ಕುಮಟಾ: “ ಜೂನ್ 5 ವಿಶ್ವ ಪರಿಸರ ದಿನಾಚರಣೆ ಇಂತಹ ದಿನಾಚರಣೆಗಳು ದಿನಾ ಆಚರಣಗೆ ಬಂದಾಗ ಪರಿಸರ ಉಳಿಯಲು ಸಾಧ್ಯವಿದೆ ಅಲ್ಲದೇ ಪರಿಸರ ಸಂರಕ್ಷಣೆಯ ಗುರುತರ ಜವಾಬ್ದಾರಿ ಮನುಷ್ಯ ಜೀವಿಯ ಮೇಲಿದೆ ಪರಿಸರ ರಕ್ಷಣೆಯಿಂದ ಆಗುವ ಪ್ರಯೋಜನಗಳನ್ನು ಅರ್ಥೈಸಿಕೊಂಡಾಗ ಇಂತಹ ದಿನಾಚರಣೆಗಳಿಗೆ ಮಹತ್ವ ಬರುತ್ತದೆ ” ಎಂದು ಗುರುರಾಜ ನಾಯಕ ಆರೋಗ್ಯ ಕವಚ 108 ಜಿಲ್ಲಾ ವ್ಯವಸ್ಥಾಪಕರು ನುಡಿದರು,
ಅವರು ಹಿರೇಗುತ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆರೋಗ್ಯ ಕವಚ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಗಿಡ ನೆಟ್ಟು ಮಾತನಾಡಿದರು “ಪ್ಲಾಸ್ಟಿಕ ಮುಕ್ತ ಪರಿಸರ ನಮ್ಮದಾಗಬೇಕು, ಈ ಪ್ರಕೃತಿ ಮನುಷ್ಯನ ಎಲ್ಲಾ ಶೋಷಣೆಗಳನ್ನು ಅನುಭವಿಸಿದೆ, ಪ್ರಕೃತಿ ಮಾತೆ ಮುನಿದರೆ ಮನುಷ್ಯನ ಅಳಿವಿಗೆ ಅರೆಕ್ಷಣ ಸಾಕು. ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದರು”
ಡಾ! ಗಿರೀಶ ನಾಯ್ಕ ಮಾತನಾಡಿ “ ಮನುಷ್ಯ ಇರುವುದು ಪ್ರಕೃತಿಯ ಮಾತೆಯ ಸೆರೆಗಲ್ಲಿ, ಈ ಪ್ರಕೃತಿ ಮನುಷ್ಯನಿಗೆ ಎಲ್ಲ ಸೌಕರ್ಯವನ್ನು ನೀಡಿದೆ ಈ ಪ್ರಕೃತಿಯಲ್ಲಿ ಅಂದವುಂಟು-ಚೆಂದವುಂಟು ಪ್ರಕೃತಿಯನ್ನು ನಾವು ಸರಿಯಾಗಿ ಬಳಸಿದರೆ ಅಮರತ್ವವು ಉಂಟು” ಎಂದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿಗಳಾದ ಸುನೀತಾ, ಜ್ಯೋತಿ, ಮಾದೇವ ನಾಯ್ಕ, ಹಾಗೂ ಆರೋಗ್ಯ ಕವಚ ಸಿಬ್ಬಂದಿಗಳಾದ ನಾಗರಾಜ ನಾಯಕ, ಸುನೀತಾ ಹಾಗೂ ಹಿರೇಗುತ್ತಿ ಊರಿನ ಮಂಜುನಾಥ ಜಿ. ನಾಯಕ, ಹರೀಶ ಬಿ. ನಾಯಕ ಇತರರು ಉಪಸ್ಥಿತರಿದ್ದರು.
-ಎನ್. ರಾಮು ಹಿರೇಗುತ್ತಿ