ಕೊಣಾರ್ಕದ ಭವ್ಯ ಸೂರ್ಯ ದೇವಾಲಯ ಒಡಿಶಾದ ದೇವಸ್ಥಾನ ಶಿಲ್ಪಕಲೆಯ ಮೇರು ಕೃತಿ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ಶಿಲ್ಪಕಲೆಯಲ್ಲಿ ಪ್ರಪಂಚದಲ್ಲೇ ಅತ್ಯಂತ ವೈಭವಪೂರ್ಣವಾದ ಉದಾಹರಣೆಗಳಲ್ಲಿ ಒಂದು ಎಂದೂ ಸಹ ಇದನ್ನು ಪರಿಗಣಿಸಲಾಗಿದೆ. ೧೩ ನೆಯ ಶತಮಾನದಲ್ಲಿ ನರಸಿಂಹದೇವನಿಂದ ಕಟ್ಟಿಸಲ್ಪಟ್ಟ ಈ ದೇವಾಲಯದ ಮೂಲ ವಿನ್ಯಾಸದಂತೆ ಇದು ಒಂದು ದೊಡ್ಡ ರಥದ ಆಕಾರದಲ್ಲಿದ್ದಿತು. ಏಳು ಕುದುರೆಗಳಿಂದ ಎಳೆಯಲ್ಪಟ್ಟು ೨೪ ಚಕ್ರಗಳನ್ನು ಹೊಂದಿರುವ ಸೂರ್ಯನ ರಥವನ್ನು ಪ್ರತಿನಿಧಿಸಲು ಈ ದೇವಸ್ಥಾನವನ್ನು ಕಟ್ಟಲಾಯಿತು.ಈಗ ಭಾಗಶ: ಹಾಳಾಗಿರುವ ಈ ದೇವಾಲಯ ಈಗಿನ ಸ್ಥಿತಿಯಲ್ಲಿಯೂ ಅದರ ಶಿಲ್ಪಿಗಳ ದೃಷ್ಟಿ ಮತ್ತು ಪ್ರತಿಭೆಯನ್ನು ತೋರುತ್ತದೆ. ನಂಬಿಕೆಯಂತೆ, ಈ ದೇವಾಲಯ ಮೂಲರೂಪದಲ್ಲಿದ್ದಾಗ ಸೂರ್ಯೋದಯವಾದ ತಕ್ಷಣ ಸೂರ್ಯನ ಮೊದಲ ಕಿರಣಗಳು ಈ ದೇವಾಲಯದ ಸೂರ್ಯನ ಮೂರ್ತಿಯ ಪದತಲದಲ್ಲಿ ಬೀಳುತ್ತಿದ್ದವು!

RELATED ARTICLES  ಬ್ಯಾಂಕ್ ಆಫ್ ಬರೋಡದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

       ಗಂಗರಾಜರ ಆಳ್ವಿಕೆಯ ಕಾಲದಲ್ಲಿ ಈ ದೇವಸ್ಥಾನವನ್ನು ಕಟ್ಟುವುದಕ್ಕೆ ರಾಜ ನರಸಿಂಹದೇವ ೧ ಅದೇಶಿಸುತ್ತಾನಂತೆ. ಈ ದೇವಸ್ಥಾನವನ್ನು ಆಗಿನ ಅವನ ಕಾಲದ ರಾಜಕೀಯ ಪ್ರತಿಷ್ಟೆಯ ಸಂಕೇತವಾಗಿ ಕಟ್ಟಿಸಲು ಯೋಚಿಸಿದ್ದರಂತೆ,,, ಅದಕ್ಕಾಗಿ, 12000 ಜನ ನುರಿತ ಶಿಲ್ಪ ಕಲಾವಿದರನ್ನು ಸೇರಿಸಿ ೧೨ ವರುಷಗಳ ಕಾಲ ಸತತವಾಗಿ ಶ್ರಮ ಪಟ್ಟರಂತೆ ಇದನ್ನ ಕಟ್ಟಲು. ಆದರು ಅಂದುಕೊಂಡ ಸಮಯಕ್ಕಿಂತ ಮುಂಚೆ ಕಟ್ಟಲಾಗಲಿಲ್ಲ ಕಾರಣ… ಇದನ್ನು ಕಟ್ಟಬೇಕಾದರೆ ಒಂದು ವಾಸ್ತು ದೋಷ ಎದುರಾಯಿತಂತೆ. ಈ ದೇವಸ್ಥಾನದ ನಿರ್ವಹಣೆ ವಹಿಸಿಕೊಂಡಿದ್ದ ಬಿಸು ಮಹಾರಾಣ ಅವರಿಗೂ ಇದಕ್ಕೆ ಉತ್ತರ ಕಂಡು ಹಿಡಿಯುವುದಕ್ಕೆ ಸಾದ್ಯವಾಗಲಿಲ್ಲವಂತೆ. ಆಗ, ಅವರ ಮಗ ಧರ್ಮಪಾದ ಇದಕ್ಕೆ ಉಪಾಯವನ್ನು ಕಂಡು ಹಿಡಿದು,, ಕೊನೆಯ ಕಲ್ಲನ್ನು ತಾನೇ ಗೋಪುರದ ಮೇಲೆ ಇಟ್ಟನಂತೆ, ಅನಂತರ ಧರ್ಮಪಾದನ ಶವ,,, ದೇವಸ್ಥಾನ ದ ಹತ್ತಿರ ಇರುವ ಸಮುದ್ರದಲ್ಲಿ ತೇಲುತ್ತಿತ್ತಂತೆ. ಧರ್ಮಪಾದನು, ತಮ್ಮ ಸಮುದಾಯದ ರಕ್ಷಣೆಗೋಸ್ಕರ.. ತನ್ನ ಪ್ರಾಣವನ್ನೇ ಕೊಟ್ಟ ಎಂದು ಹೆಸರುವಾಸಿ ಆಯಿತು ಎಂಬ ಪ್ರತೀತಿ. ಆದರೆ ಇಗಲೂ ಇದರ ವಾಸ್ತು ಸರಿ ಇಲ್ಲದೆ ಇರುವ ಕಾರಣ,, ದೇವಸ್ಥಾನ ಇಷ್ಟು ಅವನತಿ ಹೊಂದಿದೆ ಎಂದು ಹೇಳುತ್ತಾರೆ , ಇಲ್ಲಿನ ಸ್ಥಳೀಯರು.

RELATED ARTICLES  ಶೌರ್ಯ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