿ ಪರೇಶ ಮೇಸ್ತಾ ಸಾವಿಗೆ ನ್ಯಾಯ ಕೊಡಿಸುವುದು ಮತ್ತು ಅಮಾಯಕ ಹಿಂದುಗಳ ಮೆಲೆ ಹಾಕಿರುವ ಕೆಸ್ ಗಳನ್ನ ತೆಗೆಸುವ ಜವಾಬ್ದಾರಿ ನಮಗಿದೆ ಎಂದರು ಕುಮಟಾ ಶಾಸಕ ದಿನಕರ ಕೆ ಶೆಟ್ಟಿ ಮಾತನಾಡಿ ಒಂದು ಬಾರಿ 20 ಮತದಿಂದ ಶಾಸಕನಾಗಿ ಗೆದ್ದು 420 ಮತಗಳಿಂದ ಸೋತು ಈ ಬಾರಿ 32 000 ಕ್ಕೂ ಹೆಚ್ಚು ಮತಗಳಿಂದ ಜನತೆ ನನ್ನನ್ನ ಆಯ್ಕೆ ಮಾಡಿದ್ದಾರೆ ಕ್ರೇತ್ರದ ಜನತೆಗೆ ನನ್ನ ಅಭಿನಂದನೆ ಎಂದರು ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಕೆಂದ್ರ ನಾಯಕರ. ರಾಜ್ಯನಾಯಕರು ಹಾಗೂ ಬಿ ಜೆ ಪಿ ಪದಾದಿಕಾರಿಗಳ ಕಾರ್ಯಕರ್ತರ ಜನತೆಯ ಸಹಕಾರದಿಂದ ಒಬ್ಬ ಮಹಿಳೆ ಶಾಸಕಿ ಆಗಿ ಆಯ್ಕೆ ಆಗಲು ಸಾದ್ಯವಾಗಿದೆ ಎಂದರು ಶಾಸಕ ಸುನಿಲ್ ನಾಯ್ಕ ಮಾತನಾಡಿ ಗೊ ರಕ್ಷಣೆ ನನ್ನ ಮೊದಲ ಆದ್ಯತೆ ಎಂದರು ಸಚಿವ ಅನಂತ ಕುಮಾರ ಹೆಗಡೆ ಅವರನ್ನ ವಶೇಷವಾಗಿ ಅಭಿನಂದಿಸಿದರು.

RELATED ARTICLES  ಕಾರು ಹಾಗೂ ಸಾರಿಗೆ ಬಸ್ ಅಪಘಾತ

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಂಸದ ಅನಂತ ಕುಮಾರ ಹೆಗಡೆ ಜಿಲ್ಲಾದ್ಯಕ್ಷ ಕೆ ಜೆ ನಾಯ್ಕ ತಿಂಗಳೆ ವಿಕ್ರಮಾರ್ಜುನ ಹೆಗಡೆ ವಿನೋದ ಪ್ರಭು ಎಂ ಜಿ ನಾಯ್ಕ ಉಮೇಶ ನಾಯ್ಕ ಎನ್ ಎಸ್ ಹೆಗಡೆ ಸೇರಿದಂತೆ ಹಲವು ಜಿಲ್ಲಾ ಮುಖಂಡರು ತಾಲೂಕಾ ಮುಖಂಡರು ಹಾಗೂ ಪದಾದಿಕಾರಿಗಳು ಉಪಸ್ಥಿತರಿದ್ದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ಹೋರಾಟ ಬೆಂಬಲಿಸಿ ದೆಹಲಿಗೆ ಬರಲು ಸಿದ್ಧ!