ಬಾಡ – ಗುಡೇಅಂಗಡಿಯ ಶ್ರೀ ಕಾಂಚಿಕಾಂಬಾ ದೇವಸ್ಥಾನದ ಸಾರ್ವಜನಿಕ ಕೆರೆಯ ಸ್ವಚ್ಛತೆ ಗುಡೇಅಂಗಡಿಯ ಸ. ಹಿ. ಪ್ರಾ. ಕನ್ನಡ ಶಾಲೆಗೆ ಹೋಗುವ ನಾಲ್ಕು ಪುಟಾಣಿ ಮಕ್ಕಳಿಂದ ನಿನ್ನೆ ನಡೆದಿದೆ.ಈ ಪುಟಾಣಿಗಳು ಗುದ್ದಲಿ, ಬುಟ್ಟಿ ತಂದು ಯಾರ ಸಹಾಯವೂ ಇಲ್ಲದೇ ಕಷ್ಟ ಪಟ್ಟು ದೈರ್ಯದಿಂದ ಸ್ವಚ್ಛ ಮಾಡಿದ್ದಾರೆ ಇವರ ಸಾಮಾಜಿಕ ಕಳ ಕಳಿ ನೋಡಿದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಸರ್ಕಾರದಿಂದ ಪ್ರತೀ ವರ್ಷವೂ,ಕೆರೆಯ ಸ್ವಚ್ಛತೆಗೆ, ಕೆರೆಯ ಹೂಳೆತ್ತಲು, ಮತ್ತು ಕೆರೆ ಕಟ್ಟೆಗಳ ನಿರ್ವಹಣೆಗೆ ಸಾವಿರಾರು ರೂಪಾಯಿ ಬಂದರೂ ನಮ್ಮ ಭಾಗದಲ್ಲಿ ಇರುವ ಒಂದೆರಡು ಕೆರೆಯನ್ನು ಮಳೆ ಬಂದರೂ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ವಚ್ಛ ಮಾಡಿಸದೇ ಹಾಗೇ ಇಟ್ಟಿರುವುದು ಅಸಮಾದಾನವಾಗುತ್ತಿದೆ ಹಾಗೂ ಬಂದಿರುವ ಅನುದಾನ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ. ಇನ್ನಾದರೂ ಈ ಪುಟಾಣಿಗಳಿಂದ ಪಾಠ ಕಲಿಯಬಹುದು ಎನ್ನುವುದು ಸ್ಥಳೀಯರ ಅಭಿಪ್ರಾಯ.
ಸ್ಥಳೀಯರಾದ ಈ ಪುಟಾಣಿಗಳು ಪಟಗಾರರ ಮನೆಯ ಊಮೇಶ ಪಟಗಾರ ಇವರ ಮಕ್ಕಳು ಜೀವಿತಾ, ತಿಲಕ್,ಮತ್ತು ತನ್ಮಯಾ ಮತ್ತು ಕರುಣಾಕರ ಭಟ್ಟ ಇವರ ಮಗ ಈ ಮಕ್ಕಳು ವಯಸ್ಸಿಗೆ ಮೀರಿದ ಕೆಲಸ ಮಾಡಿ ಮನೆಗೆ, ಶಾಲೆಗೆ ಮತ್ತು ಊರಿಗೆ ಕೀರ್ತಿ ತಂದಿದ್ದಾರೆ.
ಇವರನ್ನು ಸ್ಥಳೀಯ ಮಾನ್ಯ ಶಾಸಕರು,ಮಾನ್ಯ ಜಿಲ್ಲಾ ಪಂಚಾಯತ ಸದಸ್ಯರು, ಮಾನ್ಯ ತಾಲೂಕಾ ಪಂಚಾಯತ ಸದಸ್ಯರು, ಸ್ಥಳೀಯ ಪಂಚಾಯತ ಹಾಗೂ ಅಧಿಕಾರಿ ವರ್ಗ ಈ ಪುಟಾಣಿಗಳನ್ನು ಗೌರವಾರ್ಪಣೆ ಸಲ್ಲಿಸಿ ವಯಸ್ಸಿಗೂ ಮೀರಿದ ಸಾಧನೆಗೆ ಗೌರವಿಸಿ.
ಕೃಪೆ:ಬಾಡ ನ್ಯೂಸ್