ಭಟ್ಕಳ: ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಇನ್ಫೋಸಿಸ್ ಫೌಂಡೇಶನ ಬ್ಲಾಕ್ ನೂತನ ಕಟ್ಟಡವು ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್‍ರವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ಶ್ರೀ ಮಠದ ಕಿರಿಯ ಯತಿಗಳಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟಿಪ್ರದೀಪ ಜಿ. ಪೈ ಭಟ್ಕಳ ಎಜ್ಯುಕೇಶನ್ ಟ್ರಸ್ಟ ನಡೆದುಬಂದ ದಾರಿ ಹಾಗೂ ಇದರ ಮುನ್ನೋಟವನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಇನ್ಫೋಸಿಸ್‍ನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಯು. ರಾಮದಾಸ್ ಕಾಮತ್ ಇವರು ಸಭೆಯನ್ನುದ್ದೇಶಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕóಣ ಸಂಸ್ಥೆಗಳ ರೂಪುರೇಷೆ ಹೇಗಿರಬೇಕೆಂದು ತಿಳಿಸಿದರು. ಬೆಂಗಳೂರಿನಂತಹ ಮಹಾನಗರಗಳ ಶಿಕ್ಷಣ ಸಂಸ್ಥೆಯಂತೆ ಈ ಸಂಸ್ಥೆಯೂ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.
ರುಕ್ಮಾಬಾಯಿ ವಿಠ್ಠಲ ಬಾಳಗಿ ಬ್ಲಾಕ್‍ನ ದಾನಿಗಳಾದ ಶ್ರೀನಿವಾಸ ಬಾಳಗಿ ಹಾಗೂ ಸುಗಂಧಾ ಕಾಮತರವರನ್ನು ಗೌರವಿಸಲಾಯಿತು. ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್‍ರವರ ಸ್ವಾಮಿಜಿಗಳು ಆಶೀರ್ವಚನದಲ್ಲಿ ಸಮಾಜದ ಏಳಿಗೆಯಲ್ಲಿ ಭಟ್ಕಳ ಎಜುಕೇಶನ ಟ್ರಸ್ಟನ ಪಾತ್ರವನ್ನು ಪ್ರಶಂಶಿಸಿದರು.
ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಉಪಾಧ್ಯಕ್ಷರಾದ ಸುರೇಂದ್ರ ಶ್ಯಾನುಭಾಗ, ಆಡಳಿತ ಟ್ರಸ್ಟಿ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಟ್ರಸ್ಟಿಗಳಾದ ವಸಂತ ಶ್ಯಾನುಭಾಗ, ಹನುಮಂತ ಪೈ (ಪುತ್ತು ಪೈ), ಆಡಳಿತಾಧಿಕಾರಿ ನಾಗೇಶ ಭಟ್, ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಪಲ್ಲವಿ ನಾಯಕ ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು, ಶ್ರೀನಾಥ ಪೈ ಹಾಗೂ ವಿಶ್ವನಾಥ ಭಟ್ ನಿರೂಪಿಸಿದರು.