ಯುವಾ ಬ್ರಿಗೇಡ್ ಶಿರಸಿ ತಾಲೂಕು ವತಿಯಿಂದ ಇಂದು ಯಡಳ್ಳಿಯಲ್ಲಿ ಮಿಡ್_ಡೆ_ಫ್ರೂಟ್ (#MidDayFruit) ಅಭಿಯಾನಕ್ಕೆ ಚಾಲನೆ ನೀಡಲಾಯಿತು.

#MidDayFruit ಯುವಾಬ್ರಿಗೇಡ್ ನ ವಿಶಿಷ್ಟವಾದ ಕಲ್ಪನೆಯಾಗಿದೆ. ನಮ್ಮ‌ ಸುತ್ತಮುತ್ತಲಿನ  ಶಾಲೆಗಳಲ್ಲಿ ಈ ಮಳೆಗಾಲದ ವೇಳೆ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಹೊತ್ತಲ್ಲಿ ಪೌಷ್ಟಿಕ ಆಹಾರವೂ ಆಗುತ್ತದೆ ಎಂಬುದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಲಾಗಿದೆ. ಕಸಿ ಮಾಡಿದ ಮಾವು-ಹಲಸು-ನೇರಳೆ-ಸೀತಾಫಲಗಳೆಲ್ಲ ಬಲು ಬೇಗ ಫಲ ಕೊಟ್ಟು ಬಾಗಿ ನಿಲ್ಲುತ್ತವೆ. ಶಾಲೆಯ ಮಕ್ಕಳು ಆಟ-ಪಾಠಗಳ ಜೊತೆಗೆ ಹಣ್ಣುಗಳನ್ನೂ-ಮರದ ನೆರಳನ್ನೂ ಆಸ್ವಾದಿಸಬಹುದಾಗಿದೆ.

RELATED ARTICLES  ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಹಾಗೂ ಭಟ್ಕಳ ತಾಲೂಕಾಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸಂಪನ್ನವಾಯಿತು ಸಂಭ್ರಮದ ರಾಜ್ಯೋತ್ಸವ

ಸರ್ಕಾರ MID DAY MEAL(ಮಧ್ಯಾಹ್ನದ ಬಿಸಿ ಊಟ)  ಕೊಡುವಂತೆ; ವಿದ್ಯಾರ್ಥಿಗಳಿಗೆ MID DAY FRUIT(ಮಧ್ಯಾಹ್ನ ರುಚಿರುಚಿಯಾದ ಹಣ್ಣು) ಸಿಗುವ ವ್ಯವಸ್ಥೆ ಆಗಲಿ ಎಂಬುದು ಯುವಾ ಬ್ರಿಗೇಡ್ ಸಂಘಟನೆಯ ಆಶಯವಾಗಿದೆ.

ವಿಶ್ವ ಪರಿಸರ ದಿನವೂ ಆದ ಇಂದು ಶಿರಸಿ ತಾಲೂಕಿನ ಯಡಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮಾವು, ಹಲಸು, ಬೆಣ್ಣೆ ಹಣ್ಣು, ಮುರುಗಲು ಮತ್ತಿತರ ಹಣ್ಣಿನ ಮರದ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನವನ್ನು ಆಚರಿಸುವುದರ ಜೊತೆಗೆ ಮಿಡ್_ಡೆ_ಫ್ರೂಟ್ ಎಂಬ ಯುವಾ ಬ್ರಿಗೇಡಿನ ವಿನೂತನ ಮತ್ತು ಬಹುಪಯೋಗಿ ಯೋಜನೆಯ ಶುಭಾರಂಭ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗೌರಿ ಮಹಿಳಾ ಸಮಾಜದವರು ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ #MidDayFruit ಯೋಜನೆಯ ಕುರಿತು ಹಾಗೂ ಗಿಡಗಳ ಪಾಲನೆ ಪೋಷಣೆಗಳ ಕುರಿತು ಮುದ್ದು ಮಕ್ಕಳಿಗೆ ತಿಳಿಸಿಕೊಡಲಾಯಿತು. 

RELATED ARTICLES  ಮೀನು ಮಾರುಕಟ್ಟೆ ಕಾಮಗಾರಿ ವಿಳಂಬ: ಮೀನು ಮಾರಾಟಗಾರರ ಪ್ರತಿಭಟನೆ.

ಶಿರಸಿ ತಾಲೂಕು ಯುವಾ ಬ್ರಿಗೇಡ್ ಸಂಚಾಲಕರಾದ ಹರೀಶ್ ಧೂಳಳ್ಳಿ, ಶಿಶಿರ್ ಅಂಗಡಿ, ರಾಘವೇಂದ್ರ ರಾಗಿಹೊಸಳ್ಳಿ, ಶ್ರವಣಕುಮಾರ್, ಕುಮಾರ್ ಪಟಗಾರ್, ರಾಕೇಶ್, ಮಂಗೇಶ್, ಮತ್ತಿತ್ತರು ಪಾಲ್ಗೊಂಡಿದ್ದರು.