ಅಂಕೋಲಾ : ಇಲ್ಲಿಯ ಬಸ್ ನಿಲ್ದಾಣ ಹೈಟೆಕ್ ಆಗುತ್ತಿದ್ದು ಅದರ ಕಾಮಗಾರಿಯನ್ನು ಕಾರವಾರ ಸ್ವೀಟ್ ಹೊಮ್ ಕನ್‍ಸ್ಟ್ರಕ್ಷನನ ಶಿವಾನಂದ ಶೆಟ್ಟಿಯವರು ಪಡೆದಿದ್ದರು. ಕಳೆದ ಮೂರು ತಿಂಗಳಿನಿಂದ ಇಲ್ಲಿ ಕಾಮಗಾರಿ ನಡೆಯುತ್ತಿದ್ದು ಮಂಗಳವಾರ ಈ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ನಿಲ್ದಾಣದ ಕಾಮಗಾರಿ ನಡೆಯುವ ಸ್ಥಳಕ್ಕೆ ಬೇಟಿ ನಿಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿರುವ ಕಾಮಗಾರಿಯ ಕುರಿತು ಸ್ಥಳೀಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರಲ್ಲದೆ ನಡೆದಿರುವ ಸಂಪೂರ್ಣ ಕಾಮಗಾರಿಯು ಕಳಪೆಯಾಗಿರುವುದನ್ನು ಕಂಡು ಬೇಸರ ವ್ಯಕಪಡಿಸಿದರು. ಈ ಸಂದರ್ಬದಲ್ಲಿ ಕಳಪೆ ಕಾಮಗಾರಿ ಆಗಿರುವುದನ್ನು ಕಂಡು ತಕ್ಷಣದಲ್ಲಿಯೆ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಲು ಆದೇಶಿಸಿದರು. ಹಾಗೂ ಘಟಕ ವ್ಯವಸ್ಥಾಪಕರಿಗೆ ಕೂಡಲೆ ಕಾಮಗಾರಿಯನ್ನು ಗುತ್ತಿಗೆ ಪಡೆದವರಿಂದ ಇಲ್ಲಿಯ ಸಂಪೂರ್ಣ ಮಾಹಿತಿಯನ್ನು ಒದಗಿಸಲು ಸೂಚಿಸಿದರು ಎನ್ನಲಾಗಿದೆ.ಈ ಸಂದರ್ಭದಲ್ಲಿ ಸೌಚಾಲಯವನ್ನೂ ಪರಿಶೀಲನೆ ನಡೆಸಿದ ಅವರು ಅಲ್ಲಿಯ ಅವ್ಯವಸ್ಥೆ ಹಾಗೂ ಸ್ವಚ್ಚತೆಯ ಕುರಿತು ಘಟಕ ವ್ಯವಸ್ಥಾಪಕರಿಗೆ ತರಾಟೆ ತೆಗೆದುಕೊಂಡರು. ಬಸ್ ನಿಲ್ದಾಣ ಆವರಣ ಸಂಪೂರ್ಣವಾಗಿ ಸ್ವಚ್ಚತೆಯಿಂದ ಇಡಲು ಸೂಚಿಸಿದರು.

RELATED ARTICLES  ಗೋ ಹಂತಕರ ಬಂಧನಕ್ಕೆ ಹಿಂದೂ ಸಂಘಟನೆಯಿಂದ ಹೆಚ್ಚಿದ ಆಗ್ರಹ : ಮನವಿ ಸಲ್ಲಿಕೆ

ಈ ಸಂದರ್ಭಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ಅಂಕೋಲಾ ತಾಲೂಕಿನ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಯು ಅವೈಜ್ಞಾನಿಕವಾಗಿ ನಡೆಯುತ್ತಿದೆ. ಇಲ್ಲಿ ಪಿಲ್ಲರ್‍ಗಳಿಗೆ ಉಪಯೋಗಿಸಿದ ಎಲ್ಲಾ ಕಂಬಿಗಳು ಸಮರ್ಪಕಾಗಿ ಅಳವಡಿಸಿಲ್ಲ. ಆದ ಕಾರಣ ಇಲ್ಲಿ ನಡೆಯುತ್ತಿರುವ ಕೆಲಸವನ್ನು ನಿಲ್ಲಿಸಲಾಗಿದೆ. ಗುತ್ತಿಗೆದಾರರಿಂದ ಇಲ್ಲಿ ನಡೆದಿರುವ ಕೆಲಸದ ಕುರಿತು ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

RELATED ARTICLES  ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಂಪನ್ನ

ಪ್ರಮುಖರಾದ ಗಣಪತಿ ಉಳ್ವೇಕರ, ಜಿಪಂ ಸದಸ್ಯ ಜಗದೀಶ ನಾಯಕ, ಬಾಸ್ಕರರ್ವೇಕರ, ಜಯಾ ನಾಯ್ಕ, ಹುವಾ ಖಂಡೇಕರ, ಬಾಲಕೃಷ್ಣ ನಾಯ್ಕ, ಅರುಣಕುಮಾರ ನಾಯ್ಕ ನಿಲೇಶ ನಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.