ಶಿರಸಿ: ಸೋಂದಾದ ಬಾಡ್ಲಕೊಪ್ಪ ಬಳಿ ಇರುವ ಮುಂಡಿಗೆಕೆರೆ ಪಕ್ಷಿಗಳ ತವರೂರಾಗಿದೆ. ಇಲ್ಲಿನ 5 ಎಕರೆ ವಿಸ್ತಿರ್ಣದ ಕೆರೆ ಮುಂಡಿಗೆ ಸಸ್ಯ ರಾಶಿಯಿಂದ ತುಂಬಿದೆ. ಸದಾ ಜಲ ಸಮದ್ಧಿ ಇರುವ ಮುಂಡಿಗೆ ಕೆರೆಯು ಪಕ್ಷಿಧಾಮ ಎನಿಸಿಕೊಂಡಿದೆ. ಸೋಂದಾ ಜಾಗತ ವೇದಿಕೆಯು ಮುಂಡಿಗೆ ಕೆರೆಗೆ ರಕ್ಷಾಕವಚದಂತೆ ಕಾರ್ಯ ನಿರ್ವಹಿಸುತ್ತಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ಮುಂಡಿಗೆಕೆರೆಯ ಸುತ್ತ ಬೆಟ್ಟ, ಕಾಡು, ಅಡಿಕೆ ತೋಟ, ಕಾಸಾಪಾಲ, ಬಾಡ್ಲಕೊಪ್ಪ ಎಂಬ ಹಳ್ಳಿಗಳು ಇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಳಿವಿನಂಚಿನಲ್ಲಿರುವ ಮುಂಡಿಗೆ ಸಸ್ಯ ಬೃಹತ್ ಪ್ರಮಾಣದಲ್ಲಿ ಉಳಿದಿರುವದೆಂದರೆ ಅದು ಸೋಂದಾದ ಮುಂಡಿಗೆಕೆರೆಯಲ್ಲಿ ಮಾತ್ರ. ಕೆರೆಯ 4.14 ಎಕರೆ ಕ್ಷೇತ್ರವನ್ನು ಮುಳ್ಳಿನಿಂದ ಕೂಡಿದ ಎಲೆಗಳನ್ನು ಹೊಂದಿದ ಮುಂಡಿಗೆ ಗಿಡ ಸಂಪೂರ್ಣವಾಗಿ ಆಕ್ರಮಿಸಿದೆ. ಪೊದೆ-ಪೊದೆಯಾಗಿ ಬೆಳೆದ ಗಿಡಗಳ ಮೇಲೆ ಬೆಳ್ಳಕ್ಕಿಗಳಿಗೆ ಹಾಗೂ ಇತರ ಪಕ್ಷಿಗಳಿಗೆ ಗೂಡು ಕಟ್ಟಲು ಸುರಕ್ಷಿತ ತಾಣವಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಬೆಳ್ಳಕ್ಕಿಗಳು ತಮ್ಮ ಸಂತಾನಾಭಿವೃಧ್ಧಿಗೆ ಗೂಡು ಕಟ್ಟುವ ಏಕೈಕ ಸ್ಥಳ ಇದಾಗಿದೆ.

RELATED ARTICLES  ಶ್ರೀ ಶ್ರೀ ರೇಣುಕಾ ಮಾತಾಜಿಯವರಿಗೆ ಗೋಕರ್ಣ ಗೌರವ.

ಪಕ್ಷಿಪ್ರಿಯರ ತಾಣವಾದ ಸೋಂದಾದ ಮುಂಡಿಗೆಕೆರೆ ಪಕ್ಷಿಧಾಮದಲ್ಲಿ ಇದೀಗ ಬೆಳ್ಳಕ್ಕಿಗಳ ಕಲರವ ಮನೆ ಮಾಡಿದೆ. ದಿನವಿಡಿ ಇವುಗಳ ಆಗಮನ ನಿರ್ಗಮವನ್ನು ವೀಕ್ಷಣಾ ಗೋಪುರದಿಂದ ನೋಡುವುದು ಪಕ್ಷಿ ಪ್ರಿಯರಿಗೆ ಒಂದು ಸಂಭ್ರಮವಾಗಿದೆ.

