ಕಾರವಾರ: ಕೆನರಾ ಬ್ಯಾಂಕ್ ಆರ್‍ಸೆಟ್ ಸಂಸ್ಥೆ(ರಿ) ಹಳಿಯಾಳ ಇವರು ಅಗಷ್ಟ ತಿಂಗಳಲ್ಲಿ ಜರುಗಲಿಸಿರುವ ಅಗ್ರೀ ಕ್ಲೀನಿಕ್ ಮತ್ತು ಅಗ್ರೀ ಬಿಸಿನೆಸ್ ತರಬೇತಿಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ.

ತರಬೇತಿಗಳು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತವೆ. ಅರ್ಜಿ ಸಲ್ಲಿಸಬಯಸುವವರು ಕೃಷಿ ವಿಷಯದಲ್ಲಿ ಡಿಪ್ಲೋಮಾ, ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.. ತರಬೇತಿಯ ನಂತರ ಕೃಷಿಯಲ್ಲಿ ಸ್ವಾವಲಂಬನೆ ಹೊಂದಲು ಬೇಕಾದ ಬ್ಯಾಂಕ್ ನೆರವನ್ನು ಪಡೆಯಲು ಸಹಾಯ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ಸಂಸ್ಥೆ(ರಿ), ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ, ದೂರವಾಣಿ ಸಂಖ್ಯೆ 08284-220807, ಮೊ.ನಂ 94834885489, 9482188780 ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES  ಚಂದ್ರಗ್ರಹಣ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ದೇವರ ದರ್ಶನ/ಪೂಜಾ ಸಮಯದಲ್ಲಿ ಬದಲಾವಣೆ