ಕುಮಟಾ‌: ದೆಹಲಿಯಲ್ಲಿ UPSC ಪರೀಕ್ಷೆ ಬರೆಯಲು ಹೋಗಿದ್ದ ಯುವಕನೋರ್ವ ಪರೀಕ್ಷೆಗೆ ತಡವಾಗಿ ಬಂದ ಕಾರಣಕ್ಕಾಗಿ ಪರೀಕ್ಷೆಗೆ ಅವಕಾಶ ನೀಡಿರದ ಘಟನೆ‌ ವಿದ್ಯಾರ್ಥಿಯ ಸಾವಿನೊಂದಿಗೆ ಅಂತ್ಯವಾಗಿದೆ. ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕಾಗಿ ಇದರಿಂದ ಬೇಸತ್ತು ಯುವಕ ಆತ್ಮಹತ್ಯೆಗೆ ಶರಣಾಗಿದ್ದ. ಆ ಯುವಕ ಕುಮಟಾದ ಎವಿ ಬಾಳಿಗಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ, ವಿಜ್ಞಾನಿ ಡಾ. ಸುಭಾಸ್ ಚಂದ್ರ ಅವರ ಪುತ್ರ ವರುಣ್ ಚಂದ್ರ.

ದೇಶದ ನಾಗರಿಕ ಸೇವೆಯ ಉನ್ನತ ಪರೀಕ್ಷೆಗಳಲ್ಲಿ ಒಂದಾದ UPSC ಪರೀಕ್ಷೆ ಬರೆಯಲು ವರುಣ್ ದೆಹಲಿಗೆ ತೆರಳಿದ್ದರು. ಪರೀಕ್ಷೆ ಉತ್ತಮವಾಗಿ ಮಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಅಧಿಕಾರಿಯಾಗಿ ಕೆಲಸ ಮಾಡಬೇಕು ಎಂದು ಬಹಳ ಕನಸು ಹೊಂದಿದ್ದ ವರುಣ್, ಪರೀಕ್ಷೆ ದಿನ ಪರೀಕ್ಷಾ ಕೊಠಡಿಗೆ ಕೇವಲ 4-5 ನಿಮಿಷ ತಡವಾಗಿ ಬಂದಿದ್ದರು. ಆದರೆ ಅಧಿಕಾರಿಗಳು ತಡವಾಗಿ ಬಂದನೆಂಬ ಕಾರಣಕ್ಕೆ ಆತನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ ಎಂಬ ಮಾಹಿತಿ ಇದೆ. ಎಷ್ಟೇ ವಿನಂತಿಸಿದರೂ ಕೂಡ ಅಧಿಕಾರಿಗಳು ಅವರನ್ನು ಒಳಗೆ ಬಿಡಲಿಲ್ಲ.

RELATED ARTICLES  ಮೇ ೯ ರಂದು ಕಾಗಾಲದಲ್ಲಿ ಅಪರೂಪದ ಕಾಮಧೇನು ನಾಗಪುನರ್ ಪ್ರತಿಷ್ಠಾಪನೆ.

ಇದರಿಂದ ಬಹಳ ನೊಂದುಕೊಂಡ ವರುಣ್ ಚಂದ್ರ, ತಾನು ತಂಗಿದ್ದ ಹೋಟೆಲಿಗೆ ವಾಪಸಾಗಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪತ್ರ ಬರೆದಿಟ್ಟಿರುವ ವರುಣ್​, ಲೇಟ್​ ಆಗಿ ತಲುಪಿದ್ದಕ್ಕೆ ಪರೀಕ್ಷೆಗೆ ಬರೆಯಲು ಅವಕಾಶ ನೀಡಲಿಲ್ಲ. ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಯುಪಿಎಸ್​ಸಿ ಎಚ್ಚೆತ್ತುಕೊಂಡು ಇನ್ನು ಮುಂದಾದರೂ ಇಂತಹ ಕಠಿಣ ನಿಯಮಗಳನ್ನು ಸಡಿಲಿಸುವಂತಾಗಲಿ ಎಂದು ಆಶಿಸುತ್ತೇನೆ ಎಂದು ವರುಣ್ ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

RELATED ARTICLES  ಪುರಸಭೆ ಚುನಾವಣಾ ಫಲಿತಾಂಶ : ಯಾವ ತಾಲೂಕಿನಲ್ಲಿ ಯಾವ ಪಕ್ಷದ ಪ್ರಾಭಲ್ಯ ಗೊತ್ತೇ?

ಈತನೊಬ್ಬನೇ ಅಲ್ಲ, ಗಮನಾರ್ಹವೆಂದರೆ ಹೀಗೆ ಪರೀಕ್ಷೆಗೆ ತಡವಾಗಿ ಬಂದ ಅನೇಕ ಅಭ್ಯರ್ಥಿಗಳನ್ನು ವಾಪಸ್​ ಕಳುಹಿಸಲಾಗಿದೆ.