ಪ್ರತಿ ವರ್ಷ ಮಾನ್ಸೂನ ಆಗಮನದ ಸಂದೇಶ ಹೊತ್ತು ಬೆಳ್ಳಕ್ಕಿಗಳ ಮುಂಡಿಗೆ ಕೆರೆಗೆ ಗುಂಪು ಗುಂಪಾಗಿ ಇಳಿಯುತ್ತದೆ. ಇವು ಕೆರೆಗೆ ಇಳಿದ 5ರಿಂದ 6 ದಿನಗಳಲ್ಲಿ ಮಳೆ ಪ್ರಾರಂಭ ಎಂಬುದು ಈ ಭಾಗ್ಯದ ರೈತರ ನಂಬಿಕೆ. ನೂರಾರು-ವರ್ಷಗಳಿಂದ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿಯ ಮುಂಡಿಗೆಕೆರೆ ಪಕ್ಷಿಗಳು ಬಂದು ಮಳೆಗಾಲದಲ್ಲಿ ಮುಂಡಿಗೆ ಗಿಡಗಳ ಮೇಲೆ ಗೂಡು ಕಟ್ಟಿ-ಮೊಟ್ಟೆ ಇಟ್ಟು-ಮರಿ ಮಾಡಿಕೊಂಡು ಹಾರಿಹೋಗುವ ಪರಿಪಾಠ ನಿಯಮಿತವಾಗಿ ನಡೆದುಕೊಂಡು ಬಂದಿದೆ.

RELATED ARTICLES  ಗೋಳಿ ಪ್ರೌಢಶಾಲೆಯಲ್ಲಿ ನಡೆದ “ವಿಶ್ವ ಯೋಗ ದಿನಾಚರಣೆ”

ಮಾನ್ಸೂನ್ ಆರಂಭವಾಗುವ ಪೂರ್ವದಲ್ಲಿ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಬಂದು ಕೆರೆಗೆ ಇಳಿದು ಗೂಡು ಕಟ್ಟಲು ಯೋಗ್ಯ ಸ್ಥಳದ ಆಯ್ಕೆ ಮಾಡಿ ಕೊಳ್ಳುತ್ತೇವೆ. ಇದು ಕೆರೆಗೆ ಇಳಿದ 5-6 ದಿನದಲ್ಲಿ ಮಳೆ ನಿಶ್ಚಿತ. ಕಾರಣ ರೈತರು ಬೆಳ್ಳಕ್ಕಿಗಳು ಕೆರೆಗೆ ಇಳಿದ ನಂತರ ಉಳುಮೆ ಕಾರ್ಯಕ್ಕೆ ತೊಡಗುವದು ಹಿಂದಿನಿಂದಲೂ ನಡೆದು ಕೊಂಡು ಬಂದಿದೆ. ಮಾನ್ಸೂನ್ ವಿಳಂಬವಾದರೆ ಇವುಗಳು ಕೆರೆಯಲ್ಲಿ ವಸತಿ ಮಾಡುವದಿಲ್ಲ. ಮುಂಗಾರು ತರುವ ಬೆಳ್ಳಕ್ಕಿಗಳು ಬಂದಿಲ್ಲ, ಹಾಗಾಗಿ ಉಳುಮೆ ಮುಂದಿನವಾರ ಪ್ರಾರಂಭಿಸುವ ಎಂಬುದು ಸೋಂದಾ ಕೃಷಿಕರ ಮನೆಮಾತು. ಈ ವರ್ಷ ಚಂಡಮಾರುತ ಪ್ರಭಾವ ಇದ್ದರೂ ಮೇ 21ರಿಂದಲೇ ಕೆರೆಯ ಮೇಲ್ಗಡೆ ಹಾರಾಟ ನಡೆಸಿ ವಾಪಸ್ಸು ಹೋಗುತ್ತವೆ. ಇವನ್ನು ನೋಡಲೆಂದೇ ಪ್ರವಾಸಿಗಳ ದಂಡು ಮುಂಡಿಗೆಕೆರೆಗೆ ಆಗಮಿಸುತ್ತಿದೆ.